ಕೂಳೂರು : ಕೂಳೂರು ನಾಗಬನವನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿರುವುದನ್ನು ಖಂಡಿಸಿ ಹಾಗೂ ಆರೋಪಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಡಿವೈಎಫ್ಐ ಪಂಜಿಮೊಗರು ಘಟಕ ನೇತೃತ್ವದಲ್ಲಿ ಕೂಳೂರು ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಮಾತನಾಡಿ ಜಿಲ್ಲೆಯಲ್ಲಿ ಶಾಂತಿ ಕದಡುವ ಘಟನೆಗಳು ಹೆಚ್ಚುತ್ತಿದ್ದು ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಮೂಲಕ ಕೋಮು ವೈಷಮ್ಯ ಸೃಷ್ಟಿಸುವ ಕಾರ್ಯ ತೀವೃ ಖಂಢನೀಯ ಎಂದರು. ಇತ್ತೀಚಿಗೆ ಕೋಮು ಉದ್ರೇಕಕಾರಿ ಭಾಷಣಗಳನ್ನು ನಿಯಂತ್ರಿಸುವಲ್ಲಿ ಪೋಲೀಸ್ ಇಲಾಖೆ ವೈಫಲ್ಯವಾಗಿದ್ದು ಇದರ ಪ್ರತಿಕ್ರಿಯೆಯಾಗಿ ಅಶಾಂತಿ ಸೃಷ್ಟಿಸುವ ಕೃತ್ಯಗಳು ನಡೆಯುತ್ತಿದೆ ಎಂದು ಅಪಾದಿಸಿದರು. ಅಶಾಂತಿ ಸೃಷ್ಟಿಸುವ ಕುಕೃತ್ಯಗಳಿಗೆ ಜನಸಾಮಾನ್ಯರು ಬಲಿ ಬೀಳದೆ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದರು. ಆರೋಪಿಗಳನ್ನು ಕೂಡಲೇ ಬಂಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೊರಾಟ ತೀವೃಗೊಳಿಸಲಾಗುವುದು ಎಂದು ಎಚ್ಚರಿಸಿದರು..
ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ ಕೂಳೂರು ಕಾವೂರು ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚೂರಿ ಇರಿತ, ಹಲ್ಲೆ ಪ್ರಕರಣಗಳು ವರದಿಯಾಗುತ್ತಿದ್ದು , ಇದೀಗ ನಾಗಬನ ಅಪವಿತ್ರ ಪ್ರಕರಣ ಜನರಲ್ಲಿ ಭಯ ಹಾಗೂ ಅಪನಂಬಿಕೆ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೇ ಪರಿಸರ ವ್ಯಾಪ್ತಿಯಲ್ಲಿ ಗಾಂಜಾ, ಮಾದಕ ವ್ಯಸನಿಗಳ ಹಾವಳಿ ತೀವೃವಾಗಿದೆ ಎಂದು ಅಪಾದಿಸಿದರು.
ಪ್ರತಿಭಟನೆಯ ನೇತೃತ್ವವನ್ನು ನವೀನ್ ಕೊಂಚಾಡಿ, ಅನಿಲ್ ಡಿಸೋಜ, ಬಶೀರ್ ಅಹ್ಮದ್, ಶೆರೀಫ್ ಕುಲ, ಸೌಮ್ಯ, ಪ್ರಮೀಳಾ, ನವೀನ್ ಡಿಸೋಜ, ಆಶಾ ಬೋಳೋರ್, ಮುಸ್ತಾಫ, ನೌಶಾದ್, ಹನುಮಂತ, ನಿತಿನ್ ಬಂಗೇರ ಇನ್ನಿತರರು ಭಾಗವಹಿಸಿದ್ದರು. ಚರಣ್ ಶೆಟ್ಟಿ ಸ್ವಾಗತಿಸಿ ಸಂತೋಷ್ ಡಿಸೋಜ ವಂದಿಸಿದರು.