ನಮ್ಮದು ತಾಲಿಬಾನ್ ದೇಶವಲ್ಲ: ತೋಮರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ನವದೆಹಲಿ: ‘ನಮ್ಮದು ತಾಲಿಬಾನ್‌ ರಾಜ್ಯವಲ್ಲ’ ಎಂದು ಹೇಳಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿಲ್ ಆಂಟಿಲ್ ಅವರು ಹಿಂದು ರಕ್ಷಾ ದಳ ಅಧ್ಯಕ್ಷ ಭೂಪೀಂದರ್ ತೋಮರ್ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ತಿಳಿಸಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಮತೀಯ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿರುವ ಭೂಪೀಂದರ್ ತೋಮರ್  ದೆಹಲಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.

ಇಂತಹ ಘಟನೆಗಳೇ ಮತೀಯ ಉದ್ವಿಗ್ನತೆಗೆ ಹಾಗೂ ದಂಗೆಗಳಿಗೆ ಕಾರಣವಾಗಿ ಆಸ್ತಿಪಾಸ್ತಿ ಹಾಗೂ ಪ್ರಾಣ ನಷ್ಟ ಉಂಟು ಮಾಡಿವೆ ಎಂಬ ಕಾರಣಕ್ಕಾಗಿ ತೋಮರ್‌ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ.

ಆಗಸ್ಟ್ 8ರಂದು ದೇಶದ ರಾಜಧಾನಿಯಲ್ಲಿರುವ ಜಂತರ್ ಮಂತರ್‌ನಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಒಂದು ನಿರ್ದಿಷ್ಟ ಕೋಮಿನ ವಿರುದ್ಧ ಹಿಂಸೆಗೆ ಪ್ರೇರೇಪಿಸುವ ಮತೀಯ ಘೋಷಣೆ ಕೂಗಿದ ಆರೋಪವನ್ನು ಭೂಪೀಂದರ್‌ ತೋಮರ್ ಎದುರಿಸುತ್ತಿದ್ದಾರೆ.

“ನಮ್ಮದು ತಾಲಿಬಾನ್ ದೇಶವಲ್ಲ. ಈ ದೇಶದ ನೆಲದ ಕಾನೂನು ಪವಿತ್ರವಾಗಿದೆ. ಇಡೀ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ ಕೆಲವು ಮನಸ್ಸುಗಳು ಇನ್ನೂ ಅಸಹಿಷ್ಣುತೆಯ ಹಾಗೂ ಸ್ವಹಿತಾಸಕ್ತಿಯ ಭಾವನೆಗಳಲ್ಲಿ ಬಂಧಿಯಾಗಿವೆ,” ಎಂದು ಆಗಸ್ಟ್ 21ರಿಂದ ನೀಡಿದ ಆದೇಶದಲ್ಲಿ ನ್ಯಾಯಾಲಯ ಹೇಳಿತ್ತು.

Donate Janashakthi Media

Leave a Reply

Your email address will not be published. Required fields are marked *