ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಪ್ರಕಟ

ನವದೆಹಲಿ: ಭಾರತದ ಚುನಾವಣಾ ಆಯೋಗವು ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಕ್ಕೆ ಮುಂಬರುವ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಜನವರಿ 8 ರಂದು ಪ್ರಕಟಿಸಿದೆ.

ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ದಿನಾಂಕಗಳನ್ನು ಪ್ರಕಟಿಸಿದ್ದಾರೆ. ಫೆಬ್ರವರಿ 10ನೇ ತಾರೀಕಿನಿಂದ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಫೆ.10 ರಿಂದ ಮತದಾನ ಪ್ರಾರಂಭವಾಗಿ ಮಾ.7 ವರೆಗೆ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು ಮಾ.10 ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ಪಂಜಾಬ್, ಗೋವಾ, ಉತ್ತರಾಖಂಡ್ ಗಳಲ್ಲಿ ಫೆ.14 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದರೆ, ಮಣಿಪುರದಲ್ಲಿ ಫೆ.27 ರಂದು ಮೊದಲ ಹಂತ ಹಾಗೂ ಮಾ.03  ರಂದು 2 ನೇ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ 7 ಹಂತದ ಚುನಾವಣೆ ನಡೆಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

7 ಹಂತಗಳಲ್ಲಿ ಚುನಾವಣೆ : ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಪಂಚರಾಜ್ಯಗಳಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಉತ್ತರ ಪ್ರದೇಶದಲ್ಲಿ ಫೆ10 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಪಂಚ ರಾಜ್ಯದ ಪೂರ್ಣ ಫಲಿತಾಂಶ ಪ್ರಕಟವಾಗಲಿದೆ.

ಫೆ. 14 ರಂದು 2 ನೇ ಹಂತ, ಮೂರನೇ ಹಂತದ ಚುನಾವಣೆ ಯುಪಿ ಯಲ್ಲಿ ಫೆ. 20 ರಂದು ನಡೆಯಲಿದೆ. 23 ರಂದು ನಾಲ್ಕನೇ ಹಂತದಲ್ಲಿ ಮಣಿಪುರದಲ್ಲಿ,ಯುಪಿ ಯಲ್ಲಿ ಮತದಾನ ನಡೆಯಲಿದೆ. ಫೆ 27 ರಂದು 5ನೇ ಹಂತ ,ಮಾ 3 ರಂದು 6 ನೇ ಹಂತ ,ಮಾ 7 ರಂದು 7 ನೇ ಹಂತದ ಮತದಾನ ನಡೆಯಲಿದೆ.

ಕಠಿಣ ಪರಿಸ್ಥಿತಿಯಲ್ಲೂ ಚುನಾವಣೆ ನಡೆಸುವುದು ನಮ್ಮ ಕರ್ತವ್ಯ. ಮುನ್ನೆಚ್ಚರಿಕೆ ನಿಯಮಗಳೊಂದಿಗೆ ಚುನಾವಣೆ ನಡೆಸಲು ತೀರ್ಮಾನಿಸಿದೆ. ಕೊವೀಡ್ ಸೇಫ್ ಎಲೆಕ್ಷನ್ ನಡೆಸಲಾಗುವುದು. ಹೆಚ್ಚು ಜನರು ಮತದಾನದಲ್ಲಿ ಭಾಗುಯಾವಂತೆ ಮಾಡಲಾಗುವುದು. ಈಗಾಗಲೇ ಸಾಕಷ್ಟು ಸಭೆಗಳನ್ನು ನಡೆಸಲಾಗಿದೆ. ಗೃಹ ಇಲಾಖೆ, ಆರೋಗ್ಯ ಇಲಾಖೆ, ರಾಜಕೀಯ ಪಕ್ಷಗಳ ಜೊತೆಗೆ ಸಭೆ ನಡೆಸಿದೆ.

ರಾಜ್ಯ ಸರ್ಕಾರದ ಹಲವು ಅಧಿಕಾರಿಗಳ ಜೊತೆಗೆ ಸಭೆ ನಡೆದಿದೆ. ಅವರಿಂದ ಹಲವು ಸಲಹೆಗಳನ್ನು ಪಡೆಯಲಾಗಿದೆ ಎಂದರು.
ಐದು ರಾಜ್ಯಗಳಲ್ಲಿ ಈ ಬಾರಿ 24.5 ಲಕ್ಷ ಹೊಸ ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಎಲ್ಲ ಮತದಾನ ಕೇಂದ್ರಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೆಳ ಮಹಡಿಯಲ್ಲಿ ಮತದಾನ‌ ಕೇಂದ್ರಗಳಿರಲಿದೆ. ಸ್ಯಾಜಿಟೈಜರ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮತದಾನ ಕೇಂದ್ರಗಳಿಗೆ ಜನರ ಸಂಖ್ಯೆ ಇಳಿಕೆ ಮಾಡಿದೆ. 1500 ರಿಂದ 1250ಕ್ಕೆ ಇಳಿಕೆ ಮಾಡಿದೆ. ಜನಸಂದಣಿ ತಡೆಯಲು ಹೆಚ್ಚು ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅಭ್ಯರ್ಥಿಗಳು ಆನ್ಲೈನ್ ನಾಮಪತ್ರ ಸಲ್ಲಿಕೆ ಮಾಡಬಹುದು. ಕೊವೀಡ್ ರೋಗಿಗಳು ಅಂಚೆ ಮತದಾನ ಮಾಡಬಹುದು. ಐದು ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮತದಾನ ಕೇಂದ್ರಗಳಿರಲಿದೆ. ಕೇಂದ್ರದಿಂದ 900 ಚುನಾವಣಾ ವೀಕ್ಷಕರು ಇರಲಿದ್ದಾರೆ. 25 ಲಕ್ಷದಿಂದ 40ಕ್ಕೆ ಚುನಾವಣಾ ವೆಚ್ಚ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ತಕ್ಷಣದಿಂದಲೆ ಪಂಚರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಕ್ರಿಮಿನಲ್ ಹಿನ್ನಲೆ ಹೊಂದಿರುವ ಅಭ್ಯರ್ಥಿಗಳ ಮಾಹಿತಿ ಪ್ರಕಟಿಸಬೇಕು. ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಕಾರಣಗಳನ್ನು ತಿಳಿಸಬೇಕು. ಜನರಿಗೆ ಅಭ್ಯರ್ಥಿಗಳ ಮಾಹಿತಿ ನೀಡಬೇಕು. ಡಬಲ್ ಡೋಸ್ ವ್ಯಾಕ್ಸಿನ್ ಆದ ಸಿಬ್ಬಂದಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಈ ಸಿಬ್ಬಂದಿಗಳನ್ನು ಕೊವೀಡ್ ವಾರಿಯರ್ಸ್ ಎಂದು ಘೋಷಿಸಲಾಗಿದೆ. ಹೀಗಾಗಿ ಅವಶ್ಯಕತೆ ಇದ್ದವರಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದರು.

Donate Janashakthi Media

Leave a Reply

Your email address will not be published. Required fields are marked *