ಬೆಂಗಳೂರು: ರಾಜ್ಯದಲ್ಲಿರುವ 4 ಪ್ರಾದೇಶಿಕ ಆಯುಕ್ತರ ಕಚೇರಿ ಮುಚ್ಚಲು ನಿರ್ಧಾರ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.
ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರ ಕಚೇರಿಗಳ ಬದಲಾಗಿ, ರಾಜ್ಯದಲ್ಲಿನ್ನು ಒಂದೇ ಪ್ರಾದೇಶಿಕ ಆಯುಕ್ತರ ಕಚೇರಿ ಇರಲಿದೆ. ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿ ಗಳಿವೆ. ಐನ್ನೂರು ಜನ ಕೆಲಸ ಮಾಡುತ್ತಿದ್ದಾರೆ. ಕಚೇರಿಗೆ ಬಂದಿರುವ ಅಪೀಲುಗಳು ಕೇವಲ 200. ಈ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಇದರಿಂದ ಬಹಳಷ್ಟು ಹಣ ಉಳಿತಾಯ ಆಗುತ್ತದೆ. ಒಂದು ಪ್ರಾದೇಶಿಕ ಆಯುಕ್ತರ ಕಚೇರಿ ಮಾಡಿ ಒಬ್ಬರನ್ನು ಆಯುಕ್ತರನ್ನಾಗಿ ಮಾಡುತ್ತೇವೆ. ಅಲ್ಲಿನ ಸಿಬ್ಬಂದಿಯನ್ನು ಡಿಸಿ ಆಫೀಸ್ ಗೆ ಶಿಫ್ಟ್ ಮಾಡುತ್ತೇವೆ ಎಂದರು.
ವಿಜಯ್ ಭಾಸ್ಕರ್ ಹಿಂದಿನ ಚೀಪ್ ಸೆಕ್ರಟರಿ ಆಗಿದ್ದರು. ಕಂದಾಯ ಇಲಾಖೆಯಲ್ಲಿ ಏನೇನು ಬದಲಾವಣೆ ತರಬೇಕೆಂದು ವರದಿ ನೀಡಿದ್ದಾರೆ . ಸರಲೀಕರಣದಲ್ಲಿ ಅರ್ಜಿಗಳ ವಿಚಾರಣೆಗೆ ಅವಕಾಶ ನೀಡಿ ಹಲವಾರು ಸಲಹೆಗಳನ್ನ ಕೊಟ್ಟಿದ್ದಾರೆ.
ಸಾರ್ವಜನಿಜರ ಆಕ್ಷೇಪಣೆ ಬಳಿಕ ಬಾಡಿಗೆದಾರರ ಅಧಿನಿಯಮ ಜಾರಿ ಬಾಡಿಗೆದಾರರ ಅಧಿನಿಯಮ ಪರಿವರ್ತನೆ ಆಗಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷ ಪ್ಲಾಟ್ ಇದೆ. ಬಾಡಿಗೆದಾರರು, ಮಾಲೀಕರ ನಡುವೆ ಫೈಟ್ ಇತ್ತು. ಅವರ ನಡುವಿನ ಗೊಂದಲ ಹಾಗೇ ಉಳಿಯುತ್ತಿತ್ತು. ಕೋರ್ಟ್ ಕಚೇರಿ ಅಲೆಯ ಬೇಕಿತ್ತು. ಈಗ ಬಾಡಿಗೆದಾರ, ಮಾಲಿಕರ ನಡುವೆ ಅಗ್ರಿಮೆಂಟ್ ನಂತರ ಫೈನಲ್ ಅಗುತ್ತೆ. ಮನೆ ಮಾಲಿಕರ ಹಿತರಕ್ಷಣೆಗೆ ಮುಂದಾಗಿಲ್ಲ. ಜೂನ್ 2ರಂದು ಕೇಂದ್ರ ಸರ್ಕಾರ ಕಾನೂನು ತಂದಿದೆ. ನಾವು ಈ ಕಾನೂನನ್ನ ತರುತ್ತಿದ್ದೇವೆ. ಕಾನೂನಿನಡಿ ಇಬ್ಬರಿಗೂ ಅನುಕೂಲವಾಗಲಿದೆ. ಸರ್ಕಾರದ ಆ್ಯಪ್ ನಲ್ಲಿ ಅಪ್ಲೋಡ್ ಮಾಡಬೇಕು. ಇದರ ಬಗ್ಗೆ ಚಿಂತನೆ ನಡೆಸಿದ್ದೇವೆ. ಈ ಕಾನೂನನ್ನ ಇನ್ನೂ ಜಾರಿಗೆ ತಂದಿಲ್ಲ. ಸಲಹೆ ಸೂಚನೆಗಳನ್ನ ಕೊಟ್ಟರೆ ನಂತರ ತರುತ್ತೇವೆ ಎಂದರು.
ಕಂದಾಯ ಭೂಮಿಯಲ್ಲಿ ಅಕ್ರಮಗಣಿಗಾರಿಕೆ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಅಕ್ರಮ ಗಣಿಗಾರಿಕೆ ಅವಕಾಶವಿಲ್ಲ. ಡ್ಯಾಂನಿಂದ ಇಷ್ಟು ದೂರದಲ್ಲೇ ನಡೆಸಬೇಕೆಂಬ ನಿಯಮವಿದೆ. ಸುಮಲತಾ ಬಳಿ ದಾಖಲೆಗಳಿದ್ದರೆ ನಮ್ಮಕಚೇರಿ ಓಪನ್ ಇರುತ್ತೆ. ಕಚೇರಿಗೆ ಬಂದು ದೂರು ಸಲ್ಲಿಸಬಹುದು ಎಂದರು.
ಇದೇ ವೇಳೇ ಕುಮಾರಸ್ವಾಮಿ-ಸುಮಲತಾ ವಾಕ್ಸಮರ ವಿಚಾರ ಕುರಿತು ಮಾತನಾಡಿದ ಅವರು, ಮಂಡ್ಯದಲ್ಲಿ ಇದು ನಿಲ್ಲದ ಯುದ್ಧ. ಇಸ್ತ್ರೇಲ್, ಪ್ಯಾಲಿಸ್ತೇನ್ ಮಧ್ಯದ ಯುದ್ಧವಾಗಿದೆ. ದೇವೇಗೌಡರೇ ಇದರಿಂದ ಹಿಂದೆ ಸರಿದಿದ್ದಾರೆ ಎಂದರು.