ಬೆಂಗಳೂರು: ವಿಧಾನ ಪರಿಷತ್ತಿನ ಕ್ಷೇತ್ರಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, 20 ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಹಿರಿಯ ಐಎಎಸ್ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಿ ಆದೇಶವನ್ನು ಹೊರಡಿಸಿದೆ.
ವಿಧಾನ ಪರಿಷತ್ತಿನ ಚುನಾವಣೆಯು ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾಗಿ ನಡೆಯಬೇಕೆಂಬ ಉದ್ದೇಶದಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಹಿರಿಯ ಐಎಎಸ್ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಬಿಬಿಎಂಪಿ ಆಡಳಿತಾಕಾರಿ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರು ಹಾಸನ ಕ್ಷೇತ್ರದ ವೀಕ್ಷಕರಾಗಿ ನೇಮಕಗೊಂಡಿದ್ದಾರೆ.
ಬೀದರ್-ತುಷಾರ್ ಗಿರಿನಾಥ್, ಗುಲ್ಬರ್ಗ-ಪಿ.ಸಿ.ಜಾಫರ್, ಬಿಜಾಪುರ-ಎಲ್.ಕೆ. ಅತೀಕ್, ಬೆಳಗಾಂ-ಏಕರೂಪ್‍ಕೌರ್, ಉತ್ತರ ಕನ್ನಡ-ಎಸ್.ಸೆಲ್ವಕುಮಾರ್, ಧಾರವಾಡ-ಎಸ್.ಆರ್. ಉಮಾಶಂಕರ್, ರಾಯಚೂರು- ಎನ್.ಜಯರಾಂ, ಬಳ್ಳಾರಿ-ವಿ.ರಾಮಪ್ರಶಾಂತ್ ಮನೋಹರ್, ಚಿತ್ರದುರ್ಗ- ನವೀನ್ ರಾಜ್ ಸಿಂಗ್, ಶಿವಮೊಗ್ಗ -ವಿ.ಅನ್ಬುಕುಮಾರ್, ದಕ್ಷಿಣ ಕನ್ನಡ- ಮಣಿವಣ್ಣನ್, ಚಿಕ್ಕಮಗಳೂರು-ವಿ.ಪೊನ್ನುರಾಜ್,
ತುಮಕೂರು- ಡಾ.ರವಿಕುಮಾರ್ ಸುರಪೂರ್, ಮಂಡ್ಯ-ರಂದೀಪ್, ಬೆಂಗಳೂರು ನಗರ-ಕೆ.ಪಿ.ಮೋಹನ್‍ರಾಜ್, ಬೆಂಗಳೂರು ಗ್ರಾಮಾಂತರ- ಶಿವಯೋಗಿ ಸಿ.ಕಳಸದ್, ಕೋಲಾರ-ಮುನೀಶ್ ಮುದ್ಗಿಲ್, ಕೊಡಗು-ವಿಶಾಲ್ ಹಾಗೂ ಮೈಸೂರು ಕ್ಷೇತ್ರದ ವೀಕ್ಷಕರಾಗಿ ಎಂ.ಎನ್. ಅಜಯ್ ನಾಗಭೂಷಣ್ ಅವರನ್ನು ನಿಯೋಜನೆ ಮಾಡಲಾಗಿದೆ.