ಕೋವಿಡ್‌ನಿಂದ ಮೃತರ ಕುಟುಂಬಗಳಿಗೆ ಪರಿಹಾರಕ್ಕೆ ಮಾರ್ಗಸೂಚಿ ರೂಪಿಸಿ: ಸುಪ್ರೀಂ ಕೋರ್ಟ್‌

ನವದೆಹಲಿ: ಕೋವಿಡ್‌ ರೋಗದಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರವನ್ನು ನೀಡುವ ಬಗ್ಗೆ ಕೇಂದ್ರ ಸರಕಾರವು ಆರು ವಾರಗಳಲ್ಲಿ ಮಾರ್ಗಸೂಚಿಯನ್ನು ರೂಪಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಇಂದು ತೀರ್ಪು ಪ್ರಕಟಿಸಿದೆ.

ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಎಷ್ಟು ಪರಿಹಾರ ನೀಡಬೇಕು ಎಂಬುದನ್ನು  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ)ವು ಕನಿಷ್ಠ ಮಾನದಂಡಗಳ ಪರಿಹಾರದ ಬಗ್ಗೆ ಶಾಸನಬದ್ಧವಾಗಿ ರೂಪಿಸಲು ನ್ಯಾಯಪೀಠ ಸೂಚಿಸಿದೆ.

ಇದನ್ನು ಓದಿ: ʻಒಂದು ರಾಷ್ಟ್ರ-ಒಂದು ಪಡಿತರʼ ಜುಲೈ 31ರವರೆಗೆ ರೂಪಿಸಿ: ಸುಪ್ರೀಂ ಕೋರ್ಟ್

ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರದ ಕೇಂದ್ರ, ರಾಜ್ಯಗಳಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ ಬಗ್ಗೆ ಇಂದು ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಬಗ್ಗೆ ಸೂಚನೆ ನೀಡಿದೆ.

ಮೊತ್ತ ಪರಿಹಾರದ ಬಗ್ಗೆ ಇಷ್ಟೇ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ, ಪರಿಹಾರವಾಗಿ ಎಷ್ಟು ಮೊತ್ತ ನೀಡಬಹುದು ಎಂದು ಪರಿಶೀಲಿಸಿ ಸೂಚಿಸಬೇಕೆಂದು ನ್ಯಾಯಾಲಯ ತಿಳಿಸಿದೆ.

ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನಿಧಿಯಿಂದ ಮೃತ ಕುಟುಂಬಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿತ್ತು.

ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 12 ಕಡ್ಡಾಯ ನಿಬಂಧನೆಯಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಸೆಕ್ಷನ್ 12 ಎಂಬ ಪದ ಬಳಕೆಯನ್ನು ಒಪ್ಪಿಕೊಂಡಿದೆ. ಸೆಕ್ಷನ್‌ 12 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಡೆಯಿಂದ ಶಾಸನಬದ್ಧ ಬಾಧ್ಯತೆಯನ್ನು ಹೊಂದಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಇದನ್ನು ಓದಿ: ಕೋವಿಡ್‌ ಮರಣ: 4 ಲಕ್ಷ ರೂ.ಗಳ ಪರಿಹಾರ ಸಾಧ್ಯವೇ? ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಕೋವಿಡ್ ನಿಂದ ನಿಧನಕ್ಕೆ ಸಂಬಂಧಿಸಿದಂತೆ ನೀಡಲಾಗುವ ʻಮರಣ ಪ್ರಮಾಣಪತ್ರʼಗಳನ್ನು ಬಗ್ಗೆಯೂ ಸರಳೀಕರಿಸಲು ಸೂಕ್ತ ಮಾರ್ಗಸೂಚಿಗಳನ್ನು ನೀಡಬೇಕೆಂದು ನ್ಯಾಯಪೀಠವು ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚಿಸಿದೆ.

ಅಲ್ಲದೆ ಹಣಕಾಸು ಆಯೋಗವು ಪ್ರಸ್ತಾಪಿಸಿದಂತೆ ಶವ ಸಂಸ್ಕಾರಕ್ಕಾಗಿ ವಿಮಾ ಯೋಜನೆಯನ್ನು ರೂಪಿಸುವ ಬಗ್ಗೆಯೂ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.ಸು

Donate Janashakthi Media

Leave a Reply

Your email address will not be published. Required fields are marked *