ನಾರಾಯಣಗುರುಗಳ ಸ್ತಬ್ದಚಿತ್ರವನ್ನು ನಿರಾಕರಿಸಿದ ಕೇಂದ್ರ ಸರಕಾರ: ಸಿಪಿಐ(ಎಂ) ಖಂಡನೆ

ಮಂಗಳೂರು: ಜನವರಿ 26ರ ಗಣರಾಜ್ಯೋತ್ಸವದಂದು ನಡೆಯುವ ಪೆರೇಡ್ ಗಾಗಿ ಕೇರಳ ಸರಕಾರ ಆಯೋಜಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ಕೇಂದ್ರ ಸರ್ಕಾರದ ಗಣರಾಜ್ಯೋತ್ಸವ ಸಮಿತಿಯು ತಿರಸ್ಕರಿಸಿರುವುದನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಒಂದೇ ಜಾತಿ, ಒಂದೇ ಮತ, ಒಂದೇ ದೇವರು – ಜಾತಿ ಮತ ಯಾವುದಾದರೇನು ಮನುಷ್ಯ ಒಳ್ಳೆಯವನಾದರೆ ಸಾಕು ಎಂಬ ಅತ್ಯಂತ ಶ್ರೇಷ್ಠವಾದ ಮಾನವೀಯ ಸಂದೇಶವನ್ನು ಜಗತ್ತಿಗೆ ಸಾರಿದ, ಜಾತಿ ತಾರತಮ್ಯ ಮೂಢನಂಬಿಕೆಗಳ ವಿರುದ್ದ ಧ್ವನಿ‌ ಎತ್ತಿ ಸಮಾಜದ ಸುಧಾರಣೆಗೆ ದೊಡ್ಡ ಕೊಡುಗೆ ನೀಡಿದ, ಕೋಟ್ಯಾಂತರ ಜನತೆಯ ಹೃದಯ ಗೆದ್ದ ಮಹಾನ್ ಚೇತನ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ನಿರಾಕರಿಸುವ ಮೂಲಕ ಸಮಾನತೆಯ ಚಿಂತನೆ ಹಾಗೂ ಹಿಂದುಳಿದ ವರ್ಗಗಳ ಸ್ವಾಭಿಮಾನವನ್ನು ಅವಮಾನಿಸಿರುವುದು ಖಂಡನೀಯ ಸಿಪಿಐ(ಎಂ) ಪಕ್ಷವು ತಿಳಿಸಿದೆ.

ಅಲ್ಲದೆ, ಶಂಕರಾಚಾರ್ಯರ ಪ್ರತಿಮೆಯ ಸ್ತಬ್ದಚಿತ್ರವನ್ನು ಮಾಡಲು ಸೂಚಿಸಿರುವುದು ಶ್ರೇಣೀಕೃತ ಜಾತಿ ವ್ಯವಸ್ಥೆಯ ಹಿತಾಸಕ್ತಿಯನ್ನು ಕೇಂದ್ರದ ಬಿಜೆಪಿ ಸರಕಾರ ಹೊಂದಿರುವುದು ಎತ್ತಿ ತೋರಿಸಿದೆ. ಇದು ಆಡಳಿತದಲ್ಲಿ ಆರ್‌ಎಸ್‌ಎಸ್ ಚಿಂತನೆಗಳು ಮೇಲುಗೈ ಸಾಧಿಸಿರುವುದರ ಪರಿಣಾಮವಾಗಿದೆ. ಕೇಂದ್ರ ಸರಕಾರವು ತಕ್ಷಣ ಆಗಿರುವ ಪ್ರಮಾದವನ್ನು ಸರಿಪಡಿಸಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಬೇಕೆಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಯವರು   ಹೇಳಿಕೆಯಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *