ಪೊಲೀಸ್‌ ಪೇದೆಗಳಿಂದ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ – ಕ್ಲಾಸ್‌ ತೆಗೆದುಕೊಂಡ ಟ್ರಾಫಿಕ್‌ ವಾರ್ಡನ್‌

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಪೊಲೀಸ್‌ ಸಿಬ್ಬಂದಿಗಳು ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡ್ತೀರೋ ಘಟನೆಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ.  ಸಾರ್ವಜನಿಕರಿಗೆ ನೂರೆಂಟು ಪ್ರಶ್ನೆಗಳನ್ನು ಕೇಳಿ ದಂಡ ಕಟ್ಟಿಸಿಕೊಳ್ಳುವ ಪೊಲೀಸರಿಗೆ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಬಾರದು ಎಂಬ ತಿಳುವಳಿಕೆ ಇಲ್ಲದಾಗಿದೆಯೇ? ಅಥವಾ ನಾವು ಪೊಲೀಸರು ಎನು ಮಾಡಿದರೂ ನಡೆಯುತ್ತೆ ಎಂಬ ದರ್ಪದಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆಯೆ? ಎಂದು ರೂಲ್ಸ್‌ ಬ್ರೇಕ್‌ ಮಾಡಿದ ಪೊಲೀಸರ ವಿರುದ್ಧ ಆಕ್ರೋಶ ಕೇಳಿ ಬರುತ್ತಿದೆ.

ಹೌದು ಅಂತದ್ದೊಂದು ಘಟನೆ ಬೆಂಗಳೂರಿನಲ್ಲಿ ನಿನ್ನೆ ನಡೆದಿದೆ. ಮ್ಯಾಕ್‌ ಡೋನಾಲ್ಡ್‌ ಜಂಕ್ಷನ್‌ ಬಳಿ ಹೆಲ್ಮೆಟ್‌ ಇಲ್ಲದೆ ವಾಹನ ಚಲಿಸುತ್ತಿದ್ದ, ಹಾಗೂ ತ್ರಿಬಲ್‌ ರೈಡಿಂಗ್‌ ಮಾಡುತ್ತಿದ್ದ ಪೊಲೀಸರನ್ನು ಟ್ರಾಫಿಕ್‌ ವಾರ್ಡನ್‌ ಲತಾ ವೆಂಕಟೇಶ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೆ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಅಪ್ಲೋಡ್‌ ಮಾಡಿದ್ದಾರೆ.  ಹೆಲ್ಮೇಟ್‌ ಇಲ್ಲದೇ ವಾಹನವನ್ನು ಚಲಾಯಿಸುವುದು ಸೇರಿದಂತೆ ಇತರೆ ಟ್ರಾಫಿಕ್‌ ರೂಲ್ಸ್‌ಗಳನ್ನು ಬ್ರೇಕ್‌ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ವಿಡಿಯೊ ವೈರಲ್‌ ಆಗುತ್ತದ್ದಂತೆ ಸಾಕಷ್ಟು ಆಕ್ರೋಶ ವ್ಯಕ್ವಾಗಿದೆ. ಬಹುಷಃ ಅಧಿಕಾರಿಗಳಿಂದ ಪೋಸ್ಟ್‌ ಡಿಲಿಟ್‌ ಮಾಡುವಂತೆ ಒತ್ತಡ ಬಂದಿರುವ ಸಾಧ್ಯತೆ ಇದ್ದು,  ಸದ್ಯ ಈ ವಿಡಿಯೋವನ್ನು ಅವರು ಡಿಲೀಟ್‌ ಮಾಡಿದ್ದು, ಈ ವಿಡಿಯೋ ಇತರರ ಪ್ರೋಪೈಲ್‌ನಲ್ಲಿ ಅದು ವೈರಲ್‌ ಆಗುತ್ತಿದೆ. 

ಲತಾ ವೆಂಕಟೇಶ್‌ ರವರ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಾರ್ವಜನಿಕರು, ಪೊಲೀಸರ್‌ ರೂಲ್ಸ್‌ ಬ್ರೇಕ್‌ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.  ಪೊಲೀಸರ ನೈತಿಕತೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದಲ್ಲದೇ ಸಾಮಾನ್ಯ ಜನತೆ ತಪ್ಪು ಮಾಡಿದ್ರೆ ಕೋರ್ಟ್‌ ಕಟಕಟೆತನಕ ನಿಲ್ಲಿಸುವ ಹಾಗೂ  ಮಾಧ್ಯಮಗಳ ಮುಂದೆ ಸಿಂಗಂ ರೀತಿ ಘರ್ಜಿಸುವ ಪೊಲೀಸರು ಈಗ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

 

ಇದನ್ನೂ ಓದಿ : ಮತ್ತೆ ನಕಲಿ ಚಾಪಾ ಕಾಗದ ಸದ್ದು : ವಿಧಾನಸೌಧ ಪಡಸಾಲೆಯಲ್ಲಿ ನಡೆಯುತ್ತಿತ್ತು ಡೀಲ್

Donate Janashakthi Media

Leave a Reply

Your email address will not be published. Required fields are marked *