ನವದೆಹಲಿ: ಭವ್ಯ ಭಾರತದ ಪರಿಕಲ್ಪನೆಯ ಮೂಲಕ ದೇಶದ ಸಾಂವಿಧಾನಿಕ ಅಡಿಪಾಯವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಆರ್ಎಸ್ಎಸ್ ಮಾಡುತ್ತಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆರೋಪಿಸಿದ್ದಾರೆ.
ಸಂವಿಧಾನದ ಕಲಂ 51ಎ(ಎಫ್) ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಮೌಲ್ಯೀಕರಿಸಲು ಮತ್ತು ಸಂರಕ್ಷಿಸಲು ಅವಕಾಶ ನೀಡುತ್ತದೆ. ನಮ್ಮ ಸಂವಿಧಾನವನ್ನು ರಕ್ಷಿಸಲು ಸಂಕಲ್ಪ ಮಾಡಿ ಎಂದೂ ಅವರು ಟ್ವೀಟ್ ಮಾಡಿದ್ದಾರೆ.
This is a project to undermine the constitutional foundations of Indian Republic.
Art.51A(f) enjoins every citizen, "to value and preserve the rich heritage of our composite culture".
Redouble resolve to safeguard our Constitution. https://t.co/WmrVrXpmod— Sitaram Yechury (@SitaramYechury) March 14, 2022
ಜಾಗತಿಕವಾಗಿ ಭಾರತದ ಕುರಿತು ತಪ್ಪುಕಲ್ಪನೆಗಳನ್ನು ಪ್ರಚುರಪಡಿಸಲಾಗುತ್ತಿದ್ದು, ಇದನ್ನು ಹೋಗಲಾಡಿಸಲು ಸಂಶೋಧಕರು, ಲೇಖಕರ ನೆರವು ಪಡೆಯಲಾಗುವುದು ಎಂದು ಆರ್ಎಸ್ಎಸ್ ಭಾನುವಾರ ಹೇಳಿತ್ತು.