ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ರೂ.100 ಹೆಚ್ಚಳ-ದೇಶದಲ್ಲಿ ಮಾರಾಟವಾಗುತ್ತಿದೆ ಸರಾಸರಿ ರೂ.2100ಕ್ಕೆ ಮೇಲ್ಪಟ್ಟು

ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ನಿರಂತರ ಏರಿಕೆಯ ನಡುವೆಯೇ ಈಗ ಮತ್ತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಕಂಡಿದ್ದು, `100 ಹೆಚ್ಚಳವಾಗಿದೆ. ದರ ಏರಿಕೆಯಂತೆ ಚೆನ್ನೈನಲ್ಲಿ ಎಲ್‌ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,234.50 ರಷ್ಟು ನಿಗದಿಯಾಗಿದೆ.

ಡಿಸೆಂಬರ್ 1, 2021ರಂತೆ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಹೆಚ್ಚಿಸಲಾಗಿದ್ದು, ಪ್ರತೀ 19 ಕೆಜಿಯ ವಾಣಿಜ್ಯ ಸಿಲಿಂಡರ್‌ನ ಬೆಲೆ `100 ರೂಪಾಯಿ ಹೆಚ್ಚಳವಾದಲ್ಲಿ, ದೆಹಲಿಯಲ್ಲಿ `2101.00, ಮುಂಬೈನಲ್ಲಿ `2,051.00, ಕೋಲ್ಕತ್ತಾದಲ್ಲಿ `2,174.50 ಬೆಲೆ ಆಗುತ್ತದೆ.

ಇದನ್ನು ಓದಿ: ಮತ್ತೆ ಏರಿಕೆ ಕಂಡ ಎಲ್‌ಪಿಜಿ ದರ: ರೂ.25 ಹೆಚ್ಚಳ

ಇದಕ್ಕೂ ಮುನ್ನ ನವೆಂಬರ್ 1ರಂದು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು `266 ಹೆಚ್ಚಳ ಮಾಡಲಾಗಿತ್ತು. ಅದರಂತೆ ದೇಶದ ಹಲವು ಭಾಗಗಳಲ್ಲಿ ಸರಿಸುಮಾರು `2000ಕ್ಕೂ ಮೇಲ್ಪಟ್ಟು ದರ ನಿಗದಿಯಾಗಿದ್ದವು.  ನವೆಂಬರ್ 1ರ ಹೆಚ್ಚಳಕ್ಕೆ ಮೊದಲು, ರಾಷ್ಟ್ರ ರಾಜಧಾನಿಯಲ್ಲಿ ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ `1,734 ರೂಪಾಯಿಯಿತ್ತು. ನವೆಂಬರ್ 1ರಂದು ಬೆಲೆ ಏರಿಕೆ ಮಾಡಿದ ನಂತರ ಇದು ಎರಡನೇ ಹೆಚ್ಚಳವಾಗಿದೆ.

ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಸಬ್ಸಿಡಿ ರಹಿತ 14.2 ಕೇಜಿ ಅಡುಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ `899.50, ಕೋಲ್ಕತ್ತಾದಲ್ಲಿ `926, ಮುಂಬೈನಲ್ಲಿ `899.50 ಮತ್ತು ಚೆನ್ನೈನಲ್ಲಿ ಪ್ರತಿ ಸಿಲಿಂಡರ್‌ಗೆ `915.50, ಬೆಂಗಳೂರಿನಲ್ಲಿ `902.50 ದರವಿದೆ.

Donate Janashakthi Media

Leave a Reply

Your email address will not be published. Required fields are marked *