ಕಾರ್ಮಿಕರನ್ನು ವಜಾಗೊಳಿಸಿದ್ದನ್ನು ಖಂಡಿಸಿ ಐಟಿಐ ಎದುರು ಪ್ರತಿಭಟನೆ

ಬೆಂಗಳೂರು: ಸುಮಾರು 5 ರಿಂದ 35 ವರ್ಷಗಳ ಕಾಲ ಸತತವಾಗಿ ಶ್ರಮಿಸಿದ ಕಾರ್ಮಿಕರನ್ನು ಏಕಾಏಕಿಯಾಗಿ ಡಿಸೆಂಬರ್‌ 01ರಂದು ಕೆಲಸದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಐಟಿಐ ಲಿಮಿಟೆಡ್‌ ಎದುರು ಕರ್ನಾಟಕ ಜನರಲ್ ಲೇಬರ್ ಯೂನಿಯನ್ ಮತ್ತು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್(ಎಐಸಿಸಿಟಿಯು) ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ವಜಾಗೊಳಿಸಿದ್ದರ ಬಗ್ಗೆ ಕಾರ್ಮಿಕರು ಸಂಘಟಿತರಾಗಿ ಐಟಿಐ ಆಡಳಿತ ಮಂಡಳಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂಬ ನೆಪವೊಡ್ಡಿ ಕಾರ್ಮಿಕ ವಿರೋಧಿ ನೀತಿಗಳನ್ನು ಪಾಲಿಸುತ್ತಿದ್ದಾರೆ. ಇವರುಗಳನ್ನು ತಮ್ಮ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಕಾರ್ಮಿಕರು ಹೋರಾಟಕ್ಕೆ ಮುಂದಾಗಿದ್ದಾರೆ.

ಇಂದು ಸಹ ಐಟಿಐ ಆಡಳಿತ ವರ್ಗದವರು ಕಾರ್ಖಾನೆಯ ಆವರಣದ ಎಲ್ಲಾ ಗೇಟುಗಳಿಗೆ ಬೀಗ ಹಾಕಿಸಿ, ಯಾವುದೇ ವ್ಯಕ್ತಿಯು ತಮ್ಮ ಆವರಣದೊಳಗೆ ಪ್ರವೇಶಿಸುವುದರಿಂದ ತಡೆಹಾಕಿದ್ದಾರೆ. ಈ ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾಗೊಳಿಸಿದ್ದು ಅಲ್ಲದೆ, ಶಾಂತಿಯುತ ಪ್ರತಿಭಟನೆಯನ್ನೂ ಸಹ ತಡೆಹಿಡಿಯಲಾಗಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಪರಿನಿರ್ವಾಣ ದಿನವನ್ನು ಆಚರಿಸಲು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇದನ್ನೂ ಸಹ ಆಡಳಿತ ವರ್ಗದವರಿಂದ ತಡೆಹಿಡಿದ್ದರು. ಐಟಿಐ ಕಾರ್ಮಿಕರನ್ನು ಒತ್ತಾಯಪೂರ್ವಕವಾಗಿ ಬೀದಿಪಾಲು ಮಾಡಲಾಗಿದೆ. ಹೀಗಿದ್ದರೂ, ಕಾರ್ಮಿಕರು ತಮ್ಮ ಹೋರಾಟವನ್ನು ಮುಂದುವರೆಸುತ್ತಾರೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಪರಿನಿರ್ವಾಣ ದಿನವನ್ನು ಆಚರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *