ಹಬೀಬ್ ತನ್ವೀರ್ ಅವರ ‘ಚೋರ ಚರಣದಾಸ’ 267ನೇ ರಂಗಪ್ರಯೋಗ

ಮೈಸೂರಿನ ನಟನ ರಂಗಶಾಲೆಯಲ್ಲಿ ರಂಗಾಸಕ್ತರಿಗಾಗಿ ವಾರಾಂತ್ಯ ರಂಗ ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದು, ಡಿಸೆಂಬರ್ 26ರಂದು ಸಂಜೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ʻನಟನ ರಂಗಶಾಲೆʼಯಲ್ಲಿ ಹಬೀಬ್ ತನ್ವೀರ್ ರಚನೆಯ, ಮಂಡ್ಯ ರಮೇಶ್ ನಿರ್ದೇಶನದ ‘ಚೋರ ಚರಣದಾಸ’ ನಾಟಕ ಪ್ರದರ್ಶನಗೊಳ್ಳಲಿದೆ.

ಮೂರು ದಶಕಗಳಷ್ಟು ಹಿಂದಿನ ಈ ನಾಟಕವು ಸಾರ್ವಕಾಲಿಕವೆನ್ನುವಷ್ಟು ನೂತನ ಸತ್ಯಗಳನೇಕವನ್ನು ಧ್ವನಿಸುತ್ತದೆ. ಪ್ರಸ್ತುತ ಪ್ರಯೋಗವನ್ನು ಅತ್ಯಂತ ಹಾಸ್ಯಮಯವಾಗಿ ಮತ್ತು ವಿಡಂಬನಾತ್ಮಕವಾಗಿ ಕೃತಿಯ ಆಂತರಿಕ ಧ್ವನಿಯೊಂದಿಗೆ ಕಟ್ಟಲಾಗಿದ್ದು ಇದು 267ನೇ ಪ್ರದರ್ಶನವಾಗಿದೆ.

ಹಲವು ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿರುವ ನಟನ ರಂಗಶಾಲೆಯು ರಂಗಭೂಮಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದೆ.  ರಂಗಭೂಮಿ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಹೊಸ ಹೊಸ ಪ್ರಯೋಗಗಳನ್ನು ನೀಡುತ್ತಿರುವ ನಟನಾ ರಂಗಶಾಲೆಯು ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

Donate Janashakthi Media

Leave a Reply

Your email address will not be published. Required fields are marked *