ನೆಗೆಟಿವ್ ರಿಪೋರ್ಟ್ ಹೊಂದಿದ್ದ 10 ಅಂಗಡಿಗಳಿಗೆ ಬೀಗ

 

ಮಡಿಕೇರಿ : ಕೊವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದನ್ನು ಕಡ್ಡಾಯಗೊಳಿಸಿದ್ದರೂ ಆ ನಿಯಮವನ್ನು ಉಲ್ಲಂಘಿಸಿದ್ದ ಹತ್ತು ಅಂಗಡಿಗಳನ್ನು ಮಡಿಕೇರಿ ನಗರಸಭೆ ಮುಚ್ಚಿಸಿದೆ.

ಮಡಿಕೇರಿ ನಗರದಲ್ಲಿ ಕೊವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮಿತಿಮೀರುತ್ತಿದ್ದು, ನಿಯಂತ್ರಿಸುವುದಕ್ಕಾಗಿ ನಗರಸಭೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಗತ್ಯ ವಸ್ತುಗಳ ಮಾರಾಟ ಮಾಡಬೇಕಾದರೂ ವ್ಯಾಪಾರಿಗಳು ಕೊವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ರಿಪೋರ್ಟ್ ಹೊಂದಿರುವುದನ್ನು ಕಡ್ಡಾಯಗೊಳಿಸಿದೆ. ಕೊವಿಡ್ ಟೆಸ್ಟ್ ಮಾಡಿಸುವಂತೆ ಎಲ್ಲಾ ವ್ಯಾಪಾರಿಗಳಿಗೆ ಕಳೆದ ವಾರವೇ ನಗರಸಭೆ ಸೂಚನೆ ನೀಡಿತ್ತು.

ಹೀಗಾಗಿಿ ಇಂದು ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಕೊವಿಡ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಹೊಂದಿರುವ ಬಗ್ಗೆ ಪರಿಶೀಲಿಸಲು ಫೀಲ್ಡಿಗಿಳಿದಿದ್ದರು. ಎಲ್ಲಾ ಅಂಗಡಿ ಮುಂಗಟ್ಟಗಳಿಗೆ ದಾಳಿ ಮಾಡಿದ ನಗರಸಭೆ ಅಧಿಕಾರಿಗಳು ಕೊವಿಡ್ ರಿಪೋರ್ಟ್ ಪರಿಶೀಲಿಸಿದರು. ಈ ವೇಳೆ ಹತ್ತಕ್ಕೂ ಹೆಚ್ಚು ಅಂಗಡಿಗಳು ಮಾಲೀಕರು ಮತ್ತು ಸಿಬ್ಬಂದಿ ಕೊವಿಡ್ ಟೆಸ್ಟ್ ಮಾಡಿಸಿರಲಿಲ್ಲ. ಇದರಿಂದ ನಗರಸಭೆ ಆಯುಕ್ತ ರಾಮದಾಸ್ ಯಾವುದೇ ಮುಲಾಜಿಲ್ಲದೆ ಅಂಗಡಿಗಳ ಮುಚ್ಚಿಸಿದರು.

ಮೆಡಿಕಲ್ಶಾಪ್ ಗಳಲ್ಲೂ ಕೊವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದ್ದರಿಂದ ನಗರದಲ್ಲಿ ಎರಡು ಮೆಡಿಕಲ್ ಶಾಪ್ ಗಳನ್ನು ಮುಚ್ಚಿಸಿದರು. ಈ ವೇಳೆ ಆರ್ನ ಮೆಡಿಲ್ ಶಾಪ್ ನ ಮಾಲೀಕರು ಮತ್ತು ಸಿಬ್ಬಂದಿ ನಗರ ಸಭೆ ಆಯುಕ್ತರ ವಿರುದ್ಧ ಗಲಾಟೆ ಮಾಡಿದರು. ನೀವೆ ನಿಯಮ ಉಲ್ಲಂಘನೆ ಮಾಡುತ್ತೀರಾ, ಈಗ ನೋಡಿದ್ರೆ ಮೆಡಿಕಲ್ ಶಾಪ್ ಮುಚ್ಚಿಸಲು ಬಂದಿದ್ದೀರಾ ಎಂದು ನಗರಸಭೆ ಆಯುಕ್ತ ರಾಮದಾಸ್ ಜೊತೆ ವಾಗ್ವಾದ ನಡೆಸಿದರು. ಇದರಿಂದ ಸಿಟ್ಟಿಗೆದ್ದ ರಾಮದಾಸ ಮೆಡಿಕಲ್ ಶಾಪ್ ವಿರುದ್ಧ ಪ್ರಕರಣ ದಾಖಲಿಸುವಂತೆ ನಗರಸಭೆ ಸಿಬ್ಬಂದಿಗೆ ಸೂಚನೆ ನೀಡಿದರು.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಮದಾಸ್ ನಗರದಲ್ಲಿ ಈಗಾಗಲೇ 10 ಕ್ಕೂ ಹೆಚ್ಚು ಅಂಗಡಿಗಳನ್ನು ಮುಚ್ಚಿಸಿದ್ದೇವೆ. ಕೊವಿಡ್ ಮುಗಿಯುವವರೆಗೆ ಈ ಅಂಗಡಿಗಳನ್ನು ತೆರೆಯುವುದಕ್ಕೆ ಅವಕಾಶ ಇರುವುದಿಲ್ಲ. ಇನ್ನು ತರಕಾರಿ ವ್ಯಾಪಾರಿಗಳಿಗೂ ಕೆಲವರಿಗೆ ಸೋಂಕು ದೃಢಪಟ್ಟಿದ್ದು, ಅವರು ಇಂದಿನಿಂದ ವ್ಯಾಪಾರ ಮಾಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *