ಸಂಪುಟ – 06, ಸಂಚಿಕೆ 02, ಜನವರಿ, 08, 2012
ಸಮಸ್ಯೆಗಳು ನೂರು-ಸಂಕಷ್ಟದಲ್ಲಿ ವಿದ್ಯಾಥರ್ಿಗಳು ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಹಲ್ಲೆ-ದಾಂದಲೆ,ವಿವಾದ ಭುಗಿಲೆದ್ದಿದೆ. ಈ ತಿಕ್ಕಾಟಗಳ ಹಿಂದೆ ಏನಿದೆ?
ಹುಳ್ಳಿ ಉಮೇಶ್
ವಿಶ್ವವಿದ್ಯಾಲಯಗಳು ಚಿಂತನೆಯ ಚಿಲುಮೆಗಳು ; ದೇಶದ ಬೌದ್ಧಿಕ ಸ್ವಾವಾಲಂಬನೆಯ ತಾಣಗಳು ಎನ್ನಲಾಗುತ್ತದೆ. ಆದರೆ ಬೆಂಗಳೂರು ವಿಶ್ವವಿದ್ಯಾಲಯವನ್ನು ಕಟ್ಟುವ ಶಿಕ್ಷಣ ತಜ್ಙರ ಕನಸು ಈಗ ಕಮರಿ ಹೋಗುತ್ತಿದೆ. ಇತ್ತೀಚಿನ ಕೆಲವು ದಿನಗಳಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಾಗುತ್ತಿರುವ ಬೆಳವಣಿಗೆಗಳು ವಿಶ್ವವಿದ್ಯಾಲಯದ ಘನತೆಯನ್ನು ಹಾಳು ಮಾಡಿವೆ. ಸಮಾಜವನ್ನು ಒಂದು ಸಮಗ್ರ ದೃಷ್ಠಿಕೋನದಿಂದ ನೋಡಬೇಕಾಗಿದ್ದ ವಿಶ್ವವಿದ್ಯಾಲಯದಲ್ಲೇ ಸಂಕುಚಿತ ಹಾಗೂ ಜಾತಿವಾದಿ ಪ್ರವೃತ್ತಿಗಳು ಹೆಚ್ಚಾಗಿ ವಿಶ್ವವಿದ್ಯಾಲಯದ ಬೆಳವಣಿಗೆಗೆ ಮಾರಕವಾಗಿವೆೆ. ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಉನ್ನತ ಶಿಕ್ಷಣದ ಬಗ್ಗೆ ಸಕರ್ಾರದ ನಿರ್ಲಕ್ಷ್ಯ ಒಂದೆಡೆಯಾದರೆ, ಜಾತಿ ರಾಜಕೀಯದ ಕೈಗೊಂಬೆಗಳಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರ ನಡುವಿನ ವೈಷಮ್ಯ, ಭ್ರಷ್ಠಾಚಾರಕ್ಕಾಗಿ ನಡೆದಿರುವ ಪೈಪೋಟಿ ಇನ್ನೊಂದೆಡೆ. ಇವುಗಳ ಮಧ್ಯೆ ಅಡಕತ್ತರಿಯಲ್ಲಿ ಸಿಕ್ಕು ವಿದ್ಯಾಥರ್ಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಇತ್ತೀಚಿನ ಕೆಲವು ಬೆಳವಣಿಗೆಗಳು
ಬೆಂಗಳೂರು ವಿ.ವಿ ಯ ಕುಲಪತಿಯಾಗಿರುವ ಡಾ||ಎನ್.ಪ್ರಭುದೇವ್ ರವರು ಕಳೆದ ಕೆಲವು ತಿಂಗಳುಗಳಿಂದ ಜ್ಞಾನ ಭಾರತಿ ಕ್ಯಾಂಪಸ್ಗೆ(ವಿ.ವಿ ಆವರಣಕ್ಕೆ) ಆಗಮಿಸದಿರುವುದನ್ನು ಖಂಡಿಸಿ ನೂರಾರು ವಿದ್ಯಾಥರ್ಿಗಳು ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾಥರ್ಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಉತ್ತರವಾಗಿ ವಿ.ವಿ ಕ್ಯಾಂಪಸ್ನಲ್ಲಿ ಕಾರ್ಯ ನಿರ್ವಹಿಸದಂತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ನಿರ್ಬಂಧಿಸುತ್ತಿದ್ದಾರೆ, ನನ್ನ ವಿರುದ್ಧ ವಿನಾ ಕಾರಣ ವಿದ್ಯಾಥರ್ಿಗಳನ್ನು ಎತ್ತಿಕಟ್ಟುತ್ತಿದ್ದಾರೆ, ಎಲ್ಲಾ ಸಮಸ್ಯೆಗಳಿಗೆ ನಾನೇ ಕಾರಣವೆಂಬಂತೆ ಬಿಂಬಿಸಿ ನನ್ನ ವಯಕ್ತಿಕ ತೇಜೋವಧೆಗೆ ಕುಲಸಚಿವರೂ ಸೇರಿದಂತೆ ಕೆಲವರು ಪ್ರಯತ್ನಿಸುತ್ತಿದ್ದಾರೆಂದು ಕುಲಪತಿಗಳು ಹೇಳಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ನಾನು ಯಾರನ್ನೂ ನಿರ್ಬಂಧಿಸಿಲ್ಲ, ತೇಜೋವಧೆ ಮಾಡಿಲ್ಲ, ಕುಲಪತಿಗಳು ವಿಶ್ವವಿದ್ಯಾಲಯಕ್ಕೆ ಬರುವುದಾದರೆ ನಾನು ರಕ್ಷಣೆ ಕೊಡಲು ಸಿದ್ಧ ಎಂದು ಕುಲಸಚಿವರಾದ ಡಾ||ಮೈಲಾರಪ್ಪ ರವರ ಅಂಬೋಣ. ಇತ್ತೀಚಿನ ಕೆಲವು ದಿನಗಳಿಂದ ವಿಶ್ವವಿದ್ಯಾಲಯದ ಕೆಲವು ವಿಭಾಗದ ಮುಖ್ಯಸ್ಥರು ವಿದ್ಯಾಥರ್ಿಗಳಿಗೆ ಪಾಠ ಮಾಡದೆ ಕಾಲಹರಣ ಮಾಡುತ್ತಿರುವುದು ವಿ.ವಿ ಯಲ್ಲಿ ಚಚರ್ೆಗೊಳಗಾಗುತ್ತಿರುವ ವಿಷಯ.
ಸಕರ್ಾರದ ನಿರ್ಲಕ್ಷ್ಯ
ಗಮನಿಸಬೇಕಾದ ಸಂಗತಿಯೆಂದರೆ , ಒಂದು ವಿಶ್ವವಿದ್ಯಾಲಯದ ಕುಲಪತಿಯಾಗಿರುವವರು ತಾವು ತಮ್ಮ ಕೆಲಸ ನಿರ್ವಹಿಸಲು ವಿಶ್ವವಿದ್ಯಾಲಯದಲ್ಲಿರುವವರು ಬಿಡುತ್ತಿಲ್ಲವೆಂದು ಹೇಳುತ್ತಿರುವುದನ್ನು ನೋಡಿದರೆ, ವಿಶ್ವವಿದ್ಯಾಲಯ ಗಂಭೀರ ಬಿಕ್ಕಟ್ಟಿನಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ದುರಂತದ ಸಂಗತಿಯೆಂದರೆ ಇಷ್ಟೆಲ್ಲಾ ಬೆಳವಣೆಗೆಗಳಾದರೂ ಸಕರ್ಾರ ಈ ಬಗ್ಗೆ ಕ್ಯಾರೇ ಎನ್ನಲಿಲ್ಲ. ವಿ.ವಿ ಕುಲಪತಿಗಳು ಹಾಗೂ ಕುಲಸಚಿವರಿಗೆ ಸರಿಯಾದ ಸೂಚನೆ ನೀಡಿ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಸರಿಪಡಿಸಲು ಮುಂದಾಗಬೇಕಿದ್ದ ಉನ್ನತ ಶಿಕ್ಷಣ ಸಚಿವರು ಜವಾಬ್ದಾರಿ ಮರೆತು ಕುಳಿತಿದ್ದಾರೆ.
ಭ್ರಷ್ಠಾಚಾರ ಪ್ರಕರಣಗಳು ಹಾಗೂ ಪರೀಕ್ಷಾ ಅಕ್ರಮಗಳು
ಏಷ್ಯಾದಲ್ಲೇ ಅತಿದೊಡ್ಡ ವಿಶ್ವವಿದ್ಯಾಲಯ ಎಂಬ ಹೆಸರು ಪಡೆದಿರುವ ಬೆಂಗಳೂರು ವಿ.ವಿ ಭ್ರಷ್ಟಾಚಾರದಲ್ಲಿಯೂ ಪ್ರಥಮ ಸ್ಥಾನ ಪಡೆಯಲು ವಿಶ್ವವಿದ್ಯಾಲಯದೊಳಗೆ ಪೈಪೋಟಿ ನಡೆಯುತ್ತಿದೆ. ಕೋಲಾರದ ಪಿ.ಜಿ ಕೇಂದ್ರದ ಕಟ್ಟಡ ಕಾಮಗಾರಿಯೂ ಸೇರಿದಂತೆ ವಿವಿಧ ಕಾಮಗಾರಿಗಳು ಹಾಗೂ ನೇಮಕಾತಿಗಳಲ್ಲಿ , ಹೊಸ ಖಾಸಗೀ ಕಾಲೇಜುಗಳಿಗೆ ಅಫಿಲಿಯೇಷನ್ ನೀಡುವಾಗ ವಿಶ್ವವಿದ್ಯಾಲಯದಲ್ಲಿ ಭ್ರಷ್ಠಾಚಾರ ನಡೆದಿರುವ ವರದಿಯಿದೆ. ಇದಲ್ಲದೇ ಪ್ರಶ್ನೆಪತ್ರಿಕೆ ಬಹಿರಂಗ, ಮೌಲ್ಯ ಮಾಪನ ಹಾಗೂ ಮರು ಮೌಲ್ಯಮಾಪನ ನಡೆಸುವಾಗ ಹಾಗೂ ವಿದ್ಯಾಥರ್ಿಗಳಿಗೆ ಉತ್ತರ ಪತ್ರಿಕೆ ಪ್ರತಿ ಒದಗಿಸುವಾಗ ನಡೆದಿರುವ ಅಕ್ರಮಗಳಿಗೆ ಲೆಕ್ಕವಿಲ್ಲ. ಅಂಕಪಟ್ಟಿ ತಿದ್ದುಪಡಿ ಹಾಗೂ ಅಂಕಪಟ್ಟಿ ಬದಲಾವಣೆ ಪ್ರಕರಣಗಳೂ ಇವೆ. ಹೀಗೆ ಭ್ರಷ್ಟಾಚಾರ ಹಾಗೂ ಪರೀಕ್ಷಾ ಅಕ್ರಮಗಳಿಗೆ ಈ ವಿಶ್ವವಿದ್ಯಾಲಯ ಕುಖ್ಯಾತಿಯಾಗಿದೆ. ಅಲ್ಲದೇ ಬೆಂ ವಿ.ವಿ ದೂರ ಶಿಕ್ಷಣ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪರೀಕ್ಷೆಗಳಲ್ಲಿ ಅಕ್ರಮ ನಡೆದು ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ.
ಸಂಶೋಧನೆಯೇ ಇಲ್ಲ
ಕಳೆದ ಎರಡೂವರೆ ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್ಡಿ ಗೆ ಪ್ರವೇಶ ಪರೀಕ್ಷೆ ನಡೆದೇ ಇಲ್ಲ. ಸಾಮಾಜಿಕ-ಆಥರ್ಿಕ-ರಾಜಕೀಯ-ವಿಜ್ಞಾನ-ತಂತ್ರಜ್ಞಾನ-ಭಾಷೆ-ಲಿಂಗ ತಾರತಮ್ಯ ಸೇರಿದಂತೆ ಅನೇಕ ವಿಷಯಗಳ ಮೇಲೆ ಮಹತ್ತರವಾದ ಸಂಶೋಧನಾ ಕಾರ್ಯ ನಡೆಯಬೇಕಿದ್ದ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್ಡಿ ಪ್ರವೇಶ ಪರೀಕ್ಷೆ ನಡೆಸದಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಕನಸಾಗುತ್ತಿವೆ ಮೂಲಸೌಕರ್ಯಗಳು
ವಿಶ್ವವಿದ್ಯಾಲಯದಲ್ಲಿ ಮೂಲ ಸೌಕರ್ಯಗಳ ಕೊರತೆ ವ್ಯಾಪಕವಾಗಿದೆ. ಯಾವುದೇ ವಿಭಾಗಗಳಲ್ಲಿ ಸರಿಯಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲ. ಇರುವ ಶೌಚಾಲಯ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ವಿಶ್ವವಿದ್ಯಾಲಯ ಆವರಣದಲ್ಲಿ ವಿದ್ಯಾಥರ್ಿಗಳು ಅನಾರೊಗ್ಯಕ್ಕೊಳಗಾದಲ್ಲಿ ಚಿಕಿತ್ಸೆ ನೀಡುವಂತಹ ಸೌಲಭ್ಯವಿಲ್ಲ. ವಿದ್ಯಾಥರ್ಿನಿಲಯಗಳಲ್ಲಿ 1500 ವಿದ್ಯಾಥರ್ಿಗಳಿದ್ದಾರೆ. ಆದರೆ ಸಂಖ್ಯೆಗನುಗುಣವಾಗಿ ಶೌಚಾಲಯ, ಸ್ನಾನ ಗೃಹಗಳಿಲ್ಲ. ಎರಡೂವರೆ ವರ್ಷದಿಂದ ಹೊಸ ವಿದ್ಯಾಥರ್ಿನಿಲಯದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ. ಅಲ್ಲದೇ ಅಂಕಪಟ್ಟಿ ದೋಷ, ವಿತರಣೆಯಲ್ಲಿ ವಿಳಂಬ, ಮೌಲ್ಯಮಾಪನ ದೋಷ ಸೇರಿದಂತೆ ವಿಶ್ವವಿದ್ಯಾಲಯದ ವಿದ್ಯಾಥರ್ಿಗಳು ಗಂಭೀರ ಸಮಸ್ಯೆಯಲ್ಲಿ ಬಳಲುತ್ತಿದ್ದಾರೆ. ಸಮಸ್ಯೆ ಪರಿಹರಿಸಲು ಕುಲಪತಿಗಳಾಗಲಿ, ಕುಲಸಚಿವರಾಗಲಿ ಗಮನ ನೀಡದೇ ಪರಸ್ಪರ ದೂಷಣೆಯಲ್ಲಿ ತೊಡಗಿರುವುದು ವಿದ್ಯಾಥರ್ಿಗಳನ್ನು ಇನ್ನಷ್ಟು ಕೆರಳಿಸಿದೆ.
ಎಬಿವಿಪಿ-ಶ್ರೀರಾಮಸೇನೆ ಗೂಂಡಾಗಿರಿ ಖಂಡಿಸಿ, ವಿ.ವಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಎಸ್.ಎಫ್.ಐ ಪ್ರತಿಭಟನೆ
ವಿ.ವಿ ಕುಲಪತಿಗಳು ವಿಶ್ವವಿದ್ಯಾಲಯಕ್ಕೆ ಬರುತ್ತಿಲ್ಲವೆಂದು ಎ.ಬಿ.ವಿ.ಪಿ ಸಂಘಟನೆ ಸೆಂಟ್ರಲ್ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಆಗಮಿಸಿದ ಕುಲಪತಿಗಳ ಮೇಲೆ ಎ.ಬಿ.ವಿ.ಪಿ ಕಾರ್ಯಕರ್ತರು ದೈಹಿಕ ಹಲ್ಲೆಗೆ ಮುಂದಾಗಿರುವುದು ಈ ಸಂಘಟನೆಯ ಗೂಂಡಾ ಪ್ರವೃತ್ತಿ ಮತ್ತೊಮ್ಮೆ ಬಯಲಾಗಿದೆ. ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಎ.ಬಿ.ವಿ.ಪಿ ಸಂಘಟನೆ ವಿಶ್ವವಿದ್ಯಾಲಯದ ಉನ್ನತ ಸ್ಥಾನದಲ್ಲಿರುವವರ ಮೇಲೆ ದಾಳಿ ಮಾಡಿರುವುದು ಖಂಡನೀಯ.
