ಭೂಮಿ ಮಾರಾಟ ಅವ್ಯವಹಾರ ಆರೋಪ: ವಿಷಯ ಬಹಿರಂಗಪಡಿಸಿದ ಪತ್ರಕರ್ತ ಸೇರಿ ಮೂವರ ವಿರುದ್ಧ ಕೇಸು ದಾಖಲಿಸಿದ ರಾಮಮಂದಿರ ಟ್ರಸ್ಟ್‌ ಸದಸ್ಯನ ಸಹೋದರ

ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಕೆಲವು ಸದಸ್ಯರ ವಿರುದ್ಧ ಕೇಳಿ ಬಂದಿರುವ ಭೂ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಬಯಲಿಗೆ ಬಂದಿರುವ ಪ್ರಕರಣಕ್ಕೆ ಸಂಬಂಧಿಸಿದಮತೆ ಉತ್ತರ ಪ್ರದೇಶ ಪೊಲೀಸರು ಪತ್ರಕರ್ತ ಮತ್ತು ಇತರ ಇಬ್ಬರ ವಿರುದ್ದ ಕೇಸು ದಾಖಲಿಸಿದ್ದಾರೆ.

ಪತ್ರಕರ್ತ ವಿನೀತ್ ನರೈನ್, ಅಲ್ಕಾ ಲಾಹೋತಿ ಮತ್ತು ರಜನೀಶ್ ವಿರುದ್ದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 15ರ ಅಡಿ ಮತ್ತು ಐಟಿ ಕಾಯ್ದೆಯ ಮೂರು ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಾಗಿನಾ ಪೊಲೀಸ್ ಠಾಣೆ ಅಧಿಕಾರಿ ಕೃಷ್ಣ ಮುರಾರಿ ದೋಹ್ರೆ ಹೇಳಿದ್ದಾರೆ.

ಇದನ್ನು ಓದಿ: ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ವಿರುದ್ಧ ಭೂ ಅವ್ಯವಹಾರದ ಆರೋಪ

ವಿಶ್ವ ಹಿಂದೂ ಪರಿಷತ್ ನಾಯಕ ಮತ್ತು ರಾಮಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಸಹೋದರರ ಸಂಜಯ್ ಬನ್ಸಾಲ್ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪತ್ರಕರ್ತ ವಿನೀತ್ ನರೈನ್ ಅವರು ಚಂಪತ್ ರಾಯ್ ಸಹೋದರರು ತಮ್ಮ ಊರಿನ ಬಿಜ್ನೋರ್ ಜಿಲ್ಲೆಯಲ್ಲಿ ಭೂ ಕಬಳಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು. ಎನ್‌ಆರ್‌ಐ ಅಲ್ಕಾ ಲಾಹೋತಿ ಒಡೆತನದ ಹಸುವಿನ ಆಶ್ರಯ ತಾಣದ ಪ್ರದೇಶವಾದ 20,000 ಚದರ ಮೀಟರ್ ಭೂಮಿಯನ್ನು ದೋಚಲು ರಾಯ್‌ ತಮ್ಮ ಸಹೋದರರಿಗೆ ಸಹಾಯ ಮಾಡಿದ್ದಾರೆ ಎಂದು ಪೋಸ್ಟ್‌ನಲ್ಲಿ ವಿನೀತ್ ನರೈನ್‌ ದೂರಿದ್ದಾರೆ.

ಅಯೋಧ್ಯೆಯಲ್ಲಿನ ವಿವಾದಾತ್ಮಕ ಭೂ ವ್ಯವಹಾರಗಳ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿರುವ ಚಂಪತ್‌ ರಾಯ್‌ ಅವರು ಎದುರಿಸುತ್ತಿದ್ದಾರೆ. ಬಿಜ್ನೋರ್ ಪೊಲೀಸ್ ಅಧಿಕಾರಿ ಚಂಪತ್ ರಾಯ್ ಹಾಗೂ ಸಹೋದರರಿಗೆ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದ್ದು, ತನಿಖೆ ಇನ್ನು ಮುಂದುವರೆದಿದೆ ಎಂದಿದ್ದಾರೆ.

ಅಲ್ಕಾ ಲಾಹೋತಿ 2018 ರಿಂದ ತನ್ನ ಭೂಮಿ ಅತಿಕ್ರಮಿಸಿದವರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಪೋಸ್ಟ್ ಹೇಳುತ್ತದೆ.

ಇನ್ನು ಸಂಜಯ್ ಬನ್ಸಾಲ್ ನೀಡಿರುವ ದೂರಿನಲ್ಲಿ, ತಾನು ವಿನೀತ್ ನರೈನ್ ಫೋನ್ ಸಂಖ್ಯೆಯನ್ನು ಹುಡುಕಿ, ಕರೆ ಮಾಡಿ ಈ ಆರೋಪ ಹಿಂಪಡೆಯುವಂತೆ ತಿಳಿಸಿರುವುದಾಗಿ ಉಲ್ಲೇಖಿಸಿದ್ದಾರೆ. ಆದರೆ “ರಜನೀಶ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಫೋನ್ ಎತ್ತಿ, ನನ್ನೊಂದಿಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ,” ಎಂದು ದೂರಿನಲ್ಲಿ ಹೇಳಿದ್ದಾರೆ. ಹಾಗೆಯೇ ಈ ಆರೋಪವು “ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುತ್ತದೆ. ಇದು ಸುಳ್ಳು ಪುರಾವೆಗಳು, ಮೋಸ,” ಎಂದು ದೂರಲಾಗಿದೆ.

ಎಫ್‌ಐಆರ್ ದಾಖಲಾದ ಒಂದು ದಿನದ ನಂತರ, ಬಿಜ್ನೋರ್‌ ಪೊಲೀಸ್ ಮುಖ್ಯಸ್ಥರು ಸಂಜಯ್‌ ಬನ್ಸಾಲ್‌ ಗೆ ಸಂಬಂಧಿಸಿದ ವೀಡಿಯೊವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ, ಪೊಲೀಸ್ ತಂಡ ಇನ್ನೂ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಬಿಜ್ನೋರ್ ಪೊಲೀಸ್ ಮುಖ್ಯಸ್ಥ ಡಾ.ಧರ್ಮ್ ವೀರ್ ಸಿಂಗ್, “ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಂಪತ್ ರಾಯ್ ವಿರುದ್ಧ ಆರೋಪಿಗಳು ಮಾಡಿರುವ ಆರೋಪಗಳು ಆಧಾರರಹಿತವಾಗಿವೆ. ಸಂಬಂಧಿಕರ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ,” ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *