ದೇಶದಲ್ಲಿ ಏರಿಕೆ ಕಂಡ ನಿರುದ್ಯೋಗ ದರ: ಸಿಎಂಐಇ ಅಂಕಿಅಂಶ ಬಿಡುಗಡೆ

ನವದೆಹಲಿ: ಭಾರತದ ನಿರುದ್ಯೋಗ ದರ ಮಾರ್ಚ್‌ ತಿಂಗಳಿನಿಂದ ಏಪ್ರಿಲ್ ತಿಂಗಳಿನಲ್ಲಿ ಹೆಚ್ಚಳವಾಗಿದ್ದು, ಶೇ.7.60 ರಿಂದ  ಶೇ.7.83ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರ್ಥಿಕ ಮೇಲ್ವಿಚಾರಣೆ ಸಂಸ್ಥೆ (ಸಿಎಂಐಇ) ಇಂದು(ಮೇ 2) ಬಿಡುಗಡೆ ಮಾಡಿರುವ ಅಂಕಿಅಂಶದಿಂದ ತಿಳಿದು ಬಂದಿದೆ.

ಇದರೊಂದಿಗೆ ದೇಶದ ನಿರುದ್ಯೋಗ ದರವು ಒಂದು ತಿಂಗಳ ಅವಧಿಯಲ್ಲಿ ಶೇ 0.23ರಷ್ಟು ಹೆಚ್ಚಳ ಕಂಡಿದೆ. ನಗರ ಪ್ರದೇಶದ ನಿರುದ್ಯೋಗ ದರ ಶೇ. 8.28ರಿಂದ ಶೇ. 9.22ಕ್ಕೆ ಏರಿಕೆಯಾಗಿದ್ದರೆ. ಗ್ರಾಮೀಣ ನಿರುದ್ಯೋಗ ದರ ಶೇ. 7.29ರಿಂದ ಶೇ. 7.18ಕ್ಕೆ ಇಳಿಕೆ ಕಂಡಿರುವುದಾಗಿ ಅಂಕಿಅಂಶ ವಿವರಿಸಿದೆ.

ನಿರುದ್ಯೋಗ ದರದಲ್ಲಿ ಹರಿಯಾಣ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ನಿರುದ್ಯೋಗ ದರ ಶೇ 2.7ರಷ್ಟಿದೆ. ನಿರುದ್ಯೋಗ ಪ್ರಮಾಣ ಕ್ರಮವಾಗಿ ಹರ್ಯಾಣ ಶೇ.34.5 ವರದಿಯಾಗಿದ್ದು, ರಾಜಸ್ಥಾನದಲ್ಲಿ ಶೇ.28.8ರಷ್ಟು ದಾಖಲಾಗಿದೆ. ಬಿಹಾರದಲ್ಲಿ ಶೇ.21.1ರಷ್ಟು, ಜಮ್ಮು-ಕಾಶ್ಮೀರದಲ್ಲಿ ಶೇ.15.6ರಷ್ಟು, ಗೋವಾದಲ್ಲಿ ಶೇ.15.5. ಹಿಮಾಚಲ ಪ್ರದೇಶದ ದೇಶದಲ್ಲಿಯೇ ಅತೀ ಕಡಿಮೆ ಪ್ರಮಾಣದ (ಶೇ.02) ನಿರುದ್ಯೋಗ ದರ ದಾಖಲಾಗಿರುವುದಾಗಿ ವರದಿ ಹೇಳಿದೆ.

ನಿಧಾನಗತಿಯ ದೇಶಿಯ ಬೇಡಿಕೆ ಮತ್ತು ಹೆಚ್ಚುತ್ತಿರುವ ಬೆಲೆ ಏರಿಕೆ ನಡುವೆ ಆರ್ಥಿಕ ಚೇತರಿಕೆ ಕೂಡಾ ಮಂದಗತಿಯಲ್ಲಿರುವ ಪರಿಣಾಮ ಉದ್ಯೋಗಾವಕಾಶದ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಮಾರ್ಚ್ ನಲ್ಲಿ ಸಗಟು ಹಣದುಬ್ಬರ ಶೇ.6.95ಕ್ಕೆ ಏರಿಕೆಯಾಗಿದ್ದು, ಇದು ಕಳೆದ 17 ತಿಂಗಳಲ್ಲಿನ ಗರಿಷ್ಠ ಪ್ರಮಾಣದ್ದಾಗಿತ್ತು. ಈ ವರ್ಷಾಂತ್ಯದಲ್ಲಿ ಸಗಟು ಹಣದುಬ್ಬರ ಶೇ.7.5ಕ್ಕೆ ಹೆಚ್ಚಳವಾಗುವ ಸಾಧ್ಯತೆ ಎಂದು ಆರ್ಥಿಕ ತಜ್ಞ ಶಿಲಾನ್ ಶಾ ಅವರ ಅಭಿಪ್ರಾಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *