ವಿವಿಧ ಕಂಪನಿಗಳ ಜತೆಗಿನ ತೆರಿಗೆ ವ್ಯಾಜ್ಯ ಕುರಿತ ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ

ನವದೆಹಲಿ: ವಿವಿಧ ಕಂಪನಿಗಳ ಜತೆಗಿನ ವಿವಾದಗಳನ್ನು ಬಗೆಹರಿಸಿಕೊಳ್ಳಲು ನೆರವಾಗುವ ಆದಾಯ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ, 2021 ಅನ್ನು ಲೋಕಸಭೆಯು ಅನುಮೋದನೆ ಪಡೆದುಕೊಂಡಿದೆ. ಇದು ಹಿಂದಿನ ಆದಾಯ ತೆರಿಗೆ ಕಾನೂನನ್ನು ರದ್ದುಗೊಳಿಸಲು ನೆರವಾಗುತ್ತದೆ. ಇದರೊಂದಿಗೆ, ಈ ಮಸೂದೆ ಜಾಗತಿಕ ಕಾರ್ಪೊರೇಟ್ ದೈತ್ಯ ಕಂಪನಿಗಳಾದ ಕೆರ್ನ್ ಎನರ್ಜಿ ಮತ್ತು ವೊಡಾಫೋನ್ ಜೊತೆಗಿನ ವಿವಾದಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿದ್ದುಪಡಿಯ ಅಗತ್ಯದ ಬಗ್ಗೆ ಸಂಕ್ಷಿಪ್ತ ಹೇಳಿಕೆ ನೀಡಿದರು. ವಿರೋಧ ಪಕ್ಷಗಳ ಗದ್ದಲದ ನಡುವೆಯೂ ಈ ಮಸೂದೆ ಅನುಮೋದನೆ ಪಡೆದಿದೆ.

ಈ ಪ್ರಕರಣಗಳು ವಿವಿದ ಕಡೆಗಳಲ್ಲಿ ನ್ಯಾಯಾಂಗ ವ್ಯಾಪ್ತಿಗೆ ಬರುತ್ತವೆ. ಅಂಥ ಸನ್ನಿವೇಶದಲ್ಲಿ ಸರ್ಕಾರವು ಶಾಸನಾತ್ಮಕ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಮತ್ತು ನ್ಯಾಯಾಲಯಗಳಲ್ಲಿ ಅವುಗಳ ತಾರ್ಕಿಕ ತೀರ್ಮಾನಕ್ಕಾಗಿ ಕಾಯಬೇಕಾಗಿತ್ತು ಎಂದು ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದರು.

2012ರ ಹಣಕಾಸು ಕಾಯ್ದೆ ನಿಬಂಧನೆಯು ಭಾರತೀಯ ಆಸ್ತಿಗಳನ್ನು ಒಳಗೊಂಡಂಥ ಸಾಗರದಾಚೆಯ ವಹಿವಾಟುಗಳನ್ನು ಮಾಡಲು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕಾನೂನಿನ ಬದಲಾವಣೆಗೆ ಮುನ್ನ ಜಾರಿಗೊಳಿಸಿದವು, ಭಾರತದಲ್ಲಿ ತೆರಿಗೆ ವಿಧಿಸುವುದನ್ನೂ ಒಳಗೊಂಡಂತೆ ವಿವಿಧ “ಸುದೀರ್ಘ ವ್ಯಾಜ್ಯದ ವಿಷಯ”ಗಳನ್ನು ಅವರು ಪ್ರಸ್ತಾವ ಮಾಡಿದರು.

ಹೊಸ ಮಸೂದೆಯು 17 ವಿವಾದಗಳಲ್ಲಿ ಪ್ರಸ್ತಾಪಿಸಲಾದ ತೆರಿಗೆ ಬೇಡಿಕೆಗಳನ್ನು ರದ್ದುಗೊಳಿಸುತ್ತದೆ. ತೆರಿಗೆ ಕ್ಲೇಮ್‌ಗಳನ್ನು ಕೈಬಿಡುವ ಷರತ್ತುಗಳಲ್ಲಿ ಬಾಕಿ ಇರುವ ದಾವೆಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ವಿವಾದಿತ ಪಾರ್ಟಿಗಳ ಕಡೆಯಿಂದ ವೆಚ್ಚ, ಹಾನಿ, ಬಡ್ಡಿ ಇತ್ಯಾದಿಗಳ ಕ್ಲೇಮ್ ಅನ್ನು ಕೈಬಿಡುವುದು ಸೇರಿವೆ. ವಿವಾದಗಳ ಸೌಹಾರ್ದಯುತ ಇತ್ಯರ್ಥಕ್ಕಾಗಿ ಈ ಪ್ರಕರಣಗಳಲ್ಲಿ ಪಾವತಿಸಿದ ಮೊತ್ತವನ್ನು ಯಾವುದೇ ಬಡ್ಡಿ ಇಲ್ಲದೆ ಸರ್ಕಾರವು ಮರುಪಾವತಿಸುತ್ತದೆ.

Donate Janashakthi Media

Leave a Reply

Your email address will not be published. Required fields are marked *