ಗಂಭೀರ ಸ್ಥಿತಿಯಲ್ಲಿದ್ದ ಜನರಲ್ ಬಿಪಿನ್ ರಾವತ್ ನಿಧನ

ಚೆನ್ನೈ: ಭಾರತದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಬಿಪಿನ್ ರಾವತ್ ಅವರು ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ.

ಈ ಸಂಬಂಧ ವಾಯುಸೇನೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿ ಮೃತಪಟ್ಟ ವಿಚಾರವನ್ನು ತಿಳಿಸಿದೆ. ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಕೊಯಮತ್ತೂರು, ಕೂನೂರು ನಡುವಿನ ನೀಲಗಿರಿ ಅರಣ್ಯ ವ್ಯಾಪ್ತಿಯಲ್ಲಿ ದೊಡ್ಡ ಸ್ಫೋಟದ ಶಬ್ಧದೊಂದಿಗೆ ಹೆಲಿಕಾಪ್ಟರ್ ಪತನವಾಗಿದೆ. ದುರಂತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ಬಿಪಿನ್ ರಾವತ್ ಸೇರಿ 14 ಮಂದಿ ಪಯಣಿಸುತ್ತಿದ್ದರು. ಈ ದುರಂತದಲ್ಲಿ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ.

ಈ ಅವಘಡದ ನಂತರ ಗಾಯಾಳುಗಳಿಗೆ ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಅಫಘಾತವಾಗ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಮೃತರಾಗಿದ್ದಾರೆ.

2015ರಲ್ಲಿ ಸಂಭವಿಸಿದ ನಾಗಾಲ್ಯಾಂಡ್‍ನ ದೀಮಾಪುರ್ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸ್ವಲ್ಪದ್ರಲ್ಲೇ ಪ್ರಾಣಾಪಾಯದಿಂದ ಬಿಪಿನ್ ರಾವತ್ ಪಾರಾಗಿದ್ದರು. ಆಗ ಬಿಪಿನ್ ರಾವತ್ ಲೆಫ್ಟಿನೆಂಟ್ ಜನರಲ್ ಆಗಿದ್ದರು. ದಿಮಾಪುರದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ಎಂಜಿನ್ ವೈಫಲ್ಯದಿಂದ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಪೈಲಟ್‍ಗಳು ಮತ್ತು ಕರ್ನಲ್ ಕೂಡ ಬದುಕುಳಿದಿದ್ದರು. ಆದರೆ ಇವತ್ತು ಸಂಭವಿಸಿದ ದುರಂತದಲ್ಲಿ ಬಿಪಿನ್ ರಾವತ್ ಸಾವನ್ನಪ್ಪಿದ್ದಾರೆ.

ಬಿಪಿನ್ ರಾವತ್ ಯಾರು?: ಬಿಪಿನ್ ರಾವತ್ ಉತ್ತರಾಖಂಡನ್‍ನ ಪೌರಿಯಲ್ಲಿ 1958ರಲ್ಲಿ ಜನಿಸಿದ್ದರು. ತಂದೆ ಲಕ್ಷ್ಮಣ್ ಸಿಂಗ್, ನಿವೃತ್ತ ಲೆಫ್ಟಿನೆಂಟ್ ಜನೆರಲ್ ಆಗಿ ಸೇವೆಸಲ್ಲಿಸಿದ್ದಾರೆ. ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (2020ರ ಜನವರಿ1 ) ಭಾರತೀಯ ಸೇನೆಯ ಟಾಪ್ ಮೋಸ್ಟ್, 4 ಸ್ಟಾರ್ ಸೈನ್ಯಾಧಿಕಾರಿ, ಲಡಾಖ್ ಬಿಕ್ಕಟ್ಟಿನ ವೇಳೆ ಚೀನಾ ವಿರುದ್ಧ ವ್ಯೂಹ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ರಕ್ಷಣಾ ರಂಗದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದವರು. ತ್ರಿವಿಧ ದಳಗಳ 17 ಕಮಾಂಡ್‍ಗಳನ್ನು ಸೇರಿಸುವ ಗುರುತರ ಹೊಣೆ ಹೊತ್ತಿದ್ದರು.

Donate Janashakthi Media

Leave a Reply

Your email address will not be published. Required fields are marked *