ರಾಜ್ಯ ಸರ್ಕಾರದಿಂದ ಯೋಧರಿಗೆ ನೀಡುತ್ತಿದ್ದ ಪ್ರಶಸ್ತಿ ಮೊತ್ತ ಐದು ಪಟ್ಟು ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರವು ಶೌರ್ಯ ಹಾಗೂ ಶೌರ್ಯೇತರ ಪ್ರಶಸ್ತಿ ವಿಜೇತ ಯೋಧರಿಗೆ ನೀಡಲಾಗುವ ಅನುದಾನದ ಮೊತ್ತವನ್ನು ಹೆಚ್ಚಳ ಮಾಡಿರುವ ಬಗ್ಗೆ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. ಶೌರ್ಯ ಪ್ರಶಸ್ತಿಗೆ ಭಾಜನರಾಗುವವರಿಗೆ ನೀಡುವ ಅನುದಾನವು ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ ಎಂಬ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮನವಿಯನ್ನು ಮಾಡಿಕೊಂಡಿದ್ದವು. ಈ ಬಗ್ಗೆ ರಾಜ್ಯ ಸರ್ಕಾರ ಯೋಧರ ಮನಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಪ್ರಶಸ್ತಿ ಪುರಸ್ಕೃತರ ಅನುದಾನದ ಮೊತ್ತವನ್ನು ಐದು ಪಟ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಈ ಬಗ್ಗೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ವಿಜಯ್ ದಿವಸ್ ಅಂಗವಾಗಿ  ಇಂದು ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ ನ ತರಬೇತಿ ಶಾಲೆಯ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಬಹಳ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಅಂತರಿಕ ಭದ್ರತೆಯಲ್ಲಿ ಸೇನೆಯ ಪಾತ್ರ ಬಹಳ ಮುಖ್ಯ. ತಂತ್ರಜ್ಞಾನದಲ್ಲೂ ಸೇನೆಗೆ ಮುಂಚೂಣಿಯಲ್ಲಿದೆ. ಭಾರತದ ಪಾಕಿಸ್ತಾನದ ಯುದ್ಧದಲ್ಲಿ ನಾವು ಗೆದಿದ್ದೇವೆ. 1971 ರಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಗೆದ್ದಿರುವುದನ್ನು ಇಡೀ ವಿಶ್ವವೇ ಭಾರತದ ಸೇನೆ ಶಕ್ತಿಯನ್ನ ನೋಡಿದೆ. ಭಾರತ ಸೇನೆಯ ಶಕ್ತಿ ಮತ್ತು ತಂತ್ರಜ್ಞಾನದ ಬಗ್ಗೆ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಈ ವಿಜಯ ದಿವಸ ಇಡೀ ದೇಶಕ್ಕೆ ಸಲ್ಲಲ್ಲಿದೆ. ಭಾರತಕ್ಕೆ ಈ ದಿವಸ ತುಂಬಾ ಮುಖ್ಯವಾದ ದಿವಸ. ಭಾರತ ತನ್ನ ಶಕ್ತಿಯನ್ನ ವಿಶ್ವಕ್ಕೆ ತೋರಿಸಿದ ದಿವಸ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.

ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರಿಗೆ ಪ್ರಸ್ತುತ 25 ಲಕ್ಷ ರೂ.ಗಳು ನೀಡಲಾಗುತ್ತಿತ್ತು. ಅದನ್ನು ಈಗ ಒಂದೂವರೆ ಕೋಟಿ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಮಹಾವೀರ ಚಕ್ರ ಪ್ರಶಸ್ತಿಗೆ 12 ಲಕ್ಷ ರೂ.ಗಳು ನೀಡಲಾಗುತ್ತಿತ್ತು. ಅದನ್ನು ಈಗ  ಒಂದು ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ.

ಅದೇ ರೀತಿ ಅಶೋಕಚಕ್ರ ಪ್ರಶಸ್ತಿಗೆ 25 ಲಕ್ಷ ರೂ.ಗಗಳಿಂದ ಒಂದೂವರೆ ಕೋಟಿ ರೂ.ಗೆ, ಕೀರ್ತಿಚಕ್ರಕ್ಕೆ 12 ಲಕ್ಷ ರೂ.ಗಳಿಂದ 1 ಕೋಟಿ ರೂ. ಅನುದಾನ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ವೀರಚಕ್ರ ಮತ್ತು ಶೌರ್ಯಚಕ್ರಗಳಿಗೆ ನಿಗದಿಯಾಗಿದ್ದ 8 ಲಕ್ಷ ರೂ.ಗಳನ್ನು ತಲಾ 50 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

ಸೇನಾ ಮೆಡಲ್ ಹಾಗೂ ಮೆನ್‍ಶನ್ ಎನ್‍ಡಿಎಸ್ ಪ್ಯಾಚ್ ಪ್ರಶಸ್ತಿಗೆ ಇದುವರೆಗೂ ನೀಡಲಾಗುತ್ತಿದ್ದ 2 ಲಕ್ಷ ರೂ.ಗಳ ಅನುದಾನವನ್ನು ತಲಾ 15 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

ದೇಶ ಕಾಯುವ ಸೇನಾಯೋಧರ ಪ್ರಶಸ್ತಿ ಮೊತ್ತವನ್ನು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ರಾಜ್ಯಪಾಲ ಥಾವರ್‌ ಚಂದ್‌  ಗೆಹ್ಲೋಟ್ ಸಹಿ ಹಾಕಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ರಾಜ್ಯ ಸರ್ಕಾರ ಒಂದು ಬಾರಿ ನೀಡುವ ಅನುದಾನ ಹೆಚ್ಚಳ ಪ್ರಸಕ್ತ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *