ಪುದುಚೇರಿಯ ಸರ್ಕಾರಿ ಶಾಲೆಯಲ್ಲಿ ಹಿಜಾಬ್‌ ವಿವಾದ: ಪ್ರತಿಭಟಕಾರರ ಖಂಡನೆ

ಆರ್ಯಂಕುಪ್ಪಂ: ಕರ್ನಾಟಕದ ನಂತರ ಹಿಜಾಬ್ ವಿವಾದದ ಈಗ ಪುದುಚೇರಿಯಲ್ಲಿಯೂ ಹರಡುತ್ತಿದೆ. ಇಲ್ಲಿನ ಅರಿಯಾಂಕುಪ್ಪಂ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ ಸ್ಕಾರ್ಫ್ ತೆಗೆಯುವಂತೆ ಹೇಳಲಾಗಿದೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ಬಳಿಕ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ), ತಂಥೈ ಪೆರಿಯಾರ್ ದ್ರಾವಿಡ ಕಳಗಂ ಪ್ರತಿನಿಧಿಗಳು ಹಾಗೂ ಡಿಎಂಕೆ ಪದಾಧಿಕಾರಿಗಳು ಶಾಲೆಗೆ ಭೇಟಿ ನೀಡಿದರು. ವಿದ್ಯಾರ್ಥಿನಿ ತರಗತಿಯೊಳಗೆ ಸ್ಕಾರ್ಫ್ ಧರಿಸಲು ಅವಕಾಶ ನೀಡದಿರುವುದನ್ನು ವಿರೋಧಿಸಿ ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ಮುಸ್ಲಿಂ ಬಾಲಕಿಯೊಬ್ಬಳು ತರಗತಿಗೆ ಹಾಜರಾಗುತ್ತಿದ್ದಾಗ ಹಿಜಾಬ್ ಧರಿಸಿದ್ದಕ್ಕೆ ಶಿಕ್ಷಕಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಪುದುಚೇರಿ ಸರ್ಕಾರದ ಶಾಲಾ ಶಿಕ್ಷಣ ನಿರ್ದೇಶನಾಲಯವು ಇಲ್ಲಿನ ಅರಿಯಾಂಕುಪ್ಪಂನಲ್ಲಿರುವ ಸರ್ಕಾರಿ ಶಾಲೆಯ ಮುಖ್ಯಸ್ಥರನ್ನು ತಿಳಿಸಿದೆ.

ಎಸ್‌ಎಫ್‌ಐ ಪುದುಚೇರಿ ಅಧ್ಯಕ್ಷ ಸ್ವಾಮಿನಾಥನ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಬಾಲಕಿ ತರಗತಿಯಲ್ಲಿ ಹಿಜಾಬ್ ಧರಿಸಿದ್ದಳು. ಆದರೆ ಈಗ ಹೆಣ್ಣು ಹಿಜಾಬ್ ಧರಿಸಿರುವುದಕ್ಕೆ ಈಗ ಏಕೆ ಆಕ್ಷೇಪವಿದೆ ಎಂದು ಪ್ರಶ್ನಿಸಿದರು. ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಫೆಬ್ರವರಿ 4ರ ಶುಕ್ರವಾರದಂದು ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ವಿದ್ಯಾರ್ಥಿನಿ ಹೇಳಿದ್ದಳು. ಮತ್ತೊಂದೆಡೆ, ಶಾಲೆಯ ಕ್ಯಾಂಪಸ್‌ನಲ್ಲಿ ಬಾಲಕಿ ಸ್ಕಾರ್ಫ್ ಧರಿಸುತ್ತಿದ್ದಳು ಆದರೆ ಶುಕ್ರವಾರ ತರಗತಿಯೊಳಗೆ ಹೋದ ಬಳಿಕ ಹಿಜಾಬ್ ಅನ್ನು ಧರಿಸಿದ್ದಳು ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ಈ ಮಧ್ಯೆ, ಶಾಲೆಯ ಹೊರಗೆ ಪ್ರತಿಭಟನೆ ಮುಂದಾದಾಗ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಬಳಿಕ ಪ್ರತಿಭಟನಾಕಾರರು ಶಾಲೆಯ ಆಡಳಿತದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಈ ಘಟನೆ ನಡೆದ ಬಳಿಕ ಶಾಲಾ ಶಿಕ್ಷಣ ನಿರ್ದೇಶನಾಲಯ, ಪುದುಚೇರಿ ಸರ್ಕಾರವು ಅರಿಯಾಂಕುಪ್ಪಂ ಸರ್ಕಾರಿ ಶಾಲೆಯ ಮುಖ್ಯಸ್ಥರನ್ನು ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದೆ.

ಅದೇ ರೀತಿಯಲ್ಲಿ ವೀರಂಪಟ್ಟಿನಂ, ಎಂಬಾಲಂ ಮತ್ತು ತಿರುಕನೂರ್‌ನ ಕೆಲವು ಶಾಲೆಗಳು ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ಸರ್ಕಾರಿ ಶಾಲೆಯಲ್ಲಿ ನಡೆಸಲಾಗುತ್ತಿದೆ. ಅಲ್ಲಿ ಅವರು ನಡೆಸುವ ಹಲವು ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಬೇಕೆಂದು ಪ್ರತಿಭಟನಾಕಾರರ ನಿಯೋಗವು ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *