ನೀರಾವರಿ ಹೋರಾಟದ ನೆನಪು

ಸೋಮಪ್ಪ ಆಯಟ್ಟಿ

ಸಂಪುಟ 5, ಸಂಚಿಕೆ 52 ಡಿಸೆಂಬರ್ 25, 2011

5

ಬಿಜಾಪುರ ಅವಿಭಜಿತ ಜಿಲ್ಲೆಗೆ ನೀರಾವರಿ ಹೋರಾಟದ ಇತಿಹಾಸ ಎಂಬ ವಿಚಾರ ಸಂಕಿರ್ಣವನ್ನು ಬಿಜಾಪುರ ಸಮಾಜ ವಿಜ್ಞಾನ ವೇದಿಕೆಯಿಂದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕಮ್ಯುನಿಸ್ಟ್ ಚಳುವಳಿಯ ನೇತಾರರಾದ ದಿವಂಗತ ಕಾ|| ಎನ್.ಕೆ.ಉಪಾಧ್ಯಾಯರ 10 ವರ್ಷದ ಮರಣ-ಸ್ಮರಣೆಯ ಅಂಗವಾಗಿ ಹಾಗೂ `ಕಾ|| ಭೀಮಶಿ ಕಲಾದಗಿಯವರು ಬರೆದ ನೀರಾವರಿ ಹೋರಾಟ ಕುರಿತಾದ ಪುಸ್ತಕದ ಬಿಡುಗಡೆಯನ್ನು `ಬಸವವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನೀರಾವರಿ ಹೋರಾಟದ ಕುರಿತ ಪುಸ್ತಕದ ಬಿಡುಗಡೆ ಮಾಡಿದ ಮಾಜಿ ಶಾಸಕರು ಹಾಗೂ ಬಿಜಾಪುರ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶಿವಾನಂದ ಪಾಟೀಲರು ಜಿಲ್ಲೆಯ ನೀರಾವರಿಗಾಗಿ ಎನ್.ಕೆ.ಉಪಾಧ್ಯಾಯ, ಮುರೆಗಪ್ಪ ಸುಗಂಧಿ, ಬಾಬುರಾವ್ ಹುಜರೆ ಅವರು ನಡೆಸಿದ ಹೋರಾಟ ಅನನ್ಯ . ಒಂದುವೇಳೆ ನಾನು ಅಧಿಕಾರಕ್ಕೆ ಬಂದರೆ ಮುಳವಾಡ ಏತ ನೀರಾವರಿ ಯೋಜನೆಗೆ ಈ ಮೂವರ ಹೆಸರನ್ನು ಇಡುತ್ತೇನೆ. ಹೋರಾಟಗಾರರ ಇತಿಹಾಸ ತಿರುಚಿ ಹೋರಾಟದ ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಹೋರಾಟಗಾರರು ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸಮಾಜಕ್ಕೋಸ್ಕರ ದುಡಿಯುವ ಹೋರಾಟಗಾರರನ್ನು ಇತಿಹಾಸ ಮರೆಯುವಂತಾಗಬಾರದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದಶರ್ಿ ಜಿ.ಸಿ.ಬಯ್ಯಾರೆಡ್ಡಿ, ನೀರು ಇಂದು ವ್ಯಾಪಾರದ ಸರಕಾಗಿ ಪರಿಣಮಿಸಿದೆ. ಜಗತ್ತಿನಲ್ಲಿ ನೀರಿನ ವ್ಯಾಪಾರ ಬಹುದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ನೀರಿನ ಒಡೆತನವನ್ನು ಪಡೆದುಕೊಳ್ಳುವುದಕ್ಕಾಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಪೈಪೋಟಿ ನಡೆದಿದೆ. ನೀರಿನ ಒಡೆತನವನ್ನು ಬಹುರಾಷ್ಟ್ರೀಯ ಕಂಪನಿಗಳು ಪಡೆದುಕೊಂಡರೆ ಕೃಷಿಗೆ ಮತ್ತು ಕುಡಿಯುವುದಕ್ಕೆ ಜನ ಸಮುದಾಯಗಳಿಗೆ ನೀರು ಸಿಗದಂತಾಗುತ್ತದೆ. ನೀರಿನ ಒಡೆತನ ಜನ ಸಮುದಾಯದ ಬಳಿಯೇ ಇರುವಂತೆ ನೋಡಿಕೊಳ್ಳುವುದು ಹೋರಾಟಗಾರರ ಜವಾಬ್ದಾರಿಯಾಗಿದೆ. ಜೀವಿತದ ಅವಧಿಯವರೆಗೆ ನಿರಂತರವಾಗಿ ನೀರಾವರಿ ಯೋಜನೆಗಳ ಜಾರಿಗಾಗಿ ಹೋರಾಟ ನಡೆಸಿದ ಎನ್.ಕೆ.ಉಪಾಧ್ಯಾಯ ಅವರು ಹೋರಾಟದ ಇತಿಹಾಸದಲ್ಲಿ ಅಜರಾಮರರಾಗಿ ಉಳಿಯುತ್ತಾರೆ. ಅವರ ಸಂಪರ್ಕದಿಂದಾಗಿಯೇ ತಾವು ಚಳುವಳಿಗೆ ಸಮಪರ್ಿಸಿಕೊಂಡಿದ್ದಾಗಿ ಹೇಳಿದರು.

ಮಾಜಿ ಶಾಸಕರಾದ ಬಾಬುರೆಡ್ಡಿ ತುಂಗಳವರು ಮಾತನಾಡಿ 1958ರಲ್ಲಿ ಆಯುವರ್ೇದ ಕಾಲೇಜಿಗೆ ನಾನು ಓದಲು ಬಂದಾಗ ಸುಗಂಧಿ, ಎನ್.ಕೆ.ಉಪಾಧ್ಯಾಯ, ಬಾಬುಹುಜರೆಯವರು ಮಾರ್ಗದರ್ಶಕರಾಗಿದ್ದರು. ಆಲಮಟ್ಟಿ ಯೋಜನೆಯ ಅಡಿಗಲ್ಲು ಇಡುವಾಗ ಎನ್. ಕೆ. ಅವರ ನೇತೃತ್ವದಲ್ಲಿ ಬಂದಿದ್ದ ಅಸಂಖ್ಯಾತ ವಿದ್ಯಾಥರ್ಿಗಳಲ್ಲಿ ನಾನು ಒಬ್ಬನಾಗಿದ್ದೆ. 1961ರಲ್ಲಿ ಎನ್.ಕೆ.ಉಪಾಧ್ಯಾಯ ಅವರು ಬರೆದ ಕೃಷ್ಣೆಯ ಸಮಪಾಲಿನ ನೀರು ಪುಸ್ತಕವನ್ನು ಮನೆ ಮನೆಗೆ ಹಂಚಿದ್ದೆವು ಎಂದರು.

ಭೀಮಶಿ ಕಲಾದಗಿಯವರು ಬರೆದ ನೀರಾವರಿ ಹೋರಾಟ ಪುಸ್ತಕವನ್ನು ಶಿವಾನಂದ ಪಾಟೀಲರು ಬಿಡುಗಡೆ ಮಾಡಿದರು. ಭೀಮಶಿ ಕಲಾದಗಿಯವರು ಪುಸ್ತಕದ ಬಗ್ಗೆ ಹಾಗೂ ನೀರಾವರಿ ಹೋರಾಟದ ಕುರಿತು ತಮ್ಮ ಅನುಭವಗಳನ್ನು ಸವಿವರವಾಗಿ ಹೇಳಿದರು. ಪಂಚಪ್ಪ ಕಲಬುಗರ್ಿಯವರು ಭೀಮಾನದಿಯ ನೀರಾವರಿಯ ಹೋರಾಟ ಹೇಳುತ್ತಾ ಎನ್.ಕೆ.ಯವರು, ಅವರ ಧೀಮಂತ ನಾಯಕರು ಎಂದು ಕೊಂಡಾಡಿದರು.
ಅಧ್ಯಕ್ಷತೆಯನ್ನು ವಕೀಲರಾದ ಶ್ರೀಧರ ಕುಲಕಣರ್ಿ ವಹಿಸಿದ್ದರು. ವಿಶ್ವನಾಥ ಭಾವಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ದರಾಮ ರಂಜಣಗಿಯವರು ಎನ.ಕೆ.ಉಪಾಧ್ಯಾಯರು ರೈತರಿಗಾಗಿ ಮಾಡಿದ ಹೋರಾಟಗಳನ್ನು ಸ್ಮರಿಸಿದರು. ರೈತರು ಜಾಗೃತರಾಗಿ ಹೋರಾಟಕ್ಕೆ ಮುಂದಾಗಬೇಕು ಸರಕಾರಗಳು ರೈತರನ್ನು ವಂಚಿಸುತ್ತಿವೆ ಎಂದರು.

ಸಭೆಯ ತೀಮರ್ಾನಗಳು
ಕೃಷ್ಣಾ ಎಡದಂಡೆ ಕಾಲುವೆಗೆ ಎನ್.ಕೆ.ಉಪಾಧ್ಯಾಯ ಅವರ ಹೆಸರು ಬಲದಂಡೆ ಕಾಲುವೆಗೆ ಮುರಿಗೆಪ್ಪ ಸುಗಂಧಿ ಹೆಸರು ಮುಳವಾಡ ಏತ ನೀರಾವರಿ ಕಾಲುವೆಗೆ ಬಾಬುರಾವ್ ಹುಜರೆ ಅವರ ಹೆಸರನ್ನು ನಾಮಕರಣ ಮಾಡಬೇಕು.
ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು ತುತರ್ು ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.
ಅವಶ್ಯ ಬಿದ್ದಾಗ ಹೋರಾಟಗಾರರೆಲ್ಲ ಒಂದಾಗಿ ಸಭೆ ಸೇರಿ ಮುಂದಿನ ತೀಮರ್ಾನ ಕೈಗೊಳ್ಳಲು ತೀಮರ್ಾನಿಸಲಾಯಿತು.
ಸಭೆಯಲ್ಲಿ ಚಂದ್ರಶೇಖರ ಗಬ್ಬೂರ ರಿಯಾಜ್ ಫಾರೂಕಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಲ್ಲಿಕಾಜರ್ುನ ಯಂಡಿಗೇರಿಯವರು ಎನ್.ಕೆ.ಯವರ ಜೊತೆ ವಿದ್ಯಾಥರ್ಿ ಜೀವನದಿಂದ ನೀರಾವರಿ ಹೋರಾಟದಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರು. ಲಕ್ಷ್ಮಿ ದೇಸಾಯಿ, ವಿ ಎಂ ಕಟ್ಟಿ ವಕೀಲ, ಕೆ.ಎಸ್.ಗುಂಡಣ್ಣವರ, ಆರ್. ಎಸ್. ಡೋಮನಾಳ, ಎಂ. ಎಸ್.ಖೇಡ, ಜಿ.ಬಿ.ಸಾಲಕ್ಕಿ ವಿಶ್ವನಾಥ ಕುಲಕಣರ್ಿ, ಬಿ.ಡಿ.ಪಾಟೀಲ, ಸೋಮಪ್ಪ ಆಯಟ್ಟಿ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ ಹಂದ್ರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಣ್ಣಾರಾಯ ಈಳಗೇರ ಸ್ವಾಗತಿಸಿದರು. ಮನ್ನು ಸಾಬ ಕಲಾದಗಿ ವಂದನಾರ್ಪಣೆ ಮಾಡಿದರು.
0

Donate Janashakthi Media

Leave a Reply

Your email address will not be published. Required fields are marked *