ಬ್ಯುಚರೆಸ್ಟ್: ಅತ್ಯಂತ ಜಿದ್ದಾಜಿದ್ದಿನ ಕಣವಾಗಿದ್ ಯೂರೋ 2020 ಕಪ್ನಲ್ಲಿ ಫ್ರಾನ್ಸ್ ತಂಡವನ್ನು 5-4 ಪೆನಾಲ್ಟಿಗಳಿಂದ ಸೋಲಿಸಿದ ಸ್ವಿಟ್ಜರ್ಲ್ಯಾಂಡ್ ತಂಡ ಕ್ವಾರ್ಟರ್ಫೈನಲ್ಗೆ ಪ್ರವೇಶ ಪಡೆದು ಫ್ರಾನ್ಸ್ನ ವಿಶ್ವ ಚಾಂಪಿಯನ್ ಪಟ್ಟಕ್ಕೆ ಅಂತ್ಯ ಹಾಡಿದೆ.
ಪಂದ್ಯ ಆರಂಭವಾಗುತ್ತಿದ್ದಂತೆಯೇ ವ್ಲಾದಿಮಿರ್ ಪೆಟ್ಕೊವಿಕ್ ನೇತೃತ್ವದ ಸ್ವಿಟ್ಜರ್ಲ್ಯಾಂಡ್ನ ಹ್ಯಾರಿಸ್ ಸೆಫೆರೋವಿಕ್ ಗೋಲ್ ಬಾರಿಸುವ ಮೂಲಕ ಖಾತೆ ತೆರೆದರು. 15ನೇ ನಿಮಿಷದಲ್ಲಿ ಗೋಲ್ ಬಾರಿಸಿದ ಸೆಫೆರೋವಿಕ್ ತಂಡ ಗೆಲುವಿನ ದಾರಿ ಸುಗಮಗೊಳಿಸಿದರು. ಅದಾಗಿ 57ನೇ ನಿಮಿಷದಲ್ಲಿ ಫ್ರಾನ್ಸ್ನ ಕರೀಮ್ ಬೆನ್ಝೆಮ ಗೋಲ್ ಬಾರಿಸಿದರು. ಮರು ನಿಮಿಷದಲ್ಲಿ ಅಂದರೆ 59ನೇ ಕರೀಂ ಬೆಂಝಿಮಾ ಎರಡನೇ ಗೋಲು ಹೊಡೆಯುವ ಮೂಲಕ 2016ರ ಯೂರೊ ಫೈನಲಿಸ್ಟ್ಗಳನ್ನು ಮತ್ತೆ ಹಳಿಗೆ ತಂದು ಪುಟ್ಬಾಲ್ ಪಂದ್ಯದ ರೋಚಕತೆ ಬದಲಿಸಿದರು.
ಫ್ರಾನ್ಸ್ನಿಂದ ಪೌಲ್ ಪೋಗ್ಬಾ 74ನೇ ನಿಮಿಷದಲ್ಲಿ ತಂಡದ ಪರ ಮೂರನೇ ಗೋಲ್ ಬಾರಿಸಿದರು. ನಂತರ 90ನೇ ನಿಮಿಷದಲ್ಲಿ ಸ್ವಿಟ್ಝರ್ಲ್ಯಾಂಡ್ ನ ಮಾರಿಯೊ ಗವ್ರನೊವಿಕ್ ಹೊಡೆದ ಗೋಲಿನಿಂದಾಗಿ ನಿಗದಿತ ಸಮಯದಲ್ಲಿ ಪಂದ್ಯ 3-3 ಗೋಲುಗಳಿಂದ ಡ್ರಾಗೊಂಡಿತ್ತು.
ಸ್ಪಾಟ್ ಕಿಕ್ನಲ್ಲಿ ಕೈಲಿಯನ್ ಬಾಪ್ಪೆ ಬೀಸಿದ ಗೋಲನ್ನು ಸೊಮೆರ್ ಬಲಕ್ಕೆ ಹಾರಿ ಅದ್ಭುತವಾಗಿ ಹಿಡಿಯುವ ಮೂಲಕ ಅಂತಿಮವಾಗಿ ವಿಶ್ವಚಾಂಪಿಯನ್ ಪಟ್ಟ ಸಾಧಿಸಿದ ಫ್ರಾನ್ಸ್ ಟೂರ್ನಿಯಿಂದ ಹೊರ ನಡೆಯಿತು.
ಪೆನಾಲ್ಟಿ ಶೂಟೌಟ್ನಲ್ಲಿ 5-4ರ ಅಂತರದಲ್ಲಿ ಸ್ವಿಟ್ಜರ್ಲ್ಯಾಂಡ್ ಗೆದ್ದಿತು. 83 ವರ್ಷಗಳಲ್ಲೇ ಮೊದಲ ಬಾರಿಗೆ ಸ್ವಿಟ್ಝರ್ಲ್ಯಾಂಡ್ ತಂಡ ಪ್ರಮುಖ ಟೂರ್ನಿಯ ನಾಕೌಟ್ನಲ್ಲಿ ಗೆಲುವು ಸಾಧಿಸಿತು. ಯೂರೋ-2020 ಟೂರ್ನಿಯ ಎಂಟರ ಘಟ್ಟಕ್ಕೆ ಮುನ್ನಡೆ ಸಾಧಿಸಿದ ಸ್ವಿಟ್ಝರ್ಲ್ಯಾಂಡ್ ತಂಡವು ಕ್ವಾರ್ಟರ್ ಫೈನಲ್ನಲ್ಲಿ ಸ್ಪೇನ್ ಜತೆ ಹೋರಾಡಲಿದೆ.