ಸುಳ್ಳು ಹೇಳುವವರಿಗೆ ಆಸ್ಕರ್‌ ಕೊಡುವುದಿದ್ದರೆ ಪ್ರಧಾನಿ ಮೋದಿಗೆ ಕೊಡಬೇಕು: ಸಲೀಂ ಅಹ್ಮದ್

ಹಾವೇರಿ: ಸುಳ್ಳಿನ ಸರಮಾಲೆಯನ್ನು ಸೃಷ್ಟಿಸುವವರಲ್ಲಿ ಮೊದಲಿಗರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಸ್ಕರ್ ಅವಾರ್ಡ್ ಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಹೇಳಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಮಾತನಾಡಿದ ಸಲೀಂ ಅಹ್ಮದ್, ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ತರುತ್ತೇವೆ ಅಂದರು, ಆದರೆ ತರಲಿಲ್ಲ. ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಹಾಕುತ್ತೇವೆ ಎಂದರು ಅದನ್ನು ಹಾಕಿಲ್ಲ ಹೀಗೆ ಹೇಳುತ್ತಾ ಹೋದರೆ ಹಲವು ವಿಚಾರಗಳನ್ನು ಪ್ರಸ್ತಾಪಿಸಬಹುದಾಗಿದೆ ಎಂದು ಹೇಳಿದರು.

ಇದನ್ನು ಓದಿ: ತರಾತುರಿಯಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ’ ಜಾರಿ ಬೇಡ: ಸಿದ್ದರಾಮಯ್ಯ

ವರ್ಷಕ್ಕೆ ಎರಡು ಕೋಡಿವ ಉದ್ಯೋಗ ಸೃಷ್ಠಿ ಮಾಡುವೆ ಎಂದ ಪ್ರಧಾನಿಗೆ ಯುವಕರ ಶಾಪ ತಟ್ಟುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಲೀಂ ಅಹಮದ್, ಯುವಕರು ಕೆಲಸವಿಲ್ಲದೆ ಬೀದಿಯಲ್ಲಿ ಅಲೆಯುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಪದೇ ಪದೇ ಕೇಳಿಬರುತ್ತಿರುವ ಶುರುವಾಗಿರೋ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಲೀಂ ಅಹಮದ್, ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿದೆ. ನಮ್ಮ ಹೋರಾಟ ಕೋಮುವಾದಿ ಪಕ್ಷದ ವಿರುದ್ಧ. ಈ ಸಂದರ್ಭದಲ್ಲಿ ಕೆಲವರು ಕೆಲವರ ಭಾವನೆ, ವಿಚಾರಗಳನ್ನ ಹೇಳಿರಬಹುದು. ಆದರೆ, ಅದು ಈಗ ಅಪ್ರಸ್ತುತ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಸಲೀಂ ಅಹ್ಮದ್ ಹೇಳಿದರು.

Donate Janashakthi Media

One thought on “ಸುಳ್ಳು ಹೇಳುವವರಿಗೆ ಆಸ್ಕರ್‌ ಕೊಡುವುದಿದ್ದರೆ ಪ್ರಧಾನಿ ಮೋದಿಗೆ ಕೊಡಬೇಕು: ಸಲೀಂ ಅಹ್ಮದ್

Leave a Reply

Your email address will not be published. Required fields are marked *