ಪಠ್ಯಪುಸ್ತಕಗಳ ಪರಿಷ್ಕರಣೆ ಹೆಸರಲ್ಲಿ ಶಿಕ್ಷಣದ ಕೇಸರೀಕರಣದ ಹುನ್ನಾರದ ವಿರುದ್ಧ ಎಸ್.ಎಫ್.ಐ. ಪ್ರತಿಭಟನೆ

ಸಂಪುಟ – 06, ಸಂಚಿಕೆ 08, ಫೇಬ್ರವರಿ, 19, 2012

10

ಶಾಲಾ ಪಠ್ಯಕ್ರಮದ ಪರಿಷ್ಕರಣೆ ಹೆಸರಲ್ಲಿ ಕನರ್ಾಟಕ ರಾಜ್ಯದ ಬಿಜೆಪಿ ಸರಕಾರ ಐದು ಮತ್ತು ಎಂಟನೆ ತರಗತಿಯ ಶಾಲಾ ಪಠ್ಯಕ್ರಮಗಳಲ್ಲಿ ಕೇಸರಿಕರಣದ ಅಂಶಗಳನ್ನು ಸೇರಿಸುತ್ತಿದೆ. ವಿದ್ಯಾಥರ್ಿಗಳ ಬೌದ್ಧಿಕ ಬೆಳವಣಿಗೆ ಮತ್ತು ಶೈಕ್ಷಣಿಕ ಬೆಳವಣಿಗೆಗೆೆ ಅನುಕೂಲಕರವಾದ ವಾತಾವರಣವನ್ನು ಸೃಷ್ಠಿಸುವ ಬದಲಾಗಿ ಪಠ್ಯ ಪುಸ್ತಕಗಳ ಪರಿಷ್ಕರಣೆ ಮೂಲಕ ಇಡೀ ಶಿಕ್ಷಣ ಕ್ಷೇತ್ರವನ್ನು ಕೇಸರಿಕರಣ ಮಾಡಲು ಹೊರಟಿರುವ ಸರಕಾರದ ನಲುವನ್ನು ಖಂಡಿಸಿ ಭಾರತ ವಿದ್ಯಾಥರ್ಿ ಫೆಡರೇಷನ್ (ಎಸ್.ಎಫ್.ಐ) ಸಂಘಟನೆಯ ಕಾರ್ಯಕರ್ತರು ಬೆಂಗಳೂರಿನ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರಕಾರ ಓಚಿಣಠಟಿಚಿಟ ಅಠಣಟಿಛಿಟ ಜಿಠಡಿ ಇಜಣಛಿಚಿಣಠಟಿ ಖಜಜಚಿಡಿಛಿ ಚಿಟಿಜ ಖಿಡಿಚಿಟಿಟಿರ(ಓಅಇಖಖಿ) ಯ ನಿದರ್ೇಶನದ ನೆಪ ಮಾಡಿಕೊಂಡು ಪುರೋಹಿತ ಶಾಹಿ ವಿಚಾರಗಳನ್ನು ಪಠ್ಯಗಳಲ್ಲಿ ತುರುಕಲು ಮುಂದಾಗಿದೆ. ಸಂಘ ಪರಿವಾರದ ಹಿನ್ನೆಲೆ ಇರುವರನ್ನು ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ಸೇರಿಸಲಾಗಿದೆ. ಬ್ರಾಹ್ಮಣ್ಯವನ್ನು ವೈಭವಿಕರಿಸಿ, ಶೂದ್ರರು, ಹಿಂದುಳಿದವರೆಲ್ಲರೂ ಕನಷ್ಠರು ಎನ್ನುವದನ್ನು ಮತ್ತು ಅಲ್ಪ ಸಂಖ್ಯಾತರ ವಿರುದ್ದ ಮೇಲ್ಜಾತಿಯವರನ್ನು ಹಾಗೂ ಬಹು ಸಂಖ್ಯಾತರನ್ನು ಎತ್ತಿ ಕಟ್ಟುವ ಜೀವ ವಿರೋಧಿ ಅಂಶಗಳನ್ನು ಪಠ್ಯಗಳಲ್ಲಿ ತುರುಕಲಾಗುತ್ತಿದೆ. ಈ ಮೂಲಕ ಎಳೆಯ ಮಕ್ಕಳ ಮನಸಿನಲ್ಲಿ ಕೋಮುವಾದಿ-ಜಾತಿವಾದಿ ವಿಷಬೀಜ ಬಿತ್ತಲು ಹವಣಿಸುತ್ತಿದೆ. ಸ್ಥಳೀಯ ಸಂಸ್ಕೃತಿಯ ಹೆಸರಿನಲ್ಲಿ ದಲಿತ, ಶೂದ್ರ, ಬುಡಕಟ್ಟು ಹಾಗೂ ದುಡಿಯುವ ಸಂಸ್ಕೃತಿ ಗಳನ್ನು ಕಡೆಗಣಿಸಿ ಉಗ್ರ ಹಿಂದುತ್ವದ
ಪ್ರತಿಪಾದನೆಗೆ ಯತ್ನಿಸುತ್ತಿದೆ.

