ಕಾಲಿನ ಬೆರಳಿಗೆ ಮಾಸ್ಕ್ ನೇತುಹಾಕಿದ ಬಿಜೆಪಿ ಸಚಿವ !

ಉತ್ತರಾಖಂಡ : ದೇಶದಲ್ಲಿ ಕೊರೋನಾ ಮೊದಲ ಮತ್ತು ಎರಡನೆಯ ಅಲೆ ಅಂತ್ಯವಾಗಿ 3ನೇ ಅಲೆಯ ಅಪಾಯ ಎದುರಾಗಿತ್ತಿದೆ. ಕೇಂದ್ರ, ರಾಜ್ಯ ಸರಕಾರಗಳು ಸೇರಿದಂತೆ ಅನೇಕ ತಜ್ಞರು ಎಲ್ಲರೂ ಮಾಸ್ಕ್​ ಹಾಕಿ ಮಾಸ್ಕ್ ನಿಂದಲೇ ಕೊವಿಡ್ ಬರದಂತೆ ತಡೆಯಬಹುದು ಎಂದು ಹೇಳುತ್ತಲೇ ಇದ್ದಾರೆ. ಆದ್ರೆ ಅದೇ ಬಿಜೆಪಿ ಸರ್ಕಾರ ಇರೋ ಉತ್ತರಾಖಂಡ್​ನಲ್ಲಿ ಸಚಿವರು ಮಾಸ್ಕ್​ ಹಾಕದೇ ಮೀಟಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲ.. ಅದ್ರಲ್ಲೂ ಓರ್ವ ಸಚಿವರಾದ ಯತೀಶ್ವರಾನಂದ ಸ್ವಾಮಿ ಕಾಲ್ ಮೇಲೆ ಕಾಲ್ ಹಾಕ್ಕೊಂಡು ಕಾಲಿನ ಹೆಬ್ಬೆರಳಲ್ಲಿ ಮಾಸ್ಕ್​ ಸಿಕ್ಕಿಸಿಕೊಂಡ ಘಟನೆ ಈಗ ದೊಡ್ಡ ಚರ್ಚೆಯಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಉತ್ತರಾಖಂಡದ ಬಿಜೆಪಿ ಸರ್ಕಾರದ ಕಬ್ಬು ಕಾರ್ಖಾನೆ ಸಚಿವ ಸ್ವಾಮಿ ಯತೀಶ್ವರಾನಂದ ಈ ರೀತಿ ಟ್ರೋಲ್ ಆದವರು. ಬಿಜೆಪಿ ಪಕ್ಷದ ನಾಯಕರು ಸಭೆ ನಡೆಸುತ್ತಿರುವ ಈ ಫೋಟೋದಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸಿಲ್ಲ. ಉತ್ತರಾಖಂಡದ ಇನ್ನಿಬ್ಬರು ಸಚಿವರಾದ ಬಿಶನ್ ಸಿಂಗ್ ಚುಪಾಲ್ ಮತ್ತು ಸುಭೋದ್ ಉನಿಯಲ್ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದು, ಯಾರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಟೀಕೆ ಮಾಡಿದ್ದಾರೆ.

ಉತ್ತರಾಖಂಡದ ಕಾಂಗ್ರೆಸ್ ವಕ್ತಾರೆ ಗರೀಮಾ ಮೆಹ್ರಾ ದಸೌನಿ, ಈ ಚಿತ್ರವನ್ನು ಹಂಚಿದ್ದು, ವೈರಲ್ ಆಗಿದೆ.

ಆಡಳಿತ ಪಕ್ಷದ ನಿಷ್ಠೆ ಇದಾಗಿದ್ದು, ಬಳಿಕ ಮಾಸ್ಕ್ ಧರಿಸದ್ದಕ್ಕೆ ಬಡವರನ್ನು ಶಿಕ್ಷಿಸುತ್ತಾರೆ. ಕೋವಿಡ್ ಎರಡನೇ ಅಲೆಯಲ್ಲಿ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಾಗ ಜನರಿಗೆ ಯಾವ ಸಂದೇಶವನ್ನು ನೀಡಲು ಬಯಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಕೋವಿಡ್ ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ನಿಮಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಹಾಗಿರುವಾಗ ಜನರಿಗೆ ಮಾದರಿಯಾಗಬೇಕಾಗಿರುವ ಸಚಿವರೇ ನಿಯಮ ಉಲ್ಲಂಘಿಸಿ, ನಿರ್ಲಕ್ಷ್ಯ ವಹಿಸುತ್ತಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಮೀಟಿಂಗ್ ಮುಗಿದ ಬಳಿಕ ಇದೇ ಮಾಸ್ಕ್ ಹಾಕ್ಕೊಂಡು ಹೊರಗೆ ಹೋಗಿರಬಹುದು ಅಲ್ವಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

Donate Janashakthi Media

Leave a Reply

Your email address will not be published. Required fields are marked *