– ಟಿ.ಸುರೇಂದ್ರರಾವ್
ಮೋದಿ ಸರ್ಕಾರದ ಆತ್ಮನಿರ್ಭರ್ ಭಾರತ (ಸ್ವಾವಲಂಬನೆ) ಘೋಷಣೆಗೂ ಮತ್ತು ಈಗ ಜಾರಿ ಮಾಡುತ್ತಿರುವ ನೀತಿಗಳಿಗೂ ತಾಳ ತಂತಿ ಏನೂ ಇಲ್ಲ.
ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ಒತ್ತಡಕ್ಕೆ ಮಣಿದು ಎಲ್.ಐ.ಸಿ.ಯಂತಹ ದೇಶೀಯ ದಕ್ಷ ಹಣಕಾಸು ಸಂಸ್ಥೆಯನ್ನು ವಿದೇಶಿ ಕಾರ್ಪೊರೇಟ್ ಕಂಪನಿಗಳಿಗೆ ಧಾರೆಯೆರೆಯಲು ಮೋದಿ ಸರ್ಕಾರ ಸಿದ್ಧತೆ ನಡೆಸಿದೆ. ಎಲ್.ಐ.ಸಿ.ಯಲ್ಲಿ ವಿದೇಶಿ ನೇರ ಬಂಡವಾಳವನ್ನು ಆಹ್ವಾನಿಸಲು ಅಗತ್ಯವಾದ ಕಾನೂನು ತಿದ್ದುಪಡಿಗೆ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಆತ್ಮನಿರ್ಭರದ ನೆಪದಲ್ಲಿ ಕೇಂದ್ರ ಸರ್ಕಾರ ಆತ್ಮವಂಚನೆಗೆ ತೊಡಗಿರುವುದು ಜನರ ದೇಶೀಯ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ನಡೆಯೆಂದೇ ಜನರು ಭಾವಿಸುತ್ತಿದ್ದಾರೆ. ದೇವರು, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದೇಶದ ಜನರನ್ನು ಮರುಳುಗೊಳಿಸಿ, ಆ ಅಮಲಿನಲ್ಲಿ ಇಂತಹ ಜನದ್ರೋಹಿ ದೇಶವಿರೋಧಿ ಕೆಲಸಗಳನ್ನು ಜನರು ಗಮನಿಸಲಾರರು ಎಂದು ಬಿಜೆಪಿ ಸರ್ಕಾರ ಭಾವಿಸಿದಂತಿದೆ. ಆದರೆ ಅವರು ತಿಳಿದಷ್ಟು ಭಾರತದ ಜನರು ದಡ್ಡರಲ್ಲ. ಸರಿಯಾದ ಸಮಯದಲ್ಲಿ ಅವರಿಗೆ ಪಾಠ ಕಲಿಸುತ್ತಾರೆ.