ಜಾತಿ-ಧರ್ಮ-ಭಾಷೆ- ಪ್ರದೇಶದ ಸಂಕುಚಿತತೆಯನ್ನು ಮೀರಿ ವಿಶಾಲತೆಯತ್ತ ವಿದ್ಯಾಥರ್ಿಗಳು ತೆರೆದುಕೊಳ್ಳುವಂತೆ ಪಠ್ಯಪುಸ್ತಕಗಳು ರೂಪಗೊಳ್ಳಬೇಕು. ವೈಜಾನಿಕ, ವೈಚಾರಿಕ- ಪ್ರಗತಿಪರ ಚಿಂತನೆಗಳನ್ನು ಪಠ್ಯಪುಸ್ತಕಗಳಿಂದ ತೆಗೆದು ಹಾಕುವ ಪ್ರಯತ್ನ ನಡೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುವ ಪ್ರಗತಿಪರರ, ಶಿಕ್ಷಣ ತಜ್ಞರ, ಚಿಂತಕರ, ಮಕ್ಕಳ ತಜ್ಞರ ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸದೆ ಸಂಘಪರಿವಾರದ ಹಿಡನ್ ಅಜೆಂಡಾವನ್ನು ಸೇರಿಸಲು ಹೊರಟಿದೆ. ಸಂಪೂರ್ಣ ಕೇಸರಿಕರಣದಿಂದ ತುಂಬಿರುವ ಪಠ್ಯಪುಸ್ತಕಗಳನ್ನು ರದ್ದು ಪಡಿಸಬೇಕೆಂದು ಎಸ್.ಎಫ್.ಐ. ಒತ್ತಾಯಿಸುತ್ತದೆ. ಈ ಪಠ್ಯಪುಸ್ತಕ ರಚನಾ ಸಮಿತಿಯು ಸಂವಿಧಾನದ ಮೌಲ್ಯಗಳ ಉಳಿವಿಗಾಗಿ ಕಾರ್ಯ ನಿರ್ವಹಿಸುವುದರ ಬದಲಾಗಿ ಸಂಘಪರಿವಾರದ ‘ಕೇಶವಕೃಪ’ದ ನಿದರ್ೇಶನದಂತೆ ನಡೆದುಕೊಂಡಿರುವುದು ಸ್ಪಷ್ಟವಾಗಿದೆ.

ಎಲ್ಲಾ ರಂಗದ ರಾಷ್ಟ್ರೀಕರಣದ ಬದಲಾಗಿ ಖಾಸಗೀಕರಣವನ್ನು ಉತ್ತೇಜಿಸುವ ಅಂಶಗಳಿವೆ. ಬಂಡವಾಳ ಶಾಹಿಗಳ, ಸಾಮ್ರಾಜ್ಯಶಾಹಿಗಳಿಗೆ ಪೂರಕವಾದ ಅಂಶಗಳನ್ನು ಹೇರಲಾಗುತ್ತಿದೆ. ಆದ್ದರಿಂದ ಶಿಕ್ಷಣದ ಕೇಸರೀಕರಣವನ್ನು ಸಮಥರ್ಿಸಿಕೊಂಡು ಅವಿವೇಕದ ಹೇಳಿಕೆಗಳನ್ನು ನೀಡುತ್ತಿರುವ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೇಸರೀಕರಣದ ಅಂಶಗಳಿರುವ ಪಠ್ಯಪುಸ್ತಕಗಳನ್ನು ತಕ್ಷಣ ರದ್ದುಗೊಳಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ರಾಜ್ಯವ್ಯಾಪಿ ಪ್ರಬಲ ಹೋರಾಟ ನಡೆಸಬೇಕಾಗುತ್ತದೆಂದು ಎಸ್.ಎಫ್.ಐ. ಎಚ್ಚರಿಸುತ್ತಿದೆ.

0

Donate Janashakthi Media

Leave a Reply

Your email address will not be published. Required fields are marked *