ನವದೆಹಲಿ: 2019ರ ನವೆಂಬರ್ನಲ್ಲಿ ನಡೆದಿದ್ದ ಹಿರಿಯ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಸೈಬರಾಬಾದ್ ಪೊಲೀಸರು 2019ರ ಡಿಸೆಂಬರ್ 6ರಂದು ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಸೇತುವೆಯ ಕೆಳಗೆ ನಾಲ್ವರನ್ನೂ ಎನ್ಕೌಂಟರ್ ಮಾಡಿ ಕೊಲ್ಲಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಪರ ವಿರೋಧಗಳು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪೊಲೀಸರ ಕ್ರಮವನ್ನು ಹಲವರು ಶ್ಲಾಘಿಸಿದ್ದರು. ಪೊಲೀಸರ ಎನ್ಕೌಂಟರ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನೇಮಕ ಮಾಡಿರುವ ನ್ಯಾಯಮೂರ್ತಿ ಸಿರ್ಪುಕರ್ ಆಯೋಗ ವಿಚಾರಣೆಯನ್ನು ಕೈಗೊಂಡಿದ್ದವೆ.
ಸಾಕ್ಷಿಯನ್ನು ಇಂದು ಸಂಜೆಯೊಳಗೆ ಸಲ್ಲಿಸುವಂತೆ ತೆಲಂಗಾಣ ಸರ್ಕಾರಕ್ಕೆ, ಸುಪ್ರೀಂಕೋರ್ಟ್ ನೇಮಕ ಮಾಡಿರುವ ನ್ಯಾಯಮೂರ್ತಿ ಸಿರ್ಪುಕರ್ ಆಯೋಗ ಸೂಚನೆ ನೀಡಿದೆ.
ಹೈದರಾಬಾದ್ನ ಶಂಶಾಬಾದ್ನ ಚತನ್ಪಲ್ಲಿ ಬಳಿ 26 ವರ್ಷದ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿದ ನಾಲ್ವರು ಆರೋಪಿಗಳು ಹತ್ಯೆ ಮಾಡಿದ್ದರು. ಆರೋಪಿಗಳನ್ನು ಬಂಧಿಸಿದ್ದ ಸೈಬರಾಬಾದ್ ಪೊಲೀಸರು 2019ರ ಡಿಸೆಂಬರ್ 6ರಂದು ಎನ್ಕೌಂಟರ್ ಮಾಡಿದ್ದರು.
ನ್ಯಾಯಮೂರ್ತಿ ಸಿರಪುರ್ಕರ್ ನೇತೃತ್ವದ ಆಯೋಗವು ಎನ್ಕೌಂಟರ್ಗೆ ಸಂಬಂಧಪಟ್ಟ ಸಮಗ್ರವಾದ ದಾಖಲೆಗಳನ್ನು ಸಂಗ್ರಹ ಅಂತಿಮ ಹಂತದ ಎಲ್ಲ ಕೆಲಸವನ್ನು ಕಳೆದವಾರ ಪೂರ್ಣಗೊಳಿಸಿತ್ತು. ಇದೀಗ ಸಾಕ್ಷಿ ಸಂಗ್ರಹ, ಪರಿಶೀಲನೆ ಹಂತಕ್ಕೆ ತೆರಳಿದೆ ಎಂದು ಮೂಲಗಳು ತಿಳಿಸಿವೆ. ಆಯೋಗವು ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಕ್ಕೆ ಎನ್ಕೌಂಟರ್ ಮಾಡಲಾಗಿದೆ ಎನ್ನಲಾಗುವ ಸಾಕ್ಷ್ಯಗಳನ್ನು ಸಲ್ಲಿಸಿ ಎಂದು ತೆಲಂಗಾಣ ಸರ್ಕಾರಕ್ಕೆ ಸೂಚನೆ ನೀಡಿದೆ. ಕಳೆದೆರಡು ದಿನಗಳ ಹಿಂದೆಯೇ ನಿರ್ದೇಶನ ನೀಡಿದ್ದ ಆಯೋಗ ಇಂದು (ಆಗಸ್ಟ್ 21) ಕೊನೇ ದಿನ ಎಂದಿತ್ತು. ಅದರ ಅನ್ವಯ ಇಂದು ಸಂಜೆಯೊಳಗೆ ಸರ್ಕಾರ ಸಮಿತಿ ಎದುರು ಸಾಕ್ಷಿ ಸಲ್ಲಿಕೆ ಮಾಡಬೇಕಿದೆ.
ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಅಲ್ಲದೆ, ನಮ್ಮ ಬಳಿಯಿದ್ದ ಗನ್, ಅಸ್ತ್ರಗಳನ್ನು ಕಸಿಯಲು ಮುಂದಾದರು. ಹಾಗಾಗಿ ಆತ್ಮರಕ್ಷಣೆಗಾಗಿ ಹತ್ಯೆ ಮಾಡಬೇಕಾಯ್ತು ಎಂದು ಸೈಬರಾಬಾದ್ ಪೊಲಿಸರು ಹೇಳಿಕೆ ನೀಡಿದ್ದರು. ಅತ್ಯಾಚಾರ ಆರೋಪಿಗಳ ಎನ್ಕೌಂಟರ್ ಮಾಡಿದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಎನ್ಕೌಂಟರ್ ಕಾನೂನು ಬಾಹಿರ ಎಂದೂ ಹೇಳಲಾಗಿತ್ತು.