ಟೆಹರಾನ್ : ಹಲವು ಕಾರಣಗಳಿಗಾಗಿ ಕೊಲೆಗಳು ನಡೆಯುತ್ತವೆ. ಆದರೆ ಈ ಕೊಲೆ ನಿಜಕ್ಕೂ ವಿಚಿತ್ರ. ಮಗ ಮದುವೆ ಆಗಿಲ್ಲ ಎನ್ನುವ ಕಾರಣಕ್ಕೆ ಪೋಷಕರೇ ಸೇರಿಕೊಂಡು ಸ್ವಂತ ಮಗನನ್ನು ಹತ್ಯೆ ಮಾಡಿದ್ದಾರೆ. ಈ ಸುದ್ದಿ ಕೇಳಿ ಎಲ್ಲರೂ ಬೆಚ್ಚಿ ಬೀಳುವಂತಾಗಿದೆ. ಹೀಗೆ ಅಮಾನುಷವಾಗಿ ಕೊಲೆ ಆಗಿರುವುದು ಇರಾನಿನ ಸಿನಿಮಾ ನಿರ್ದೇಶಕ ಬಾಬಕ್ ಖೊರಮ್ದಿನ್. ತಾವು ಮಗನ ಕೊಲೆ ಮಾಡಿರುವುದು ನಿಜ ಎಂದು ತಂದೆ-ತಾಯಿ ಒಪ್ಪಿಕೊಂಡಿದ್ದಾರೆ. ಹತ್ಯೆ ಮಾಡಿದ ಬಳಿಕ ಶವವನ್ನು ತುಂಡುತುಂಡಾಗಿ ಕತ್ತರಿಸಿ ಕಸದ ಬುಟ್ಟಿಗೆ ಎಸೆದಿದ್ದಾರೆ!
ಇರಾನ್ ಮೂಲದ ಬಾಬಕ್ ಖೊರಮ್ದಿನ್ ಲಂಡನ್ನಲ್ಲಿ ವಾಸಿಸುತ್ತಿದ್ದರು. ಟೆಹ್ರಾನ್ ವಿಶ್ವವಿದ್ಯಾಲಯದಲ್ಲಿ ಫಿಲ್ಮ್ ಮೇಕಿಂಗ್ನಲ್ಲಿ ಅವರು ಸ್ನಾತಕೋತ್ತರ ಪದವಿ ಪಡೆದಿದ್ದರು. 47 ವರ್ಷವಾಗಿದ್ದರೂ ಬಾಬಕ್ ಅವರಿಗೆ ಮದುವೆ ಆಗಿರಲಿಲ್ಲ.
🎥 پدر #بابک_خرمدین: از هیچ کدام از قتلهایی که کردم عذاب وجدان ندارم!
کابوسی به سراغم نمیآمد چون احساس گناهی نمیکردم
کسانی که کُشتم فساد اخلاقی بالایی داشتند pic.twitter.com/bV0wMLgVYI
— خبرگزاری تسنیم 🇮🇷 (@Tasnimnews_Fa) May 19, 2021
ಇದೆ ವಿಚಾರವಾಗಿ ಬಾಬಕ್ & ಪೋಷಕರ ನಡುವೆ ಆಗಾಗ ಜಗಳನಡೆಯುತ್ತಿತ್ತು. ‘ಇನ್ನೂ ಮಗನಿಗೆ ಮದುವೆ ಮಾಡಿಲ್ಲ ಎಂದು ಎಲ್ಲರೂ ಕೇಳುತ್ತಿದ್ದರಿಂದ ನಮಗೆ ಅವಮಾನವಾಗುತ್ತಿತ್ತು.
ಮಾತ್ರವಲ್ಲದೇ ನಮಗೆ ಆತ ಕಿರುಕುಳ ನೀಡುತ್ತಿದ್ದ. ನಮ್ಮ ಪ್ರಾಣಕ್ಕೆ ