- ಇಂದು ಮಧ್ಯಾಹ್ನ 2.15ಕ್ಕೆ ಸಚಿವರ ಪ್ರಮಾಣ ವಚನ
- ಹಳಬರಿಗೆ ಕೊಕ್ ಸಾಧ್ಯತೆ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ಸಂಪುಟದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಇಂದು (ಬುಧವಾರ) ಮಧ್ಯಾಹ್ನ 2.15ಕ್ಕೆ ನಡೆಯಲಿದೆ ಎಂದು ರಾಜ್ಯ ಶಿಷ್ಟಾಚಾರ ವಿಭಾಗ ಮಾಹಿತಿ ನೀಡಿದೆ.
24 ರಿಂದ 27 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಿಂದ ಬೆಳಿಗ್ಗೆ 6.10ರ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದು, ಅವರ ಜೊತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡಾ ಬರಲಿದ್ದಾರೆ ಎನ್ನಲಾಗಿದೆ.
ಪಟ್ಟಿ ಹಿಡುದ ಬಂದ ಸಿಎಂ : ಮೂರು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟು ಸಂಪುಟ ಪಟ್ಟಿ ಅಂತಿಮಗೊಳಿಸಿಕೊಂಡು ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿಗೆ ಮರಳಿದ್ದಾರೆ. ಇಂದು ಮಧ್ಯಾಹ್ನ 2:15ಕ್ಕೆ ನೂತನ ಮಂತ್ರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ. ರಾಜಭನವದ ಗಾಜಿನಮನೆಯಲ್ಲಿ ಈ ಕಾರ್ಯಕ್ರಮಕ್ಕಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನು, ವರಿಷ್ಠರು ಸಂಪುಟ ಪಟ್ಟಿ ಅಂತಿಮಗೊಳಿಸಿದ್ದರೂ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದೆ. ಹಲವು ಆಕಾಂಕ್ಷಿಗಳು ಕೊನೆಯ ಕ್ಷಣದವರೆಗೂ ಪ್ರಯತ್ನ ಮುಂದುವರಿಸುತ್ತಿದ್ದಾರೆ.
ಬೊಮ್ಮಾಯಿ ಸಂಪುಟದ ಸಂಭಾವ್ಯ ಸಚಿವರ ಹೊಸ ಪಟ್ಟಿ:
- ಕೆ ಎಸ್ ಈಶ್ವರಪ್ಪ / ಅರಗ ಜ್ಞಾನೇಂದ್ರ
- ಆರ್ ಅಶೋಕ್
- ಡಾ. ಅಶ್ವಥ ನಾರಾಯಣ
- ಅರವಿಂದ ಲಿಂಬಾವಳಿ / ಶಂಕರ ಪಾಟೀಲ ಮುನೇನಕೊಪ್ಪ
- ಎಸ್ ಟಿ ಸೋಮಶೇಖರ್
- ಭೈರತಿ ಬಸವರಾಜು
- ಸಿ ಪಿ ಯೋಗೇಶ್ವರ
- ಡಾ. ಸುಧಾಕರ್
- ಬಿ ಶ್ರೀರಾಮುಲು
- ಕೆ ಪಿ ಮಾಧುಸ್ವಾಮಿ
- ಪೂರ್ಣಿಮಾ ಶ್ರೀನಿವಾಸ್
- ಉಮೇಶ್ ಕತ್ತಿ
- ರಾಜುಗೌಡ ಪಾಟೀಲ್
- ಮುರುಗೇಶ್ ನಿರಾಣಿ
- ಆನಂದ್ ಸಿಂಗ್
- ಬಿ ವೈ ವಿಜಯೇಂದ್ರ
- ಎಂ ಪಿ ಕುಮಾರಸ್ವಾಮಿ
- ದತ್ತಾತ್ರೇಯ ಪಾಟೀಲ್ ರೇವೂರ
- ಕೆ ಗೋಪಾಲಯ್ಯ
- ಬಾಲಚಂದ್ರ ಜಾರಕಿಹೊಳಿ
- ಶಿವರಾಂ ಹೆಬ್ಬಾರ್ / ವಿಶ್ವೇಶ್ವರ ಹೆಗಡೆ ಕಾಗೇರಿ
- ಬಿ ಸಿ ಪಾಟೀಲ್
- ಎಸ್ ಅಂಗಾರ
- ಸುನೀಲ್ ಕುಮಾರ್
- ನಾರಾಯಣಗೌಡ
- ಮುನಿರತ್ನ
ಇವರಿಗೆ ಕೊಕ್ ಸಾಧ್ಯತೆ ?
- ಶ್ರೀನಿವಾಸ ಪೂಜಾರಿ
- ಲಕ್ಷಣ ಸವದಿ ವಿ.
- ಸೋಮಣ್ಣ
- ಗೋವಿಂದ ಕಾರಜೋಳ
- ಆರ್. ಶಂಕರ್
- ಪ್ರಭು ಚೌಹಾಣ್
- ಎಂ.ಟಿ.ಬಿ.ನಾಗರಾಜ್
- ಸುರೇಶ್ ಕುಮಾರ್
- ಶ್ರೀಮಂತ್ ಪಾಟೀಲ್