ಬೆಂಗಳೂರು: ವಿಶ್ವದಲ್ಲೇ ಪ್ರಥಮ ಬಾರಿಗೆ ನ್ಯಾನೋ ಯೂರಿಯಾ ಗೊಬ್ಬರವನ್ನು ಆವಿಷ್ಕರಿಸಿದ್ದು ಮುಂದಿನ ದಿನಗಳಲ್ಲಿ ನ್ಯಾನೋ ಡಿಎಪಿ ಅಂತ ರಸಗೊಬ್ಬರಗಳು ಬರುವುದು ನಮ್ಮ ದೇಶಕ್ಕೆ ಹೆಮ್ಮೆ ಮತ್ತು ರೈತರು ಸ್ವಾವಲಂಬನೆಯತ್ತ ಮುಖ ಮಾಡಲು ಸಹಕಾರಿ ಎಂದು ಸಂಸದ ಸದಾನಂದಗೌಡ ಹೇಳಿದರು.
ಇಫ್ಕೋ ಸಂಸ್ಥೆ ವತಿಯಿಂದ ರಾಜ್ಯಮಟ್ಟದ ರೈತರ ಮತ್ತು ಸಹಕಾರಿಗಳ ಸಮ್ಮೇಳನವು ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸದಾನಂದಗೌಡ ಇಪ್ಕೋ ಸಂಸ್ಥೆ ಬೆಂಗಳೂರಿನಲ್ಲಿ ನ್ಯಾನೋ ಯೂರಿಯಾ ಘಟಕ ತೆರೆಯಲು ನಿರ್ಧರಿಸಿದೆ, ಇಲ್ಲಿ ಶೇಕಡ 90ಕ್ಕೂ ಹೆಚ್ಚು ಜನ ಕರ್ನಾಟಕದ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತಮಾಡಿ ಇಫ್ಕೋ ಸಂಸ್ಥೆ ಕಾಲಕಾಲಕ್ಕೆ ರಸಗೊಬ್ಬರಗಳ ಪೂರೈಕೆಯಿಂದ ಕರ್ನಾಟಕದ ರೈತರಿಗೆ ಬಹಳ ಸಹಕಾರಿಯಾಗಿದೆ. ಸಹಕಾರಿ ವಲಯದ ಸಂಸ್ಥೆಯ ರಸಗೊಬ್ಬರ ನಮ್ಮೆಲ್ಲರ ಹೆಮ್ಮೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬರುವ ನ್ಯಾನೋ ಯೂರಿಯಾ ಘಟಕವು ದಕ್ಷಿಣ ಭಾರತದ ಮೊದಲ ನ್ಯಾನೋ ರಸಗೊಬ್ಬರ ಉತ್ಪಾದನೆ ಘಟಕವಾಗಿದೆ ಇದು ನಮ್ಮೆಲರ ಹೆಮ್ಮೆಯ ಸಂಗತಿ, ಇದು ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿಗಳ ಸಬ್ಸಿಡಿ ಹೊರೆ ತಗ್ಗಿಸುತ್ತದೆ ಎಂದು ತಿಳಿಸಿದರು.
ಇಫ್ಕೋ ಸಂಸ್ಥೆ ರಾಜ್ಯಮಟ್ಟದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಸಹಕಾರಿಗಳ ಮತ್ತು ರೈತರ ಸಮಾವೇಶವನ್ನು ನಡೆಸುತ್ತಾ ರೈತರಿಗೆ ತಾಂತ್ರಿಕ ಮಾಹಿತಿಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ತಂತ್ರಜ್ಞಾನ ನಿಂತ ನೀರಲ್ಲ ನಾವು ಜೇಬಿನಲ್ಲಿ ಮೊಬೈಲ್ ಗಳನ್ನು ಇಟ್ಟುಕೊಂಡು ತಿಳಿಸುವ ದಿನಗಳನ್ನು ನಿರೀಕ್ಷಿಸಿರಲಿಲ್ಲ ಆದರೆ ತಂತ್ರಜ್ಞಾನ ನಮ್ಮನ್ನು ಬದಲಾಯಿಸಿತು, ಅದಕ್ಕೆ ತಕ್ಕಂತೆ ನಾವು ಬದಲಾಗುತ್ತಿರಬೇಕು ತಕ್ಕಂತೆ ನಾವು ಬದಲಾಗುತ್ತಿರಬೇಕು. ಇಂದು ನಾವು ನಮ್ಮ ಈ ಭೂಮಿತಾಯಿಗೆ ಸಾಕಷ್ಟು ರಾಸಾಯನಿಕ ರಸಗೊಬ್ಬರಗಳನ್ನು ಸರಬರಾಜು ಮಾಡಿ ಭೂಮಿಯ ಫಲವತ್ತತೆಯನ್ನು ಕಳೆದುಕೊಂಡಿರುತ್ತೇವೆ. ಇಂದು ಮಣ್ಣಿನ ಆರೋಗ್ಯದ ಬಗ್ಗೆ ನಾವು ಚಿಂತಿಸುವ ಸಮಯ ಬಂದಿದೆ, ಮುಂದಿನ ಪೀಳಿಗೆಯು ಸಹ ಆರೋಗ್ಯವಂತ ಕೃಷಿ ಮಾಡಲು ಆರೋಗ್ಯವಂತ ಮಣ್ಣಿನ ಅವಶ್ಯಕತೆ ಇದೆ.
ಇದನ್ನು ಬಳಸುವ ರೈತರು ಸ್ವಾವಲಂಬನೆಯ ಕಡೆಗೆ ಮುಖ ಮಾಡಬಹುದು ಜೊತೆಗೆ ದೇಶವನ್ನು ಸಹ ರಸಗೊಬ್ಬರ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗಿದೆ. ಕೇವಲ ಐದು 100 ಎಂಎಲ್ ಅರ್ಧ ಲೀಟರ್ ನ್ಯಾನೋ ಯೂರಿಯಾ 45ಕೆಜಿ ಯೂರಿಯಾ ಚೀಲಕ್ಕೆ ಸಮವಾಗಿದೆ ಸರ್ಕಾರ ಪ್ರತಿ ಚೀಲದ ಮೇಲೆ 1000 ರೂ ಗೂ ಹೆಚ್ಚಿನ ಸಬ್ಸಿಡಿ ನೀಡುತ್ತಿರುವುದನ್ನು ರೈತರಿಗೆ ಮನವರಿಕೆ ಮಾಡಿದರು. ಇದೇ ರೀತಿ ನ್ಯಾನೋ ಡಿಎ ಪಿಯು ಸಹ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕರಾದ ಡಾಕ್ಟರ್ ಸಿ ನಾರಾಯಣಸ್ವಾಮಿ ಕಾರ್ಯಕ್ರಮದಲ್ಲಿ ಸ್ವಾಗತ ಕೋರಿ ಮಾತನಾಡಿದರು. ಹಿರಿಯ ಸಹಕಾರಿಗಳಾದ ಎಸ್ ಎಸ್ ಪಾಟೀಲರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಧರ್, ಪ್ರಧಾನ ವ್ಯವಸ್ಥಾಪಕ ಪಿಳ್ಳೆ ಗೌಡರು ಉಪಸ್ಥಿತರಿದ್ದರು. ಕ್ಷೇತ್ರಾಧಿಕಾರಿ ಚೇತನ ವಂದಿಸಿದರು.