ನಾಗಾಲ್ಯಾಂಡ್‌ ಹತ್ಯೆಗಳಿಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಖಂಡನೆ – “ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರಗಳ ಕಾಯ್ದೆ ಹೋಗಬೇಕು”

ನವದೆಹಲಿ: ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಸೇನೆಯ ಒಡ್ಡೊಡ್ಡು ಕಾರ್ಯಾಚರಣೆ ಕನಿಷ್ಠ 17 ನಾಗರಿಕರು ಮತ್ತು ಒಬ್ಬ ಸೈನಿಕನ ಹತ್ಯೆಗೆ ಕಾರಣವಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನ ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ.

ಮೃತರ ಕುಟುಂಬಗಳಿಗೆ ಪೊಲಿಟ್ ಬ್ಯೂರೋ ತನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತ, ಕೇಂದ್ರ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರವನ್ನು ಪ್ರಕಟಿಸಬೇಕೆಂದು ಒತ್ತಾಯಿಸಿದೆ.

“ಗುಪ್ತಚರ ವೈಫಲ್ಯದಿಂದ” ಈ ಭೀಕರ ಹತ್ಯೆಗಳು ಸಂಭವಿಸಿವೆ ಎಂದು ಸೇನೆಯು ನೀಡಿರುವ ವಿವರಣೆಯು ಇಂತಹ ಹೊಂಚು ಪ್ರಮಾದ ಹೇಗೆ ಸಂಭವಿಸಿತು ಎಂಬುದನ್ನು ವಿವರಿಸುವುದಿಲ್ಲ. ಒಂದು ಆಮೂಲಾಗ್ರ ತನಿಖೆಯನ್ನು ತ್ವರಿತವಾಗಿ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

ಈ ಘಟನೆಯು ಮತ್ತೊಮ್ಮೆ, ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ (AFSPA) ಯನ್ನು ಶಾಸನ ಪುಸ್ತಕದಿಂದ ತೆಗೆದುಹಾಕುವ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *