ಬೆಂಗಳೂರು: ದೇಶದಲ್ಲಿ ಇಂಧನ ಬೆಲೆ ಏರಿಕೆ ಮುಂದುವರಿದಿದೆ. ಪ್ರಸ್ತುತ ದೇಶದ 17ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ.
ಇಂದು ಪೆಟ್ರೋಲ್ 29 ಪೈಸೆಗಳಷ್ಟು ಮತ್ತೆ ಹೆಚ್ಚಳವಾಗಿದ್ದು, ಡೀಸೆಲ್ ಬೆಲೆ ಸ್ಥಿರವಾಗಿದೆ. ಬೆಲೆ ಏರಿಕೆ ಪರಿಣಾಮ ಮಂಗಳವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 101.48 ರೂ. ಇದ್ದರೆ, ಡೀಸೆಲ್ 89.72 ರೂ.ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ಗೆ 104.58 ರೂ. ಮತ್ತು ಡೀಸೆಲ್ 95.26 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಯಾವ ನಗರದಲ್ಲಿ ಎಷ್ಟು ಬೆಲೆ?
ಬೆಂಗಳೂರು: ಪೆಟ್ರೋಲ್ 104.58 ರೂ. ಮತ್ತು ಡೀಸೆಲ್ ಲೀಟರ್ಗೆ 95.26 ರೂ.
ದೆಹಲಿ: ಪೆಟ್ರೋಲ್ 101.48 ರೂ. ಮತ್ತು ಡೀಸೆಲ್ ಲೀಟರ್ಗೆ 89.72 ರೂ.
ಮುಂಬೈ: ಪೆಟ್ರೋಲ್ 107.49 ರೂ. ಮತ್ತು ಡೀಸೆಲ್ ಲೀಟರ್ಗೆ 97.29 ರೂ.
ಚೆನ್ನೈ: ಪೆಟ್ರೋಲ್ 101.96 ರೂ. ಮತ್ತು ಡೀಸೆಲ್ ಲೀಟರ್ಗೆ 94.39 ರೂ.
ಕೋಲ್ಕತ್ತಾ: ಪೆಟ್ರೋಲ್ 101.30 ರೂ. ಮತ್ತು ಡೀಸೆಲ್ ಲೀಟರ್ಗೆ 92.97 ರೂ.
ಲಕ್ನೋ: ಪೆಟ್ರೋಲ್ 98.30 ರೂ. ಮತ್ತು ಡೀಸೆಲ್ ಲೀಟರ್ಗೆ 90.27 ರೂ.