ಅಸ್ಸಾಂ ಗೋಲಿಬಾರ್, ದೌರ್ಜನ್ಯ, ಗ್ರಾಮಸ್ಥರ ಹತ್ಯೆ ಖಂಡಿಸಿ ಯುವಜನರಿಂದ ದೇರಳಕಟ್ಟೆಯಲ್ಲಿ ಪ್ರತಿಭಟನೆ

ಮಂಗಳೂರು : ಅಸ್ಸಾಂ ಗೋಲಿಬಾರ್, ದೌರ್ಜನ್ಯ, ಗ್ರಾಮಸ್ಥರ ಹತ್ಯೆ ಖಂಡಿಸಿ DYFI ಉಳ್ಳಾಲ ವಲಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ DYFI ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅಸ್ಸಾಂ ನಡೆದ ಕೃತ್ಯ ಇದು ಸರಕಾರ ಪ್ರಾಯೋಜಿತ ಕೃತ್ಯ , ಅಸ್ಸಾಂ ನ ದೋಲ್ ಪುರದಲ್ಲಿ ಕುಟಂಬವನ್ನು ದೌರ್ಜನ್ಯದ ಮೂಲಕ ವಕ್ಕಲೆಬ್ಬಿಸಲಾಗುತ್ತಿದೆ. ಅತ್ಯಂತ ಕ್ರೂರವಾಗಿ ಇಬ್ಬರನ್ನು ಹತ್ಯೆ ಮಾಡಲಾಗಿದೆ , ಯುವಕರು ಹತಾಶರಾಗಿರುವ ಕಾಲದಲ್ಲಿ ನಾಗರೀಕರನ್ನು ಪ್ರಚೋದಿಸಿ ಗೋಲಿಬಾರ್ ಮಾಡುವಂತಹ ಮಟ್ಟಕ್ಕೆ ಪೊಲೀಸ್ ಕ್ರಮಗಳು ದೇಶದಲ್ಲಿ ಮುಂದುವರಿದರೆ ಜನ ದಂಗೆ ಹೇಳುವ ದಿನ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.

ನಿರಾಯುಧ ಪ್ರತಿಭಟನಾಕಾರನನ್ನು ಎದೆಗೆ ಗುಂಡಿಟ್ಟು ಆತನ ಮೃತ ಶರೀರದ ಮೇಲೆ ಪೊಲೀಸ್ ಮತ್ತು ಸರಕಾರಿ ಪತ್ರಕರ್ತನೊಬ್ಬ ನಡೆಸಿದ ಕೃತ್ಯ ದೇಶವೇ ತಲೆತಗ್ಗಿಸುವಂತೆ ಮಾಡಿದೆ ಎಂದು ಇಮ್ತಿಯಾಜ್ ಹೇಳಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ DYFI ಉಳ್ಳಾಲ ವಲಯ ಮುಖಂಡರಾದ ಎಡ್ವಕೇಟ್ ನಿತಿನ್ ಕುತ್ತಾರ್ ಮಾತನಾಡಿದರು , ಪ್ರತಿಭಟನೆ ಸಭೆಯಲ್ಲಿ DYFI ಉಳ್ಳಾಲ ವಲಯ ಅಧ್ಯಕ್ಷರಾದ ರಫೀಕ್ ಹರೇಕಳ , DYFI ಉಳ್ಳಾಲ ಮುಖಂಡರಾದ ರಝಾಕ್ ಮುಡಿಪು, ಅಶ್ರಪ್ ಹರೇಕಳ, ಅಬ್ಬರಾಣಿ ಬಸ್ಸ್ ನೌಕರರ ಸಂಘದ ಅಧ್ಯಕ್ಷರಾದ ಜಗದೀಶ್ , SFI ಮುಖಂಡರಾದ ತಿಲಕ್ ಕುತ್ತಾರ್ , CWFI ಮುಖಂಡರಾದ ಇಬ್ರಾಹಿಂ ಮದಕ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *