ಬೆಂಗಳೂರು: ಬ್ಯಾಂಕಿಂಗ್ ರಂಗದ ನೌಕರರ ನಡುವೆ ಹೋರಾಟಗಾರರಾಗಿ, ಸಂಘಟಕರಾಗಿ ಬೆಳೆದ ರೆಡ್ಡಿ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬ್ಯಾಂಕ್ ನೌಕರರ ಚಳುವಳಿಯಲ್ಲಿ ಮುಖ್ಯ ಪಾತ್ರವಹಿಸಿದ್ದ ಅವರು ವೈಶ್ಯ ಬ್ಯಾಂಕ್ ನೌಕರರ ಸಂಘದ (ಈಗ ಕೋಟಕ್ ಮಹಿಂದ್ರಾ ಬ್ಯಾಂಕ್) ಪ್ರಧಾನ ಕಾರ್ಯದರ್ಶಿಯಾಗಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಪ್ರದೇಶ ಬ್ಯಾಂಕ್ ನೌಕರರ ಸಂಘದ ಪದಾಧಿಕಾರಿಯಾಗಿ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಕೇಂದ್ರ ಸಮಿತಿ ಸದಸ್ಯರಾಗಿದ್ದರು.
ಪ್ರಗತಿಪರ, ಜನಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ರೆಡ್ಡಿ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊರಗುತ್ತಿಗೆ, ಕಾಂಟ್ರಾಕ್ಟ್, ದಿನಗೂಲಿ ನೌಕರರಿಗೆ ನ್ಯಾಯ ದೊರಕಿಸಿಕೊಡಲು ಹಲವಾರು ಕಾನೂನು ಹೋರಾಟಗಳನ್ನು ನಡೆಸಿದ್ದಾರೆ.
ರೆಡ್ಡಿಯವರ ನಿಧನದಿಂದ ಕರ್ನಾಟಕದ ಬ್ಯಾಂಕ್ ನೌಕರರ ಚಳುವಳಿಗೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದಿಂದ ಬ್ಯಾಂಕ್ ನೌಕರರ ಚಳುವಳಿಯ ಹಿರಿಯ ಕೊಂಡಿ ಕಳಚಿ ಕೊಂಡಂತಾಗಿದೆ ಎಂದು ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ ಕರ್ನಾಟಕ ಘಟಕದ ಪ್ರಧಾನ ಕಾರ್ಯರ್ಶಿ ಎಂ.ರತ್ನಾಕರ ಶೆಣೈ ಸಂತಾಪ ಸೂಚಿಸಿದ್ದಾರೆ.