ಮಾಜಿ ಕೇಂದ್ರ ಸಚಿವ, ಹಿರಿಯ ರಾಜಕಾರಣಿ ಆರ್​ ಎಲ್​ ಜಾಲಪ್ಪ ನಿಧನ

ಬೆಂಗಳೂರು : ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಆರ್.ಎಲ್. ಜಾಲಪ್ಪ ನಿಧನರಾಗಿದ್ದಾರೆ‌. ಅವರಿಗೆ 98 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ದೊಡ್ಡಬಳ್ಳಾಪುರದ ತೂಬಗೆರೆ ನಿವಾಸದಲ್ಲಿದ್ದಾಗ ಆರ್. ಎಲ್. ಜಾಲಪ್ಪ ಪಾರ್ಶುವಾಯುವಿಗೆ ತುತ್ತಾಗಿದ್ದರು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು, ಕೋಲಾರದ ಆರ್. ಎಲ್. ಜಾಲಪ್ಪ ಆಸ್ಪತ್ರೆಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಕರ್ನಾಟಕದ ಪ್ರಮುಖ ರಾಜಕಾರಣಿಯಾಗಿದ್ದ ಜಾಲಪ್ಪ 4 ಬಾರಿ ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸಚಿವರಾಗಿದ್ದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ಆರ್. ಎಲ್. ಜಾಲಪ್ಪ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಆರ್.ಎಲ್ ಜಾಲಪ್ಪ ರಾಜಕೀಯ ಹಾದಿ 
ಆರ್.ಎಲ್. ಜಾಲಪ್ಪ  19 ಅಕ್ಟೋಬರ್  1925  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಜನಿಸಿದ್ದರು.
ಮೈಸೂರು ಮಹಾರಾಜ ಕಾಲೇಜಿನಲ್ಲಿ  ಬಿ.ಎ.ಪದವಿ ಪಡೆದಿರುವ ಆರ್ ಎಲ್ ಜಾಲಪ್ಪ ಅವರು ಬಳಿಕ  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯರಾಗಿದ್ದರು.

1980-83 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1983-96 ಸದಸ್ಯರು, ಕರ್ನಾಟಕ ವಿಧಾನಸಭೆ
1983-84 ಮತ್ತು 1985-86 ಸಚಿವರಾಗಿ ಸೇವೆ., ಸಹಕಾರಿ ಖಾತೆ ನಿರ್ವಹಣೆ. ಕರ್ನಾಟಕ ಸರ್ಕಾರ
1986-87 ಸಚಿವಸ್ಥಾನ, ಗೃಹ ವ್ಯವಹಾರಗಳ, ಕರ್ನಾಟಕ ಸರ್ಕಾರ
1995-96 ಸಚಿವ, ಕಂದಾಯ, ಕರ್ನಾಟಕ ಸರ್ಕಾರ
1996 11 ನೇ ಲೋಕಸಭೆಗೆ ಚುನಾಯಿತ ಜವಳಿ
1996-98 ಕೇಂದ್ರ ಜವಳಿ ಸಚಿವ
1998 12 ನೇ ಲೋಕಸಭೆ ಮರುಚುನಾಯಿತರಾದರು.
1998-99 ಸದಸ್ಯರು, ಹಣಕಾಸು ಸಮಿತಿ ಸದಸ್ಯ, ಸಂಸತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸದಸ್ಯರು ಸಮಿತಿ , ಸಲಹಾ ಸಮಿತಿಯ ಸದಸ್ಯರು ಕೃಷಿ ಸಚಿವಾಲಯ.
1999  13 ನೇ ಲೋಕಸಭೆಗೆ ಮರು ಆಯ್ಕೆ
1999-2000 ಸದಸ್ಯರು, ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರು.
2004  14 ಲೋಕಸಭೆ ಆಯ್ಕೆ (4ನೇ ಅವಧಿಗೆ),
2006 ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರು

Donate Janashakthi Media

Leave a Reply

Your email address will not be published. Required fields are marked *