ಅಲ್ಲದೇ ಬೆಂಗಳೂರು ವಿ.ವಿ ದೂರ ಶಿಕ್ಷಣ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಆದರೆ ಇದನ್ನೇ ನೆಪ ಮಾಡಿಕೊಂಡು ದೂರ ಶಿಕ್ಷಣ ಕೇಂದ್ರದ ನಿದರ್ೇಶಕರಾದ ಡಾ|| ನಿರಂಜನ್ ರವರ ಮೇಲೆ ಪ್ರಮೋದ್ ಮುತಾಲಿಕ್ ಸೇರಿದಂತೆ ಶ್ರೀರಾಮಸೇನೆ ಕಾರ್ಯಕರ್ತರು ಹಲ್ಲೆ ನಡೆಸಿ ಗೂಂಡಾವರ್ತನೆ ಪ್ರದಶರ್ಿಸಿದ್ದಾರೆ. ಈ ಎರಡು ಘಟನೆಗಳನ್ನು ಖಂಡಿಸಿ, ಹಲ್ಲೆ ನಡೆಸಿರುವ ಎ.ಬಿ.ವಿ.ಪಿ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರನ್ನು ಬಂಧಿಸಲು ಆಗ್ರಹಿಸಿ, ವಿಶ್ವವಿದ್ಯಾಲಯದ ಭ್ರಷ್ಠಾಚಾರ ಪ್ರಕರಣಗಳನ್ನು ತನಿಖೆ ನಡೆಸಬೇಕೆಂದು ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್.ಎಫ್.ಐ) ಬೆಂಗಳೂರಿನ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ನಂತರ ಎಸ್.ಎಫ್.ಐ ರಾಜ್ಯ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಬೆಂಗಳೂರು ವಿಶ್ವವಿದ್ಯಾಲಯದ ಬಿಕ್ಕಟ್ಟನ್ನು ಪರಿಹರಿಸಲು ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ಎಸ್.ಎಫ್.ಐ ಮನವಿ ಮಾಡಿದೆ.ವಿಶ್ವವಿದ್ಯಾಲಯದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸಿಂಡಿಕೇಟ್ ಸಭೆ ನಡೆಸಲು ಎ.ಬಿ.ವಿ.ಪಿ ಒತ್ತಾಯಿಸಿದೆ. ಸಿಂಡಿಕೇಟ್ನಲ್ಲಿರುವ ಬಹುತೇಕ ಸದಸ್ಯರು ಸಂಘ ಪರಿವಾರದ ಮೂಲದವರು. ಈ ಮೂಲಕ ಇದೇ ಭ್ರಷ್ಟ ವ್ಯವಸ್ಥೆಯನ್ನು ಮುಂದುವರೆಸಲು ಎ.ಬಿ.ವಿ.ಪಿ ಪ್ರಯತ್ನಿಸುತ್ತಿದೆ.
ಆಯೋಗ ರಚನೆ
ಬೆಂಗಳೂರು ವಿಶ್ವವಿದ್ಯಾಲಯದ ಐದು ನಿದರ್ಿಷ್ಟ ಪ್ರಕರಣಗಳ ಕುರಿತು ತನಿಖೆ ನಡೆಸಲು ರಾಜ್ಯ ಹೈಕೋಟರ್್ನ ನಿವೃತ್ತ ನ್ಯಾಯಮೂತರ್ಿ ಕೆ.ಶಿವಶಂಕರ್ ಭಟ್ ನೇತೃತ್ವದ ಏಕ ಸದಸ್ಯ ಆಯೋಗವನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶಿಸಿರುವುದು ಸ್ವಾಗತಾರ್ಹ.ಒಟ್ಟಾರೆಯಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಘಪರಿವಾರದ ಗೂಂಡಾಗಿರಿ, ಭ್ರಷ್ಠಾಚಾರ, ಜಾತಿ ರಾಜಕಾರಣ ದಿಂದ ವಿ.ವಿ ಯ ಶೈಕ್ಷಣಿಕ ವಾತಾವರಣ ಕಲುಷಿತ ಗೊಂಡಿದೆ. ಉತ್ತಮ ಶೈಕ್ಷಣಿಕ ವಾತಾವರಣ ನಿಮರ್ಾಣಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯ ಉಳಿಸಿ ಪ್ರಚಾರಾಂದೋಲನ ನಡೆಸಲು ಎಸ್ಎಫ್ಐ ನಿರ್ಧರಿಸಿದೆ. ಅಲ್ಲದೇ ವಿಶ್ವವಿದ್ಯಾಲಯದ ಉಳಿವಿಗಾಗಿ ಪ್ರಗತಿಪರ ಶಕ್ತಿಗಳು ಕೈ ಜೋಡಿಸಬೇಕಿದೆ.
0