ಗೋವಾ ವಿಧಾನಸಭೆ: ಕಾಂಗ್ರೆಸ್‌ ಪಕ್ಷದಿಂದ 26 ಮಂದಿ ಚುನಾವಣಾ ವೀಕ್ಷಕರ ನೇಮಕ

ಪಣಜಿ: ಗೋವಾ ವಿಧಾನಸಭೆಗೆ ಚುನಾವಣೆ ಪ್ರಕ್ರಿಯೆಗಳು ನಡೆಯುತ್ತಿದ್ದು, ಅದರ ಭಾಗವಾಗಿ ಕಾಂಗ್ರೆಸ್‌ ಪಕ್ಷದ ಹೈಕಮೆಂಡ್ ಕರ್ನಾಟಕದ 16 ಮಂದಿ ಒಳಗೊಂಡಂತೆ 26 ಮುಖಂಡರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದೆ.

ರಾಜ್ಯದ ಮಾಜಿ ಸಚಿವರಾದ ಆರ್‍.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್‍, ಕೃಷ್ಣ ಬೈರೇಗೌಡ, ಸತೀಶ್‌ ಜಾರಕಿಹೊಳಿ, ಸಂತೋಷ್‌ ಲಾಡ್‍, ರುದ್ರಪ್ಪ ಲಮಾಣಿ, ಶಾಸಕರಾದ ಡಾ.ಅಂಜಲಿ ನಿಂಬಾಳ್ಕರ್‍, ಲಕ್ಷ್ಮೀ ಹೆಬ್ಬಾಳ್ಕರ್‍, ರಿಜ್ಞಾನ್ ಅರ್ಷದ್, ಶ್ರೀನಿವಾಸ ಮಾನೆ, ಗಣೇಶ್‌ ಹುಕ್ಕೇರಿ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಸತೀಶ್‌ ಸೈದಲ್‍, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಐವಾನ್‌ ಡಿಸೋಜಾ, ವಿಜಯ್‌, ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್ ಚುನಾವಣಾ ಉಸ್ತುವಾರಿ ತಂಡದಲ್ಲಿದ್ದಾರೆ.

ಉಳಿದಂತೆ ಮಹಾರಾಷ್ಟ್ರದ ಪ್ರದೇಶ ಕಾಂಗ್ರೆಸ್‍ ಅಧ್ಯಕ್ಷ ನಾನಾ ಪಟೋಲೆ ಸೇರಿದಂತೆ ನೆರೆ ರಾಜ್ಯಗಳ ಅನೇಕ ನಾಯಕರು ವೀಕ್ಷಕರ ತಂಡದಲ್ಲಿದ್ದಾರೆ.

ಕರ್ನಾಟಕದ ಮಾಜಿ ಸಚಿವ ದಿನೇಶ್‍ ಗುಂಡೂರಾವ್‍ ರಾಜ್ಯ ಕಾಂಗ್ರೆಸ್‍ ನ ಉಸ್ತುವಾರಿ ನಾಯಕರಾಗಿದ್ದಾರೆ. ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಗೋವಾ ರಾಜ್ಯ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *