RSS ಕಾರ್ಯಕರ್ತರ ಬೆವರಿಳಿಸಿದ ಮಹಿಳೆಯರು

ತುಮಕೂರು : ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬಿಳಿ ದೇವಾಲಯ ಗ್ರಾಮದಲ್ಲಿ ಕ್ರೈಸ್ತ ಮಿಷನರಿಯೊಂದು ಮನೆಯೊಂದರಲ್ಲಿ ಮತಾಂತರ ನಡೆಸುತ್ತಿದೆ ಎಂದು ಆರೋಪಿಸಿ ಕೆಲವು ಸಂಘಪರಿವಾರದ ಕಾರ್ಯಕರ್ತರು ಕ್ರಿಸ್ಮಸ್ ಆಚರಣೆ ವೇಳೆ ದಾಳಿ ನಡೆಸಿದ್ದಾರೆ.

ಈ ದಾಳಿ ವೇಳೆ ಮಹಿಳೆಯರು ಸಂಘಪರಿವಾರದ ಕಾರ್ಯಕರ್ತರ ವಿರುದ್ಧವೇ ತಿರುಗಿ ಬಿದ್ದು ಪ್ರಶ್ನೆ ಮಾಡುವ ಮೂಲಕ RSS ಕಾರ್ಯಕರ್ತರ ಬೆವರಿಳಿಸಿದ ಘಟನೆ ನಡೆದಿದೆ. ಈ ಕುರಿತ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದಾಳಿ ವೇಳೆ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪ್ರತಿಭಟಿಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ಮಹಿಳೆಯೊಬ್ಬರು ನಾವು ಹಿಂದೂಗಳೇ ಕತ್ತಿನಲ್ಲಿ ತಾಳಿ, ಕಾಲಲ್ಲಿ ಕಾಲುಂಗರ ಇದೆ. ನಮ್ಮ ಮನಸ್ಸಿನ ನೆಮ್ಮದಿ ಗಾಗಿ ಪ್ರಾರ್ಥನೆ ಮಾಡುತಿದ್ದೇವೆ.ನೀವು ಇದೇ ರೀತಿ ನಡೆದುಕೊಂಡರೆ ಅವುಗಳನ್ನು ಬಿಚ್ಚಿಟ್ಟು ಪ್ರಾರ್ಥನೆ ಮಾಡುತ್ತೇವೆ, “ನಾವು ತಾಳಿ‌ ಹಾಕಲ್ಲ, ಕಾಲುಂಗರ ಇಡಲ್ಲ, ಇದನ್ನೆಲ್ಲ ಪ್ರಶ್ನೆ ಮಾಡೋಕೆ ನೀವ್ಯಾರು? ನಿವ್ಯಾಕೆ ನಮ್ಮ ಮನೆ ಮೇಲೆ ದಾಳಿ ಮಾಡಿದ್ದೀರಿ, ನಾಮ ಹಾಕಿಕೊಳ್ಳದೆ ಓಡಾಡುವ ಹಿಂದುಗಳನ್ನು ನೀವ್ಯಾಕೆ ಪ್ರಶ್ನೆ ಮಾಡಲ್ಲ” ಎಂದು ಮಹಿಳೆಯೊಬ್ಬರು RSS ಕಾರ್ಯಕರ್ತರನ್ನ ಪ್ರಶ್ನಿಸಿ ಬೆವರಿಳಿಸುವ ಮಾತುಗಳು ಇವು.

ಮತಾಂತರ ಕಾಯ್ದೆ ವಿಧಾನಸಭೆಯಲ್ಲಿ ಒಪ್ಪಿಗೆ ಪಡೆದ ನಂತರದಲ್ಲಿ ಸಂಘಪರಿವಾರದವರು ನಡೆಸುತ್ತಿರುವ ಮೂರನೇ ದಾಳಿ ಇದಾಗಿದೆ. ಸಂಘಪರಿವಾರದ ಕಾರ್ಯಕರ್ತರು ಅನೈತಿಕ ಪೊಲೀಸ್ ಗಿರಿ ಪ್ರದರ್ಶಿಸಲು ಮತಾಂತರ ಕಾಯ್ದೆ ಸಹಾಯಕವಾಗಲಿದೆ ಎಂದು ಪ್ರಗತಿಪರ ಸಂಘಟನೆ, ವಿಪಕ್ಷಗಳು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Donate Janashakthi Media

Leave a Reply

Your email address will not be published. Required fields are marked *