ಭವಿಷ್ಯ ನಿಧಿ ಬಡ್ಡಿದರ ಕಡಿತ: ಶೇಕಡ 8.1ಕ್ಕೆ ಇಳಿಕೆ? – ನಾಲ್ಕು ದಶಕಗಳಲ್ಲೇ ಅತ್ಯಂತ ಕಡಿಮೆ

ನವದೆಹಲಿ: ಇಪಿಎಫ್‌ಒ 2021-22ರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲಾಗಿದೆ. ಸುಮಾರು ನಾಲ್ಕು ದಶಕಗಳ ಕನಿಷ್ಠ ಶೇಕಡಾ 8.1 ಕ್ಕೆ ಇಳಿಸಲು ಇಂದು ಇಪಿಎಫ್‌ಒ ನಿರ್ಧಾರ ಮಾಡಿದೆ. ಮೂಲಗಳ ಪ್ರಕಾರ ಇದು ನಾಲ್ಕು ದಶಕಗಳ ಬಳಿಕ ತೀರಾ ಕಡಿಮೆಯಾದ ಬಡ್ಡಿದರ ಎನ್ನಲಾಗಿದೆ.

ಈ ಬಡ್ಡಿ ದರವು 1977-78ರ ಆರ್ಥಿಕ ವರ್ಷದಿಂದ ಕಡಿಮೆಯಾಗಿದೆ. ಪ್ರಸಕ್ತ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ), ಬಡ್ಡಿ ದರಕ್ಕೆ ಸಂಬಂಧಿಸಿದಂತೆ ಗುವಾಹಟಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಂಡಳಿಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮೊದಲು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಹಣಕಾಸು ಸಚಿವಾಲಯದಿಂದ ಅನುಮೋದನೆ ಪಡೆದ ನಂತರವೇ ಅದರ ಅಂತಿಮ ಘೋಷಣೆ ಮಾಡಲಾಗುವುದು.

ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ  ಕಳೆದ ನಾಲ್ಕು ದಶಕಗಳಲ್ಲಿ ಬಡ್ಡಿದರದಲ್ಲಿ ಏರಿಳಿತಗಳು ಕಂಡುಬಂದಿದೆ. ಆದರೆ ಅದು ಎಂದಿಗೂ ಶೇಕಡಾ 8.25 ಕ್ಕಿಂತ ಕಡಿಮೆ ಆಗಿರಲಿಲ್ಲ. ಅಲ್ಲದೆ, ಕಳೆದೆರಡು ಹಣಕಾಸು ವರ್ಷಗಳಲ್ಲಿ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. 2019-20ನೇ ಹಣಕಾಸು ವರ್ಷದಲ್ಲಿ ಬಡ್ಡಿ ದರವನ್ನು ಶೇಕಡಾ 8.5ಕ್ಕೆ ಇಳಿಸಲಾಗಿತ್ತು. 2020-21ರ ಹಣಕಾಸು ವರ್ಷದಲ್ಲಿಯೂ ಇದನ್ನು ಶೇ 8.5ರಲ್ಲಿ ಮುಂದುವರಿಸಲಾಗಿತ್ತು.

2018-19 ರಲ್ಲಿ 8.65 ಪ್ರತಿಶತ ಬಡ್ಡಿದರವಿತ್ತು. ಹಣಕಾಸು ಸಚಿವಾಲಯವು ಮಂಡಳಿಯ ನಿರ್ಧಾರವನ್ನು ಅನುಮೋದಿಸಿದ ನಂತರ, ಇಪಿಎಫ್‌ಒ ತನ್ನ ಕ್ಷೇತ್ರ ಕಚೇರಿಗಳಿಗೆ 2021-22 ರ ಹೊಸ ದರದಲ್ಲಿ 8.1 ಶೇಕಡಾ ಬಡ್ಡಿ ಆದಾಯವನ್ನು ಚಂದಾದಾರರ ಖಾತೆಗಳಲ್ಲಿ ಕ್ರೆಡಿಟ್ ಮಾಡಲು ನಿರ್ದೇಶನ ನೀಡಲಿದೆ.

ಕಳೆದ ಡಿಸೆಂಬರ್‌ನಲ್ಲಿ ಸುಮಾರು 23.34 ಕೋಟಿ ನೌಕರರ ಭವಿಷ್ಯ ನಿಧಿ ಖಾತೆಗಳಿಗೆ ಪಿಎಫ್‌ ಬಡ್ಡಿದರ ಶೇಕಡಾ 8.50 ಜಮೆ ಮಾಡಲಾಗಿದೆ. 2020-21 ರ ಹಣಕಾಸು ವರ್ಷದ ಪಿಎಫ್‌ ಬಡ್ಡಿದರವು ಸುಮಾರು 23.34 ಕೋಟಿ ನೌಕರರ ಭವಿಷ್ಯ ನಿಧಿ ಖಾತೆಗಳಿಗೆ ಜಮೆ ಮಾಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *