ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ತುಂಬಾ ಹತಾಶರಾಗಿದ್ದಾರೆ. ಹತಾಶರಾಗಿ ಉದ್ವೇಗದಿಂದ ಏನೇನೊ ಮಾತನಾಡುತ್ತಿದ್ದಾರೆ. ಇತ್ತೀಚಿನವರೆಗೂ ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದರು. ಆದರೆ ಕಳೆದೊಂದು ವಾರದಿಂದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಮಾತಾಡುವುದನ್ನು ನೋಡಿದರೆ ಅಸಹ್ಯವಾಗುತ್ತದೆ ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇವರನ್ನು ಒಂದು ತಿಂಗಳು ಅಪ್ಘಾನ್ ಗೆ ಕಳಿಸಬೇಕು. ಪ್ರಧಾನಿ ಬಗ್ಗೆ ಬಾಯಿಗೆ ಬಂದಂತೆ ಮಾತಾಡುವುದನ್ನು ನಿಲ್ಲಿಸಿ. ಲೋಕಸಭಾ ಚುನಾವಣೆಯಲ್ಲಿ ಏನೇನಾಯ್ತು ಗೊತ್ತಿಲ್ವಾ? ಒಂದು ಸೀಟ್ ಗೆದ್ದು ಉಳಿದ ಕಡೆ ನೆಗೆದು ಬಿದ್ದು ಹೋದ್ರಿ ಇದೆಲ್ಲಾ ಮರೆತು ಹೋಯ್ತಾ ಸಿದ್ದರಾಮಯ್ಯ ಅವರೇ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಗೆ ನಾಚಿಕೆ ಆಗಲ್ವಾ? ಜಿ.ಟಿ. ದೇವೇಗೌಡ ರ ಎದುರೆ ಹೀನಾಯವಾಗಿ ಸೋತು ಈಗ ಅವರನ್ನೇ ಕಾಂಗ್ರೆಸ್ ಗೆ ಸೇರಿಸಿ ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ : ಜಿ.ಟಿ ಡಿ ಉಳಿಸಿಕೊಳ್ಳುವ ಪ್ರಶ್ನೆ ಬಂದಾಗ ನೋಡೋಣ – ಕುಮಾರಸ್ವಾಮಿ
ಸಿಂಧಗಿ, ಹಾನಗಲ್ ಚುನಾವಣೆ ಪ್ರಚಾರದಲ್ಲಿ ಬಿಜೆಪಿಯಿಂದ ಹಣಹಂಚಿಕೆ ಆರೋಪ ಮಾಡಿರುವ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನಡೆದ ನಂಜನಗೂಡು ಉಪ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡರು. ಕಾಂಗ್ರೆಸ್ ಗೆ ಅಭ್ಯರ್ಥಿಯೇ ಇಲ್ಲದಿದ್ದರೂ ಬೇರೆ ಪಕ್ಷದವರನ್ನು ಸೆಳೆದು ನಿಲ್ಲಿಸಿದರು. ಜೆಡಿಎಸ್ ನವರು ಅಭ್ಯರ್ಥಿ ಹಾಕದೇ ಕಾಂಗ್ರೆಸ್ ಗೆ ಅನುಕೂಲ ಮಾಡಿಕೊಟ್ಟರು. ನನ್ನಲ್ಲಿ ಹಣ ಇಲ್ಲ ಚುನಾವಣೆಗೆ ನಿಲ್ಲೋದಿಲ್ಲ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದೆ. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ನವರು ಪೊಲೀಸರ ಮೂಲಕ ಹಣ ಹಂಚಿಕೆ ಮಾಡಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಸಮ್ಮುಖದಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಿದ್ದರು. ಆ ಉಪ ಚುನಾವಣೆ ನನಗೆ ಅತಿ ಹೆಚ್ಚು ನೋವು ನೀಡಿದೆ. ಆ ನೋವನ್ನು ಜೀವನ ಪರ್ಯಂತ ಮರೆಯಲಾಗುವುದಿಲ್ಲ. ಮಾತನಾಡುವ ಮುನ್ನ ನೆನಪು ಮಾಡಿಕೊಳ್ಳಬೇಕು ಎಂದರು.
ಸಿದ್ದರಾಮಯ್ಯ ಇಂದು ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಯಾದವರು ಎರಡು ಕಡೆ ನಿಲ್ಲುತ್ತಾರಾ. ಬಾದಾಮಿಯಲ್ಲಿ ಗೆಲ್ಲದಿದ್ದರೆ ಕಾಟೂರ್ ಜಮೀನಿನಲ್ಲೋ, ಸಿದ್ದರಾಮನ ಹುಂಡಿಯ ಮನೆಯಲ್ಲೊ ಇರಬೇಕಾಗಿತ್ತು. ಸಿದ್ದರಾಮಯ್ಯ ಹಿಂದೆ ತಾವು ನಡೆದುಕೊಂಡದನ್ನು ನೆನಪು ಮಾಡಿಕೊಳ್ಳಬೇಕು. ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಜೊತೆ ಇರದಿದ್ದರೆ ಏನಾಗುತಿತ್ತು ಎಂಬುದನ್ನು ನೆನೆಯಬೇಕು. ಆತನಿಗೆ ಉಪಕಾರ ಸ್ಮರಣೆಯೇ ಇಲ್ಲ. ನನಗೆ ನಂಜನಗೂಡು ಉಪಚುನಾವಣೆಯಲ್ಲಿ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ ಎಂದು ನೆನಪಿಸಿಕೊಂಡರು.
