ಬೆಂಗಳೂರು: ನಗರದ ದೇವರಚಿಕ್ಕನಹಳ್ಳಿ ಬಳಿಯ ಆಶ್ರಿತ್ ಅಪಾರ್ಟ್ಮೆಂಟ್ ಸಮುಚ್ಚಯದ ಮೂರು ಫ್ಲ್ಯಾಟ್ಗಳಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮಹಿಳೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಹಲವರು ಫ್ಲ್ಯಾಟ್ಗಳಲ್ಲಿ ಸಿಲುಕಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.
‘ಫ್ಲ್ಯಾಟ್ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯುತ್ತಿತ್ತು. ಕೆಲ ನಿಮಿಷಗಳಲ್ಲೇ ಬೆಂಕಿ ಜ್ವಾಲೆ ಹೆಚ್ಚಾಗಿ, ಮೂರು ಫ್ಲ್ಯಾಟ್ಗಳಿಗೂ ಬೆಂಕಿ ಆವರಿಸಿತ್ತು. ಹೊಗೆ ಸಹ ಹೆಚ್ಚಾಗಿತ್ತು’ ಎಂದು ಪ್ರತ್ಯಕ್ಷದರ್ಶಿ ಅಕ್ಷಯ್ ಹೇಳಿಕೆ ನೀಡಿದ್ದಾರೆ. ಫ್ಲ್ಯಾಟ್ನಲ್ಲಿದ್ದ ಮೂವರು ಹೊರ ಓಡಿ ಬಂದು ಪಾರಾಗಿದ್ದಾರೆ. ಫ್ಲ್ಯಾಟ್ನಲ್ಲಿದ್ದ ಐವರ ಪೈಕಿ ಇಬ್ಬರು ಸಜೀವದಹನ ಆಗಿದ್ದಾರೆ. ಇಬ್ಬರು ಹೊರಬರಲು ಆಗದೆ ಸಜೀವದಹನವಾಗಿದ್ದಾರೆ ಎಂದು ಅಕ್ಷಯ ತಿಳಿಸಿದ್ದಾರೆ.
ಅಪಾರ್ಟ್ಮೆಂಟ್ನ ಮೂರು ಫ್ಲ್ಯಾಟ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೂರು ಫ್ಲ್ಯಾಟ್ಗಳ ಪೈಕಿ ಒಂದಕ್ಕೆ ಬೀಗ ಹಾಕಲಾಗಿದೆ. ಸ್ಥಳಕ್ಕೆ ಬಂದಿರುವ ಅಗ್ನಿಶಾಮಕದ ದಳದ ಸಿಬ್ಬಂದಿ, ಬೆಂಕಿ ನಂದಿಸುತ್ತಿದ್ದಾರೆ. ಸಿಲಿಂಡರ್ ಸ್ಪೋಟಗೊಂಡ ಕಾರಣ ಬೆಂಕಿ ಕಾಣಿಸಿಕೊಂಡಿರುವ ಶಂಕೆ ಇದ್ದು, ಸದ್ಯಕ್ಕೆ ಕಾರಣ ನಿಖರವಾಗಿ ಹೇಳಲಾಗದು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದರು.
ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಈ ಅಪಾರ್ಟ್ಮೆಂಟ್ ಸಮುಚ್ಚಯವಿದೆ. ಪೊಲೀಸರೂ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಫ್ಲ್ಯಾಟ್ನಲ್ಲಿರುವ ಎಲ್ಲ ವಸ್ತುಗಳು ಸುಟ್ಟಿವೆ.