ಅಂಬೇಡ್ಕರ್ ಭಿತ್ತಿಚಿತ್ರ ವಿಚಾರವಾಗಿ ದಲಿತನ ಮೇಲೆ ಹಲ್ಲೆ-ಯುವಕ ನಿಧನ

ಜೈಪುರ: ಡಾ.ಬಿ.ಆರ್.ಅಂಬೇಡ್ಕರ್ ಅವರ ಭಿತ್ತಿಚಿತ್ರವನ್ನು ತೆಗೆಯಲು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳ ಹಿಂದ ನಡೆದ ಘಟನೆಯಲ್ಲಿ ರಾಜಸ್ಥಾನದ ಹನುಮಾನ್‍ಘರ್ ಜಿಲ್ಲೆಯ ಕಿಕ್ರಲಿಯಾ ಗ್ರಾಮದಲ್ಲಿ ದಲಿತ ಯುವಕ ವಿನೋದ್ ಬಮ್ನಿಯಾ (21) ಚಿಕಿತ್ಸೆ ಫಲಿಸದೆ ಶ್ರೀಗಂಗಾನಗರ ಆಸ್ಪತ್ರೆಯಲ್ಲಿ ಎರಡು ದಿನಗಳ ನಂತರ ಮೃತಪಟ್ಟ ಘಟನೆ ವರದಿಯಾಗಿದೆ.

ಭೀಮ್ ಸೇನೆಯ ಸದಸ್ಯರಾಗಿದ್ದ ವಿನೋದ್‌ ಬಾಮ್ನಿಯಾ ಅವರ ಮೇಲೆ ಜೂನ್‌ 5ರಂದು ಹಲ್ಲೆ ಮಾಡಲಾಗಿತ್ತು. ತೀವ್ರತರವಾದ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿರುವನು ಎಂದು ಪೊಲೀಸರು ತಿಳಿಸಿದ್ದಾರೆ.

ವಿನೋದ್‌, ತಮ್ಮ ಮನೆಯ ಗೋಡೆಯ ಮೇಲೆ ಅಂಬೇಡ್ಕರ್‌ ಭಿತ್ತಿಚಿತ್ರವನ್ನು ಅಂಟಿಸಿದ್ದರು. ಏಪ್ರಿಲ್ 14, ಅಂಬೇಡ್ಕರ್ ಜಯಂತಿ ಭಿತ್ತಿಚಿತ್ರವನ್ನು ಹಾಕಲಾಗಿತ್ತು. ಅವುಗಳನ್ನು ತೆರವುಗೊಳಿಸುವಂತೆ ಇತರೆ ಸಮುದಾಯದ ಯುವಕರು ಆಗ್ರಹಿಸಿದ್ದರು. ಆರೋಪಿಗಳು ಜಾತಿ ನಿಂದನೆಗೈದು ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ವಿನೋದ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವೇಳೆ ಮಾತಿನ ಚಕಮಕಿ ನಡೆದು ವಿನೋದ್‌ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದರು.

ಘಟನೆ ಬಳಿಕ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳ ಪೈಕಿ  ಅನಿಲ್ ಸಿಹಾಗ್ ಹಾಗೂ ರಾಕೇಶ್ ಸಿಹಾಗ್ ಅವರ ಹೆಸರುಗಳು ಎಫ್‍ಐಆರ್‍ನಲ್ಲಿ ಉಲ್ಲೇಖಗೊಂಡಿವೆ.

Donate Janashakthi Media

Leave a Reply

Your email address will not be published. Required fields are marked *