ಬೊಮ್ಮಾಯಿ ಜನತಾ ಪರಿವಾರದವರು-ಈಗಿರುವುದು ನಮ್ಮದೇ ಸರಕಾರ: ಜೆಡಿಎಸ್ ವರಿಷ್ಠ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಈಗಿರುವ ಸರಕಾರ ನಮ್ಮದೇ ಸರಕಾರ. ಬಸವರಾಜ ಬೊಮ್ಮಾಯಿ ಜನತಾ ಪರಿವಾರದಿಂದಲೇ ಬಂದಿರುವವರು. ಬೊಮ್ಮಾಯಿ ಮತ್ತು ನಾನು ಸ್ನೇಹಿತರು. ನಾನು ಸರ್ಕಾರವನ್ನ ಅಸ್ಥಿರಗೊಳಿಸುವುದಿಲ್ಲ. ಯಡಿಯೂರಪ್ಪ ಅವರಿಗೂ ಎಲ್ಲ ಸಹಕಾರ ನೀಡಿದ್ದೆವು. ಕಾನೂನು ವಿರೋಧಿ ಚಟುವಟಿಕೆಗಳನ್ನು ಹೊರತುಪಡಿಸಿ ಸರ್ಕಾರದ ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬಸವರಾಜ ಬೊಮ್ಮಾಯಿ ನನಗೆ ಒಳ್ಳೆಯ ಸ್ನೇಹಿತರು. ಅವರಿಗೆ ಎಲ್ಲರೂ ಸಹಕಾರ ನೀಡಬೇಕು.  ಬಿ ಎಸ್ ಯಡಿಯೂರಪ್ಪಗೆ ಕೇಂದ್ರ ಸಹಕಾರ ನೀಡಲಿಲ್ಲ. ಅವರು ಮುಖ್ಯಮಂತ್ರಿ ಎಂಬದನ್ನೇ ನೋಡಲಿಲ್ಲ.ಕೇಂದ್ರ ಸರ್ಕಾರದಲ್ಲಿ ರಾಜ್ಯದ ಹಲವಾರು ಬೇಡಿಕೆ ಇನ್ನೂ ಬಾಕಿ ಇದೆ ಎಂದರು.

ಇದನ್ನು ಓದಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಹುಬ್ಬಳ್ಳಿಗೆ ಮೊದಲ ಭೇಟಿ

ರಾಜ್ಯಕ್ಕೆ ಜಿಎಸ್‌ಟಿ ಸೇರಿದಂತೆ ಎಲ್ಲಾ ರೀತಿಯ ಹಣ ಬಿಡುಗಡೆಯಾಗಬೇಕಿದೆ. ಬೊಮ್ಮಾಯಿ ಅವರಿಗೆ ಕೇಂದ್ರ ಸಹಕಾರ ನೀಡಬೇಕು. ಸದ್ಯ ಅವರಿಗೆ ಒತ್ತಡ ಇರುವಂತದ್ದು ಗೊತ್ತಿದೆ.  ನಿನ್ನೆಯೂ ಒಂದಿಷ್ಟು ಯೋಜನೆ ಜಾರಿ ಮಾಡಿದ್ದಾರೆ. ಸಂದ್ಯಾ ಸುರಕ್ಷಾ ಯೋಜನೆಗೆ ನಾನು ಸಿಎಂ ಆಗಿದ್ದಾಗಲೇ ಹೆಚ್ಚು ಮಾಡಿದ್ದೆ. ಆರೇಳು ತಿಂಗಳಿಂದ ಅವರಿಗೆ ಹಣವೇ ನೀಡಿಲ್ಲ.  ಹಾಗಾಗಿ ನಿನ್ನೆ ಘೋಷಣೆ ಆಗಿರುವ ಯೋಜನೆಗಳು ಘೋಷಣೆಯಾಗಿಯೇ ಉಳಿಯಬಾರದು ಎಂದರು.

