ಗಂಗಾವತಿ: ಎಸ್‌ಕೆಎನ್‌ಜಿ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಶುಲ್ಕ 150 ಇದ್ದು ಅದನ್ನು ಈಗ ದಿಢೀರ್ ಎಂದು 1300 ರಿಂದ 1800 ಹೆಚ್ಚಳ ಮಾಡಿರುವುದರಿಂದ ದಲಿತರು ಮತ್ತು ಓಬಿಸಿ ವಿದ್ಯಾರ್ಥಿಗಳಿಗೆ ತೀವ್ರರೀತಿ ತೊಂದರೆ ಎದುರಾಗಲಿದೆ ಎಂದು ಆರೋಪಿಸಿ ಎಸ್‌ಎಫ್‌ಐ ಸಂಘಟನೆಯು ಪ್ರತಿಭಟನೆ ನಡೆಸಿದೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ದಿಢೀರನೆ ಶುಲ್ಕವನ್ನು ಏರಿಕೆ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ತೀವ್ರರೀತಿಯಲ್ಲಿ ತೊಂದರೆಗಳು ಆಗುತ್ತದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಸಂಘಟನೆಯು ಆರೋಪಿಸಿದೆ.
ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಶುಲ್ಕ ಹೆಚ್ಚಳ ಮಾಡಿರುವುದು ವಿದ್ಯಾರ್ಥಿಗಳಿಗೆ ನುಂಗಲಾರದಂತ ತುತ್ತಾಗಿದೆ. ಈ ಕೂಡಲೇ ವಿಶ್ವವಿದ್ಯಾಲಯವು ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಶುಲ್ಕವನ್ನು ವಾಪಸ್ಸುಪಡೆಯಬೇಕು.
ಇದನ್ನು ಓದಿ: ಖಾಸಗಿ ಶಾಲೆಗಳ ಹೆಚ್ಚುವರಿ ಶುಲ್ಕ ವಸೂಲಿ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ
ಅವರ ಅವರ ಆದಾಯಕ್ಕೆ ತಕ್ಕಂತೆ ಶುಲ್ಕವನ್ನು ವಿಧಿಸಬೇಕೆಂದು ಹಾಗೂ ಈಗಿರುವ ಶುಲ್ಕವನ್ನು ಕಡಿಮೆ ಮಾಡುವಂತೆ ಎಸ್‌ಎಫ್‌ಐ ಒತ್ತಾಯಿಸಿದೆ. ಪ್ರತಿಭಟನೆಯ ನಂತರ ಎಸ್‌ಕೆಎನ್‌ಜಿ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ನೀಡಿತು.
ಈ ಸಂದರ್ಭದಲ್ಲಿ ಗಂಗಾವತಿ ತಾಲೂಕು ಕಾರ್ಯದರ್ಶಿ ಶಿವಕುಮಾರ್, ಎಸ್ಎಫ್ಐ ಸದಸ್ಯರಾದ ಶರೀಫ್, ಟಿಪ್ಪು , ಹನುಮೇಶ್ ನವಲಿ ಹಾಗೂ ವಿದ್ಯಾರ್ಥಿಗಳಾದ ಚಾಂದ್ ಭಾಷಾ, ಚಿರಂಜೀವಿ, ಹನುಮೇಶ, ಚಂದ್ರಶೇಖರ್, ಅಂಬರೀಶ್, ವೆಂಕಟೇಶ್, ವೀರೇಶ್, ಶರಣು, ಕರೆಗೌಡ, ವಿಜಯ ಮತ್ತಿತರರು ಇದ್ದರು.