ಬೆಂಗಳೂರು : ಅಸಂಘಟಿತ ಕಾರ್ಮಿಕರಿಗಾಗಿ ಶ್ರಮಿಕ ಕ್ಲಿನಿಕ್ ನ್ನು ಶ್ರೀಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಸಿ.ಎನ್. ಮಂಜುನಾಥ್ ಉದ್ಘಾಟಿಸಿದರು.
ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಾ, ಬೆಂಗಳೂರಿನಲ್ಲಿ ಶ್ರಮಿಕರಿಗಾಗಿ ಆರಂಭಿಸಿಲಾದ ಈ ಕ್ಲಿನಿಕ್ ಇಡೀ ರಾಜ್ಯಕ್ಕೆ ಒಂದು ಮಾದರಿಯಾಗಿದ್ದು ಇದಕ್ಕೆ ಸಂಘಟಿತ ಕಾರ್ಮಿಕ ವರ್ಗ ಸಹಕಾರ ನೀಡುತ್ತಿರುವುದು ಪ್ರಶಂಸನೀಯ ಎಂದರು.
ಮುಖ್ಯ ಅತಿಥಿಗಳಾಗಿ ಸಿಐಟಿಯು ಅಖಿಲ ಭಾರತ ಉಪಾಧ್ಯಕ್ಷರಾದ ಎ.ಕೆ.ಪದ್ಮನಾಭನ್ ಮಾತನಾಡಿ ಬೆಂಗಳೂರು ಸಿಐಟಿಯು ಸಮಿತಿಗಳು ಕರೋನಾ ಕಾಲಘಟ್ಟದಲ್ಲಿ ಆರಂಭಿಸಲಾದ ಕೊವೀಡ್ ಆಸ್ಪತ್ರೆಯ ಮುಂದುವರೆಸಿ ಅಸಂಘಟಿತ ಕಾರ್ಮಿಕರಿಗಾಗಿ ಈಗ ಕ್ಲಿನಿಕ್ ಆಗಿ ಮುನ್ನಡೆಸುತ್ತಿರುವುದು ಸ್ವಾಗತಾರ್ಹ, ಆರೋಗ್ಯಕ್ಕಾಗಿ ಹೆಚ್ಚಿನಹಣವನ್ನು ವ್ಯಯ ಮಾಡಬೇಕಿರುವ ಈ ಸನ್ನಿವೇಶದಲ್ಲಿ ಇಂತಹ ಉಚಿತ ಕ್ಲಿನಿಕ್ ಗಳ ಸಂಖ್ಯೆ ಹೆಚ್ಚಾಗಲಿ ಎಂದು ಹಾರೈಸಿದರು.
ಶ್ರಮಿಕರ ಕ್ಲಿನಿಕ್ ಸಿಐಟಿಯು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಡಾ ಪೃಥ್ವಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್, ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಡಾ.ಕೆ ಪ್ರಕಾಶ್, ಗೋಪಾಲಗೌಡ, ಪ್ರಧಾನ ಕಾರ್ಯರ್ಶಿಗಳಾದ ಬಿ.ಎನ್.ಮಂಜುನಾಥ್, ಪ್ರತಾಪ ಸಿಂಹ. ಮುಖಂಡರಾದ ಸೆಲ್ವಿ, ಮಂಗಳಮ್ಮ, ಬಸ್ಸಮ್ಮ ಸಿಎನ್ ಶ್ರೀನಿವಾಸ ಸೇರಿದಂತೆ ಅನೇಕರಿದ್ದರು.