ಜೆಡಿಎಸ್ ದು ಪಾರ್ಟಿಯಲ್ಲ. ಅದೊಂದು ಕಂಪನಿಯಷ್ಟೇ. ಬೆಂಕಿ ಹಾಕಿದ ಕಡೆ ಕೈ ಕಾಯಿಸಿ ಕೊಳ್ಳತ್ತೆ ಅಷ್ಟೇ. ಯಾರಿಗೂ ಬಹುಮತ ಬಾರದೆ ಇದ್ದರೆ ಸಾಕು ಅನ್ನೋದೆ ನಿಮ್ಮ ಲೆಕ್ಕಾಚಾರ. ನಿಮ್ಮ ಇತಿಮಿತಿ ಎಲ್ಲರಿಗೂ ಗೊತ್ತಿದೆ ಎಂದು ಜೆಡಿಎಸ್ ವಿರುದ್ಧವೂ ಹರಿಹಾಯ್ದರು.
ಸಿದ್ದರಾಮಯ್ಯ ಸಿಎಂ ಆದಾಗ ಇದೇ ಖರ್ಗೆಯವರು ಕೊರಗಿದರು. ನಿನ್ನೆ ಮೊನ್ನೆ ಬಂದವರು ಕಾಂಗ್ರೆಸ್ ನಲ್ಲಿ ಸಿಎಂ ಆದರು ಅಂತ ಖರ್ಗೆ ಕೊರಗಿದ್ದು ನಾನು ನೋಡಿದ್ದೇನೆ ಎಂದರು.
ರಾಷ್ಟ್ರ ರಾಜಕಾರಣಕ್ಕೆ ಹೋಗಿ ಸಿದ್ದರಾಮಯ್ಯ ಮಾಡೋದೇನು. ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂದು ಯಾರೂ ಹೇಳಿಲ್ಲ. ಇದೆಲ್ಲಾ ಊಹಾಪೋಹ. ಕಾಂಗ್ರೆಸ್ ದೇಶಾದ್ಯಂತ ನೆಲಕಚ್ಚಿದೆ. ಸಿದ್ದರಾಮಯ್ಯ ಅಲ್ಲಿಗೆ ಹೋಗಿ ಏನು ಮಾಡ್ತಾರೆ. ಕಾಂಗ್ರೆಸ್ ದಿವಾಳಿಯಾಗಿದೆ. ರಾಹುಲ್ ಗಾಂಧಿಯವರನ್ನು ನಾಯಕರನ್ನಾಗಿ ಯಾರು ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಬೆಲೆ ಏರಿಕೆ ಬಿಜೆಪಿ ಇಮೇಜ್ ಕಡಿಮೆ ಮಾಡುತ್ತಿರಬಹುದು. ಆದರೆ, ಬೆಲೆ ನಿಯಂತ್ರಣ ಮಾಡಲು ಕೇಂದ್ರ – ರಾಜ್ಯ ಸರಕಾರಗಳು ಪ್ರಯತ್ನ ಮಾಡುತ್ತಿವೆ. ಪಂಜಾಬ್ ಭಾಗದ ರೈತರು ಒಂದು ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಜೊತೆಯೂ ಕೇಂದ್ರ ಸರಕಾರ ಮಾತುಕತೆ ಮಾಡುತ್ತಿದೆ. ಯುಪಿ ಮತ್ತು ಬಿಹಾರ ನಲ್ಲಿ ಹಿಂದಿನಿಂದಲೂ ಶೋಷಣೆ, ದಬ್ಬಾಳಿಕೆ ನಡೆಯುತ್ತಲೇ ಇದೆ. ಇದು ಹೊಸದಲ್ಲ ಹಿಂದಿನಿಂದಲೂ ನಡೆದಿದೆ. ಮಾಯಾವತಿ ಅವರಿದ್ದಾಗಲೂ ನಡೆದಿತ್ತು. ಮಾಯಾವತಿ ದೌರ್ಜನ್ಯ ಮಾಡಿದ್ದರು ಅಂತ ಹೇಳಲಾಗುತ್ತಾ? ಈಗ ಅಲ್ಲಿ ಜಾಗೃತಿ ಮನೋಭಾವ ದಲಿತರಲ್ಲಿ ಬರುತ್ತಿದೆ ಎಂದರು.