ದೇಶದೆಲ್ಲೆಡೆ ಉಚಿತ ಲಸಿಕೆಗಾಗಿ ಕೇಂದ್ರಕ್ಕೆ ಒತ್ತಾಯ: ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ತಿರುವನಂತಪುರಂ: ದೇಶದ ಎಲ್ಲೆಡೆ ಎಲ್ಲಾ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ವಿತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಸಂಬಂಧಿಸಿದಂತೆ ಕೇರಳ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರವಾಯಿತು.

ಕೇರಳದ ಆಡಳಿತರೂಢ ಎಲ್‌ಡಿಎಫ್‌ ಸರಕಾರದ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು, ಇಂದು ಮಹತ್ವದ ನಿರ್ಣಯವೊಂದನ್ನು ಅಂಗೀಕರಿಸಿದೆ.

ಇದನ್ನು ಓದಿ: ಜಿಡಿಪಿ ದರ: ಸ್ವಾತಂತ್ರ್ಯ ನಂತರ ಶೇಕಡಾ 7.3ರಷ್ಟು ಕುಸಿತ

ಕೇರಳ ರಾಜ್ಯದಲ್ಲಿ ತೀವ್ರವಾಗಿ ಕೋವಿಡ್ ಲಸಿಕೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ವೀಣಾ ಜಾರ್ಜ್ ಅವರು ಸದನದಲ್ಲಿ ಈ ನಿರ್ಣಯವನ್ನು ಮಂಡಿಸಿದರು. ಇದೇ ವೇಳೆ ಸಕಾಲಿಕವಾಗಿ ಲಸಿಕೆ ವಿತರಿಸುವಂತೆ ನಿರ್ಣಯವನ್ನು ಮಂಡಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

‘ಕೋವಿಡ್‌–19 ವಿರುದ್ಧ ಹೋರಾಡುವುದಕ್ಕಾಗಿ ನಾವು ಸಮಾಜದ ಎಲ್ಲ ವರ್ಗದವರಿಗೂ ಉಚಿತವಾಗಿ  ಲಸಿಕೆ ಒದಗಿಸಬೇಕು. ಇದರಿಂದ ಸಮಾಜವನ್ನು ವೈರಸ್‌ನಿಂದ ರಕ್ಷಿಸಿದಂತಾಗುತ್ತದೆ‘ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಕೋವಿಡ್ 19 ಸಾಂಕ್ರಾಮಿಕದ ಮೊದಲ ಅಲೆ, ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸಿದೆ. ಈಗ ದೇಶವು ಎರಡನೇ ಅಲೆಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಲಸಿಕೆ ನೀಡುವುದನ್ನು ವೇಗಗೊಳಿಸಿದರೆ, ದೇಶದ ಆರ್ಥಿಕತೆಯ ಸುಧಾರಣೆಗೆ ಸಹಾಯವಾಗುತ್ತದೆ‘ ಎಂದು ಅವರು ಅಭಿಪ್ರಾಯಪಟ್ಟರು.‌ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮತ್ತು ಸಮಾಜದ ಎಲ್ಲ ವರ್ಗದವರಿಗೂ ಲಸಿಕೆ ನೀಡುವುದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಇದನ್ನು ಓದಿ: ಲಕ್ಷದ್ವೀಪದ ಜನರಿಗೆ ಬೆಂಬಲ: ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಇಂದು ಕೇರಳ ವಿಧಾನಸಭೆಯಲ್ಲಿ ಉಚಿತ ಲಸಿಕೆಗಾಗಿ ನಿರ್ಣಯ ಅಂಗೀಕರಿಸಿದೆ.

ಉಚಿತ ಲಸಿಕೆ ವಿತರಣೆಗಾಗಿ ಬಿಜೆಪಿಯೇತರ ಆಡಳಿತವಿರುವ 11 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಳೆದ ಎರಡು ದಿನಗಳ ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಪತ್ರವನ್ನು ಬರೆದಿದ್ದರು. ಲಸಿಕೆ ವಿತರಣೆಯ ಹೊರೆ ಸಂಪೂರ್ಣವಾಗಿ ರಾಜ್ಯಗಳ ಮೇಲೆ ಅವಲಂಭಿಸಿದರೆ ಹಣಕಾಸಿನ ತೀವ್ರ ಬಿಕ್ಕಟ್ಟು ಎದುರಾಗಲಿದೆ ಎಂದು ಪತ್ರದ ಮೂಲಕ ತಿಳಿಸಲಾಗಿತ್ತು. ಈಗಾಗಲೇ ಕೋವಿಡ್‌ ಎರಡನೇ ಅಲೆ ತೀವ್ರವಾಗಿ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದಿರುವುದು ದುರಾದೃಷ್ಟಕರವೆಂದು ಪತ್ರದಲ್ಲಿ ತಿಳಿಸಿದ್ದರು.

ಎರಡನೇ ಅವಧಿಗೆ ಅಧಿಕಾರವನ್ನು ವಹಿಸಿಕೊಂಡ ಎಲ್‌ಡಿಎಫ್‌ ಸರಕಾರದ ನಂತರ ನೂತನ ಮಂತ್ರಿಮಂಡಲದಲ್ಲಿ ವಿಣಾ ಜಾರ್ಜ್‌ ಅವರು ಆರೋಗ್ಯ ಸಚಿವರಾಗಿ ಕಾರ್ಯವನ್ನು ನಿಭಾಯಿಸುತ್ತಿದ್ದಾರೆ.

ಮೇ 24ರಿಂದ ಅಧಿವೇಶನ ನಡೆಯುತ್ತಿದೆ. ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಆಡಳಿತಾರೂಢ ಎಲ್‌ಡಿಎಫ್‌ ಮತ್ತು ಯುಡಿಎಫ್‌ ಸದಸ್ಯರು ಸಣ್ಣ ಬದಲಾವಣೆಗಳನ್ನು ಸೂಚಿಸಿದ ನಂತರ ನಿರ್ಣಯವನ್ನು ಸರ್ವಾನುಮತದಿಂದ ಬೆಂಬಲಿಸಿದರು.

Donate Janashakthi Media

Leave a Reply

Your email address will not be published. Required fields are marked *