ದಲಿತ ಲೇಖಕರ ಪಠ್ಯವನ್ನು ಕೈಬಿಟ್ಟ ದೆಹಲಿ ವಿವಿ: ಕೆವಿಎಸ್ ಖಂಡಿನೆ

ಬೆಂಗಳೂರು: ದೆಹಲಿ ವಿಶ್ವವಿದ್ಯಾಲಯವು ಪದವಿ ಪೂರ್ವ ತರಗತಿಗಳಿಗೆ ನಿಗದಿ ಮಾಡಿದ್ದ ಇಂಗ್ಲಿಷ್ ಪಠ್ಯದಲ್ಲಿ ಮಹಾಶ್ವೇತಾದೇವಿ ಸೇರಿದಂತೆ ಅನೇಕ ಸ್ತ್ರೀವಾದಿ ಪಠ್ಯ ಸೇರಿದಂತೆ ಹಲವು ದಲಿತರ ಲೇಖಕರ ಪಠ್ಯ ಕೈಬಿಟ್ಟಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ(ಕೆವಿಎಸ್‌)ಯು ಸಹ ಖಂಡಿಸಿದೆ.

ಶಿಕ್ಷಣವು ವಿದ್ಯಾರ್ಥಿಗಳಿಗೆ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ನಿಲ್ಲುವ, ತಾರತಮ್ಯವನ್ನು ವಿರೋಧಿಸುವ, ಜಾತಿ, ಲಿಂಗ, ಭಾಷಾ ತಾರತಮ್ಯದ ಕುರಿತು ಹೆಚ್ಚು ಸಂವೇದನೆಯನ್ನು ಕಲಿಸಬೇಕು ಮತ್ತು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವ್ಯವಸ್ಥೆಯನ್ನು ವಿಮರ್ಶಾತ್ಮಕ ದೃಷ್ಟಿಕೋನದಿಂದ ನೋಡುವುದನ್ನು ಕಲಿಸಬೇಕು. ಇದನ್ನೇ ಖ್ಯಾತ ವಿಜ್ಞಾನಿ ಐನ್‌ಸ್ಟೈನ್‌ ಅವರನ್ನೂ ಒಳಗೊಂಡು ನೂರಾರು ಶಿಕ್ಷಣ ತಜ್ಞರು, ಸಮಾಜ ಸುಧಾರಕರು, ವಿಜ್ಞಾನಿಗಳ ಆಶಯವಾಗಿದೆ.

ಇಂತಹ ಹಲವು ದೃಷ್ಟಿಕೋನವನ್ನು ನೀಡುವಂತಹ ಬುಡಕಟ್ಟು ಮಹಿಳೆಯ ಕುರಿತ ಮಹಾಶ್ವೇತಾ ದೇವಿಯವರ ‘ದ್ರೌಪದಿ’ ಎಂಬ ಪಠ್ಯವನ್ನು, ರಾಮಾಯಣ ಮಹಾಕಾವ್ಯದ ‘ಸ್ತ್ರೀವಾದಿ ಓದು’ ಪಠ್ಯವನ್ನೂ ಒಳಗೊಂಡು ಹಲವಾರು ದಲಿತ ಲೇಖಕರ ಪಠ್ಯವನ್ನು ಯಾವುದೇ ಶೈಕ್ಷಣಿಕ ತರ್ಕವಿಲ್ಲದೆ ತಗೆದು ಹಾಕಿರುವುದು ಪ್ರಜಾತಂತ್ರದ ಕಗ್ಗೊಲೆಯಾಗಿದೆ. ಶೂದ್ರರಿಗೆ ಶಿಕ್ಷಣವನ್ನು ನಿರಾಕರಣೆ ಮಾಡಿದ್ದೂ ಅಲ್ಲದೆ ಶೂದ್ರರು ಜ್ಞಾನವನ್ನು ಸುಟ್ಟುಹಾಕುವ, ಬೆರಳನ್ನು ಕೊಯ್ದುಕೊಳ್ಳುವ, ಶೂದ್ರ ತಪಸ್ವಿಯನ್ನು ಕೊಲೆ ಮಾಡುವ ಬ್ರಾಹ್ಮಣ್ಯದ ಮನುವಾದವನ್ನು ಮತ್ತೊಮ್ಮೆ ಮರುಸ್ಥಾಪನೆ ಮಾಡುವ ಉದ್ದೇಶದೊಂದಿಗೆ ಈ ದಾಳಿ ನಡೆಯುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ದಲಿತ, ಬುಡಕಟ್ಟು, ಲಿಂಗತ್ವ ಅಲ್ಪಸಂಖ್ಯಾತರನ್ನು ಒಳಗೊಳ್ಳದ ಈ ಮೇಲುಸ್ತುವಾರಿ ಸಮಿತಿಯೂ ಕೂಡ ಸಂವೇದನೆಯನ್ನು ಕಳೆದುಕೊಂಡು ಇಂತಹ ನಡೆಯನ್ನು ತೋರಿದೆ. ಕರ್ನಾಟಕ ವಿದ್ಯಾರ್ಥಿ ಸಂಘಟನೆ ತೀವ್ರವಾಗಿ ಖಂಡಿಸಿದೆ. ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳವರೆಗೆ ಎಲ್ಲರ ಪಠ್ಯಗಳಲ್ಲಿ ದಲಿತ, ಮಹಿಳಾ, ಆದಿವಾಸಿ ಬುಡಕಟ್ಟು ಸಮುದಾಯದ ಕುರಿತು ಸಂವೇದನೆಯನ್ನು, ವಿಮರ್ಶಾತ್ಮಕ ದೃಷ್ಟಿಕೋನವನ್ನು ಬೆಳೆಸುವ ಪಠ್ಯಗಳನ್ನು ಹೆಚ್ಚುಹೆಚ್ಚು ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *