ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ ರೆಡ್ಡಿ ಸಂಪುಟದ ಎಲ್ಲಾ 24 ಮಂದಿ ಸಚಿವರು ಗುರುವಾರ(ಎ.07) ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಇಂದು (ಏಪ್ರಿಲ್ 7) ನಡೆಯಲಿರುವ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಅವರು ಎಲ್ಲಾ ಸಚಿವರ ರಾಜೀನಾಮೆಯನ್ನು ಕೇಳಲಿದ್ದಾರೆ ಮತ್ತು ಏಪ್ರಿಲ್ 8 ರಂದು ಹೊಸ ಸಚಿವರ ಪಟ್ಟಿಯೊಂದಿಗೆ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 11 ರಂದು ಬೆಳಿಗ್ಗೆ 11.31 ಗಂಟೆಗೆ ರಾಜ್ಯಪಾಲರು ಹೊಸ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ. 2019 ರಲ್ಲಿ ಮೊದಲ ಕ್ಯಾಬಿನೆಟ್ ಅನ್ನು ರಚಿಸುವಾಗ ಶ್ರೀ ಜಗನ್ ಅವರು “ಈ ಸಚಿವ ಸಂಪುಟದ ಅವಧಿ ಕೇವಲ ಎರಡೂವರೆ ವರ್ಷಗಳು ಎಂದು ಘೋಷಿಸಿದ್ದರು. ಹಾಗಾಗಿ ಈ ತೀರ್ಮಾನಕ್ಕೆ ಬರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕ್ಯಾಬಿನೆಟ್ನಲ್ಲಿ ಆಗಲಿರುವ ಬದಲಾವಣೆಗಳು ಆಂದ್ರ ರಾಜಕಾರಣದಲ್ಲು ಸಾಕಷ್ಟು ಆಸಕ್ತಿಯನ್ನು ಹುಟ್ಟುಹಾಕಿದೆ ಮತ್ತು ಕೆಲವು ಮಂತ್ರಿಗಳನ್ನು ಕೈ ಬಿಡುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಶಿಕ್ಷಣ ಸಚಿವ ಆದಿಮುಲಪು ಸುರೇಶ್ ಅವರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ನೂತನ ಸಚಿವ ಸಂಪುಟದಲ್ಲಿ ಯಾರು ಉಳಿಯುತ್ತಾರೆ ಎಂಬ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾರು ಅಸಮಾಧಾನಗೊಂಡಿಲ್ಲ, ಸಚಿವ ಸ್ಥಾನ ವಂಚಿತರಾದವರು ಹೊಸ ಉತ್ಸಾಹದಿಂದ ಪಕ್ಷಕ್ಕೆ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ ಎಂದು ತಿಳಿಸಿದರು.
ಎರಡೂವರೆ ವರ್ಷದ ನಂತರ ಸಂಪುಟ ಪುನರ್ ರಚನೆಯಾಗುತ್ತಿದ್ದು ಬಹಳಷ್ಟು ಕುತೂಹಲ ಮೂಡಿಸಿದೆ. ಹೊಸ ಸಚಿವರನ್ನು ಹಾಲಿ ಸಚಿವರು ಪ್ರೋತ್ಸಾಹಿಸುತ್ತಾರಾ ಅಥವಾ ಅಸಮಾಧಾನದ ಕಟ್ಟೆ ಒಡೆಯುತ್ತಾರಾ? ಏಪ್ತಿಲ್ 11 ರಂದು ಅ್ಪಷ್ಟ ಚಿತ್ರಣ ಗೊತ್ತಾಗಲಿದೆ.