ತಿರುವನಂತಪುರಂ: ಅಂತರರಾಷ್ಟ್ರೀಯವಾಗಿ ಕಚ್ಚಾ ತೈಲದ ಬೆಲೆಗಳು ಸತತವಾಗಿ ಕುಸಿಯುತ್ತಿದ್ದರೂ ಸಹ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಪ್ರತಿದಿನ ಹೆಚ್ಚಳವಾಗುತ್ತಿದೆ. ಕೂಡಲೇ ಕೇಂದ್ರ ಸರಕಾರ ತೈಲ ಬೆಲೆಗಳನ್ನು ಇಳಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಕ್ಷದ ಕೇರಳ ರಾಜ್ಯದಲ್ಲಿ ವಿವಿದೆಡೆ ಪ್ರತಿಭಟನಾ ಪ್ರದರ್ಶನಗಳು ಜರುಗಿವೆ.
ಸಿಪಿಐ (ಎಂ) ಕೇಂದ್ರ ಸಮಿತಿ ಸದಸ್ಯ ಮತ್ತು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಸತ್ ಸದಸ್ಯರಾದ ಎಲರಾಮಂ ಕರೀಮ್ ಮಾತನಾಡಿ ʻʻಬೆಲೆ ಏರಿಕೆಯ ಪರಿಣಾಮವಾಗಿ ಜನ ಸಾಮಾನ್ಯರ ಜೀವನ ನಿರ್ವಹಣೆಯ ಸರಿದೂಗಿಸುವುದು ಕಷ್ಟಸಾಧ್ಯವಾಗಿದೆ. ಅಲ್ಲದೆ, ಇಂಧನ ನೀತಿಯು ಕೇರಳದ ಮೋಟಾರು ಉದ್ಯಮವನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಅಲ್ಲದೆ, ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಇಡೀ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ಕ್ಷೇತ್ರವೂ ಸಂಕಷ್ಟಕ್ಕೆ ದೂಡಿದೆ. ಇಂಧನ ವೆಚ್ಚಗಳು ಗಗನಕ್ಕೇರುತ್ತಿವೆ. ಅದಕ್ಕೆ ಅನುಗುಣವಾಗಿ ಆದಾಯದಲ್ಲಿ ಹೆಚ್ಚಳವಿಲ್ಲ ಎಂದು ಹೇಳಿದರು.
ಇದನ್ನು ಓದಿ: ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟಿಸಲು ಸಿಪಿಐ(ಎಂ) ಕರೆ
ಏರುತ್ತಿರುವ ಇಂಧನ ಬೆಲೆಗಳು ಗಗನಮುಖಿಯಾಗಿದ್ದು, ಸ್ಥಿರ ಆದಾಯ ಗಳಿಸುವವರು ಸಹ ಸಂಕಷ್ಟವನ್ನು ಎದುರಿಸುವಂತಾಗಿದೆ. ಇನ್ನೂ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಸರಕಾರ ಹೆಚ್ಚುವರಿ ತೆರಿಗೆಯನ್ನು ವಿಧಿಸಿರುವುದು ಸಹ ಆರ್ಥಿಕ ಹೊರೆಯಾಗಿದೆ. ಇದರ ಕೇಂದ್ರ ಸರಕಾರವೂ ಸಹ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಜನರಿಗೆ ಸಹಾಯ ಮಾಡಲು ತಯಾರಿಲ್ಲ.
ಕೇಂದ್ರ ಸರಕಾರವು ಹೆಚ್ಚುವರಿಯಾಗಿ ಹೇರಿರುವ ತೆರಿಗೆಯನ್ನು ಕಡಿಮೆ ಮಾಡಿದರೆ, ಸ್ವಾಭಾವಿಕವಾಗಿ ರಾಜ್ಯ ತೆರಿಗೆಯೂ ಕಡಿಮೆಯಾಗುತ್ತದೆ. ಇದು ಜನತೆಯ ಹೋರಾಟವಾಗಿದೆ ಎಂದು ಸಿಪಿಐ(ಎಂ) ಪಕ್ಷವು ಹೋರಾಟವನ್ನು ಹಮ್ಮಿಕೊಂಡಿದೆ.
ಸಿಪಿಐ (ಎಂ) ಮುಖಂಡರಾದ ಇ ಪಿ ಜಯರಾಜನ್ ಅವರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ʻʻಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಕುಸಿಯುತ್ತಿದ್ದರೂ ಕೇಂದ್ರ ಸರ್ಕಾರವು ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚುವರಿ ಹೊರೆ ಹಾಕುತ್ತಿದೆ. ಇಂಧನ ಬೆಲೆ ಏರಿಕೆಯನ್ನು ತಡೆಯಲು ಕೇಂದ್ರದ ಬಿಜೆಪಿ ಸರಕಾರವು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಹೇಳಿದರು.
ಕೊಟ್ಟಾಯಂ ಜಿಲ್ಲೆಯಲ್ಲಿ ಸೈಕಲ್ ಜಾಥಾದ ಮೂಲಕ ಸಂಘಟಿಸಲಾಗಿದ್ದ ಪ್ರತಿಭಟನೆಯನ್ನು ಸಿಪಿಐ (ಎಂ) ರಾಜ್ಯ ಮುಖಂಡರಾದ ಕೆ ಜೆ ಥಾಮಸ್ ಉದ್ಘಾಟಿಸಿದರು.
ತಿರುವನಂತಪುರಂ ಜಿಲ್ಲೆಯಲ್ಲಿ ಸಿಪಿಐ(ಎಂ) ಮುಖಂಡರಾದ ಅನ್ನು ಆನಂದನ್ ಅವರು ಪ್ರತಿಭಟನಾ ಸಭೆಯಲ್ಲಿ ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳ ಬಗ್ಗೆ ವಿವರವಾಗಿ ಮಾತನಾಡಿದರು.
ಸಿಪಿಐ(ಎಂ) ಪಕ್ಷವು ರಾಜ್ಯವ್ಯಾಪಿಯಾಗಿ ಹಲವು ಕಡೆಗಳಲ್ಲಿ, ಸಾವಿರಾರು ಕೇಂದ್ರಗಳಲ್ಲಿ ಆಯೋಜಿಸಿತ್ತು.