ಟೂಲ್‌ಕಿಟ್‌ ವಿವಾದ: ಮಾಜಿ ಮುಖ್ಯಮಂತ್ರಿ ಬಿಜೆಪಿಯ ರಮಣ್‌ ಸಿಂಗ್‌ಗೆ ನೋಟಿಸ್‌ ಜಾರಿ

ರಾಯಪುರ: ‘ಕೋವಿಡ್‌ ಟೂಲ್‌ಕಿಟ್‌’ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಒಳಪಡಲು ಮೇ 24ರಂದು ತಮ್ಮ ನಿವಾಸದಲ್ಲಿಯೇ ಇರಬೇಕೆಂದು ಛತ್ತೀಸಘಡ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ರಮಣ್‌ ಸಿಂಗ್‌ ಅವರಿಗೆ ರಾಯಪುರ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಪೊಲೀಸರಿಗೆ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಆಕಾಶ್‌ ಶರ್ಮಾ ಅವರ ದೂರಿನ ಮೇರೆಗೆ ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ರಮಣ್‌ ಸಿಂಗ್‌ ಸೇರಿದಂತೆ ಇತರರು ಟೂಲ್‌ಕಿಟ್‌ ಹೆಸರಿನಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಹಾಗೂ ಜನರ ನಡುವೆ ದ್ವೇಷವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋ‍ಪಿಸಿ ಎನ್‌ಎಸ್‌ಯುಐದ ಛತ್ತೀಸಗಡ ಘಟಕದ ಅಧ್ಯಕ್ಷ ಆಕಾಶ್‌ ಶರ್ಮಾ ಈ ಸಂಬಂಧ ದೂರು ನೀಡಿದ್ದರು.

ʻಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಸುಳ್ಳು ವಿಷಯಗಳನ್ನು ಟ್ವಿಟ್ಟರ್‌ ಮೂಲಕ ಹಂಚಿಕೊಂಡಿದ್ದಾರೆʼ ಎಂದು ಆರೋಪಿಸಿದ್ದಾರೆ.

ರಮಣ್‌ ಸಿಂಗ್‌ ಅವರ ಟ್ವಿಟ್ಟರ್‌ ಖಾತೆಯ ಮೂಲಕ ಎಐಸಿಸಿ ರಿಸರ್ಚ್‌ ಪ್ರಾಜೆಕ್ಟ್‌ ಅಥವಾ ‘ಕಾರ್ನರಿಂಗ್‌ ನರೇಂದ್ರ ಮೋದಿ ಆ್ಯಂಡ್‌ ಬಿಜೆಪಿ ಆನ್‌ ಕೋವಿಡ್‌ ಮ್ಯಾನೇಜ್‌ಮೆಂಟ್‌’ ಎಂಬ ಶೀರ್ಷಿಕೆಯುಳ್ಳ ದಾಖಲೆಯೊಂದನ್ನು ಹಂಚಿಕೊಳ್ಳಲಾಗಿದೆ. ಅವರಿಗೆ ನಿಮ್ಮ ಟ್ವಿಟ್ಟರ್‌ ಖಾತೆಯ ಬಗ್ಗೆ ಮಾಹಿತಿ ನೀಡುವಂತೆ ವಿವರಣೆ ನೀಡಬೇಕೆಂದು ಕೇಳಲಾಗಿದೆ.

ಮೇಲಿನ ಈ ದಾಖಲೆಗಳು ಎಲ್ಲಿಂದ ಸಿಕ್ಕಿವೆ ಎಂಬುದರ ಬಗ್ಗೆ ಹಾಗೂ ಈ ದಾಖಲೆಗಳನ್ನು ಯಾರು ಸ್ವೀಕರಿಸಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ನೀಡುವಂತೆ ಕೇಳಲಾಗಿದೆ.

ಎಐಸಿಸಿ ರಿಸರ್ಚ್‌ ವಿಭಾಗದ ನಕಲಿ ಲೆಟರ್‌ಹೆಡ್‌ಗಳನ್ನು ತಯಾರಿಸಿ ಸುಳ್ಳು ಸುದ್ದಿಗಳನ್ನು ಮುದ್ರಿಸಿ ವಿಷಯ ಹಂಚಿಕೆ ಮಾಡಲಾಗುತ್ತಿದೆ ಎಂದು ಎನ್‌ಎಸ್‌ಯುಐ ಆರೋಪಿಸಿದೆ.

ಮೇ 19ರಂದು ಸಿವಿಲ್‌ ಲೈನ್ಸ್‌ ಪೊಲೀಸ್‌ ಠಾಣೆಯಲ್ಲಿ ರಮಣ್‌ ಸಿಂಗ್‌ ವಿರುದ್ಧ ದೂರು ನೀಡಲಾಗಿದ್ದು ಎಫ್‌ಐಆರ್‌ ದಾಖಲು ಮಾಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *