ಮಂಡ್ಯ: ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹಾಗೂ ದೆಹಲಿ ರೈತ ಹೋರಾಟದ ನಾಯಕ ಹನನ್ ಮೊಲ್ಲಾ ಜಿಲ್ಲೆಯ ಗಡಿ ಭಾಗ ನಿಢಘಟ್ಟಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಪುಷ್ಪಾರ್ಚಣೆ ಹಾಗೂ ಮಾಲಾರ್ಪಣೆ ಮಾಡಿ ಸ್ವಾಗತ ಕೋರಲಾಯಿತು. ದೆಹಲಿ ರೈತ ಹೋರಾಟದ ಕಣದಿಂದ ನೇರವಾಗಿ ಬೆಂಗಳೂರಿನ ಮೂಲಕ ಮಂಡ್ಯಕ್ಕೆ ನೆನ್ನೆ ರಾತ್ರಿ 11.30ರ ಸುಮಾರಿಗೆ ಆಗಮಿಸಿದದರು.
ಮಳೆ ಹನಿ ಬೀಳುತ್ತಿದ್ದರೂ ರೈತ ನಾಯಕರನ್ನು ಸ್ವಾಗತಿಸಲು ಉತ್ಸಾಹದಿಂದ ಜಿಲ್ಲೆಯ ಹೋರಾಟಗಾರರು ಭಾಗವಹಿಸಿದ್ದರು. ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯು ಮಂಡ್ಯದಲ್ಲಿ ಜರುಗಲಿದ್ದು, ಹನನ್ ಮೊಲ್ಲಾ ಅವರು ಭಾಗವಹಿಸಿದ್ದಾರೆ. ಎರಡು ದಿನಗಳ ನಡೆಯಲಿರುವ ಸಭೆಗೆ ಜಿಲ್ಲೆಯ ರೈತರು ಹಾಗೂ ವಿವಿಧ ಸಂಘಟನೆಗಳು ಜೊತೆಯಾಗಿದ್ದಾರೆ.
ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ ಪ್ರಧಾನ ಕಾರ್ಯದರ್ಶಿ ವೆಂಕಟ್, ಉಪಾಧ್ಯಕ್ಷ ಸುನೀತ್ ಛೋಪ್ರಾ, ಸಹ ಕಾರ್ಯದರ್ಶಿ ವಿಕ್ರಂ ಸಿಂಗ್ ರವರು ಹನನ್ ಮೊಲ್ಲಾ ರವರ ಜೊತೆ ಇದ್ದರು.
ಕೃಷಿ ಕೂಲಿಕಾರರ ಅಖಿಲ ಭಾರತ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಗೆ ಕೇರಳದ ಎಡರಂಗದ ಸಂಚಾಲಕ ವಿಜಯರಾಘವನ್, ಗ್ರಾಮೀಣ ಅಭಿವೃದ್ಧಿ ಮಂತ್ರಿ ಎಂ.ವಿ.ಗೋವಿಂದನ್ ಮಾಸ್ಟರ್, ಸಂಸತ್ ಸದಸ್ಯ ಶಿವದಾಸನ್, ಶಾಸಕರಾದ ಅಂಬಿಕಾ, ಪಂಜಾಬ್, ಹರ್ಯಾಣ, ಯುಪಿ, ಬಿಹಾರ, ಪಶ್ಚಿಮ ಬಂಗಾಳ,ತ್ರಿಪುರಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ನಿಢಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ಮಹೇಶ್, ಕೃಷಿ ಕೂಲಿಕಾರರ ಸಂಘಟನೆ ರಾಜ್ಯ ಉಪಾಧ್ಯಕ್ಷ ಜಿ.ಎನ್. ನಾಗರಾಜ್, ರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ,ಜನವಾದಿ ಮಹಿಳಾ ಸಂಘಟನೆ ರಾಜ್ಯ ಅಧ್ಯಕ್ಷೆ ದೇವಿ, ಮಹಿಳಾ ಮುಖಂಡರುಗಳಾದ ಸುನೀತಾ, ಮಂಜುಳಾ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಿಐಟಿಯು ಮುಖಂಡರಾದ ಸಿ ಪ್ರದೀಪ್, ತಿಮ್ಮೇಗೌಡ, ಪ್ರಾಂತ ರೈತ ಸಂಘದ ಮುಖಂಡರುಗಳಾದ ಟಿ ಎಲ್ ಕೃಷ್ಣೇಗೌಡ, ಎನ್ ಎಲ್ ಭರತ್ ರಾಜ್, ಟಿ ಹೆಚ್ ಆನಂದ್, ಟಿ ಯಶವಂತ, ರಾಮಣ್ಣ, ಭಾನುಪ್ರಕಾಶ್, ಟಿ ಆರ್ ಸಿದ್ದೇಗೌಡ, ಶಿವು, ರಾಮಣ್ಣ, ಮಹದೇವಸ್ವಾಮಿ, ಪ್ರೇಮ , ಲೀಲಾವತಿ, ದೇವರಾಜ್ ಮುಂತಾದವರು ಇದ್ದರು.
ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಎಂಎನ್ರೇಗಾ-2005 ಮತ್ತು ಗ್ರಾಮೀಣ ಕೆಲಸಗಾರರು ಎಂಬ ವಿಷಯದ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವು ಮಂಡ್ಯದ ಆರ್.ಪಿ.ರಸ್ತೆಯಲ್ಲಿರುವ ಕರ್ನಾಟಕ ಸಂಘದಲ್ಲಿ ನಡೆದಿದೆ.
ವಿಚಾರ ಸಂಕಿರಣದ ಉದ್ಘಾಟನೆಯನ್ನು ಶ್ರೀಮತಿ ದಿವ್ಯ ಪ್ರಭು ಜಿ.ಆರ್.ಜೆ., ಐಎಎಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಂಡ್ಯ ಜಿಲ್ಲಾ ಪಂಚಾಯತ್ ಇವರು ನೆರವೇರಿಸಲಿದ್ದಾರೆ. ಅತಿಥಿ ಭಾಷಣಕಾರರಾಗಿ ಎಐಎಡಬ್ಲ್ಯೂ ಅಖಿಲ ಭಾರತ ಅಧ್ಯಕ್ಷರಾದ ಎ.ವಿಜಯರಾಘವನ್, ಕೇರಳ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಅಬಕಾರಿ ಇಲಾಖೆ ಸಚಿವರಾದ ಎಂ.ವಿ.ಗೋವಿಂದನ್ ಮಾಸ್ಟರ್, ಸಿಪಿಐ(ಎಂ) ರಾಜ್ಯ ಸಭಾ ಸದಸ್ಯರಾದ ವಿ.ಶಿವದಾಸನ್, ಎಐಎಡಬ್ಲ್ಯೂಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್,ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಬಿ. ಜಯಪ್ರಕಾಶ ಗೌಡ, ಕೃಷಿ ತಜ್ಞರಾದ ಜಿ.ಎನ್.ನಾಗರಾಜ್ ಇವರುಗಳು ಭಾಗವಹಿಸಿ ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಚಂದ್ರಪ್ಪ ಹೊಸ್ಕೇರಾ ಅವರು ಉಪಸ್ಥಿತಲಿದ್ದಾರೆ.
ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಅಧ್ಯಕ್ಷರಾದ ಎಂ. ಪುಟ್ಟಮಾದು ವಹಿಸಲಿದ್ದಾರೆ. ಕಾರ್ಯಕ್ರಮದ ನಿರೂಪಣೆ ಕೆ. ಹನುಮೇಗೌಡ, ಸ್ವಾಗತ ಬಿ.ಹನುಮೇಶ್, ವಂದನಾರ್ಪಣೆ ಬಿ.ಎ.ಮಧುಕುಮಾರ್ ವಹಿಸಲಿದ್ದಾರೆ.