ಅಪ್ಪರ್ ಕೃಷ್ಣ, ಮೇಕೆದಾಟು, ಮಹದಾಯಿ ವಿಚಾರವಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ.  ಕೇಂದ್ರ ಸರ್ಕಾರದ ನಮಗೆ ತೋರಿಸುತ್ತಿರುವ ಧೋರಣೆ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದೇವೆ. ರಾಜ್ಯಕ್ಕೆ ಕೇಂದ್ರದಿಂದ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ದೂರು ನೀಡುತ್ತಿದ್ದೇವೆ. ಮೊದಲ ಹಂತದಲ್ಲಿ ರಾಜ್ಯಪಾಲರಿಗೆ ಮನವಿ ಕೊಡುತ್ತೇವೆ. ಪ್ರಧಾನಿ ಅವರಿಗೂ ಪತ್ರವನ್ನು ಕಳಿಸುತ್ತೇವೆ. ಕೇಂದ್ರ ಸರ್ಕಾರದ ಸ್ಪಂದನೆ ಮೇಲೆ ಮುಂದಿನ ತೀರ್ಮಾನ ಮಾಡುತ್ತೇವೆ. ನಿರಂತರವಾಗಿ ನಮ್ಮ ಹೋರಾಟ ರಾಜ್ಯದ ನೀರಾವರಿ ಪರ ಇರುತ್ತೆ. ಯಾವುದೇ ಕಾರಣಕ್ಕೂ ಇದನ್ನ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರದ ಬಗ್ಗೆ ನಾನಷ್ಟೇ ಅಲ್ಲ, ಯತ್ನಾಳ್, ವಿಶ್ವನಾಥ್ ಅವರೇ ಹೇಳುತ್ತಾರೆ. ಯಡಿಯೂರಪ್ಪಗೆ ನಾವು ಹೇಳಿದರೆ ನೋವಾಗುತ್ತದೆ. ಹೆಚ್‌ ವಿಶ್ವನಾಥ್, ಯತ್ನಾಳ್ ಹೇಳಿದರೆ ನೋವಾಗಲ್ಲ. ಯಡಿಯೂರಪ್ಪ ಇದ್ದರೆ ಹೀನಾಯವಾಗಿ ಸೋಲುತ್ತೇವೆ. ದುರಾಡಳಿತ, ಅನಾಚಾರ ಸರಕಾರ ಅಂತ ಜನರು ಬೆಂಬಲಿಸಲ್ಲ ಅನ್ನೋ ಕಾರಣಕ್ಕೆ ಮೋದಿ ಯಡಿಯೂರಪ್ಪ ಅವರನ್ನು ಕೆಳಕ್ಕೆ ಇಳಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಇದನ್ನು ಓದಿ: ಮಹತ್ವದ ಯೋಜನೆಗಳನ್ನು ಪ್ರಕಟಿಸಿದ ನೂತನ ಸಿಎಂ: ವಿವಿಧ ವರ್ಗಗಳಿಗೆ ಆದ್ಯತೆ

ಬಿಜೆಪಿ ಜನರಿಗೆ ಕೊಟ್ಟ ಆಶ್ವಾಸನೆಯನ್ನು ಈಗಲಾದರೂ ಈಡೇರಿಸಲಿ ಯಡಿಯೂರಪ್ಪ ಅವರು ಕೊರೋನಾ ದಿಂದ ಸತ್ತವರಿಗೆ ಒಂದು ಲಕ್ಷ ಕೊಡುತ್ತೇವೆ ಎಂದಿದ್ದರು. ಆದರೆ ಇಲ್ಲಿಯವರೆಗೆ ಅದು ಆಗಿಲ್ಲ. ನೆರೆ ಹಾವಳಿ ವೀಕ್ಷಣೆ ಮಾಡೋದಷ್ಟೆ ಅಲ್ಲ. 2019 ರ ಬೆಳೆ ಪರಿಹಾರ, ಮಳೆಯಿಂದ ಹಾನಿಯಾದವರಿಗೆ ಪರಿಹಾರ ಶೀಘ್ರವಾಗಿ ನೀಡಬೇಕು ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಇದೇ ವೇಳೆ ಬಿಜೆಪಿ ನಾಯಕರಾಗಿದ್ದ ದಿವಂಗತ ಅನಂತಕುಮಾರ್ ಅವರ ಪುತ್ರಿ ವಿಜೇತಾ ಅವರು ಟ್ವೀಟ್‌ ಬಗ್ಗೆ ಪ್ರತಿಕ್ರಿಯೆ ನೀಡಿ ರಾಜ್ಯ ರಾಜಕಾರಣದ ಈ ಪರಿಸ್ಥಿತಿಯಲ್ಲಿ ಜೆಡಿಎಸ್​ ಬಗ್ಗೆ ಇಂತಹ ಹೇಳಿಕೆಗೆ ಅವರಿಗೆ ಅಭಿನಂದನೆ. ಲಕ್ಷಾಂತರ ಜೆಡಿಎಸ್ ಕಾರ್ಯಕರ್ತರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದರು.

ವಿಜೇತಾ ಅವರು ರಾಜ್ಯದಲ್ಲಿ ಜೆಡಿಎಸ್ ಇನ್ನೂ ಪ್ರಾಬಲ್ಯ ಹೊಂದಿದೆ ಎಂದು ಟ್ವೀಟ್ ಮಾಡಿದ್ದರು. ವಿಜೇತಾ ಅನಂತಕುಮಾರ್ ಜೆಡಿಎಸ್​ನತ್ತ ಆಸಕ್ತಿ ಹೊಂದಿದ್ದಾರೆಯೇ ಎಂಬ ಪ್ರಶ್ನೆ ಸಹ ಕೆಲವರ ಹುಟ್ಟಿಸಿದೆ.

Donate Janashakthi Media

Leave a Reply

Your email address will not be published. Required fields are marked *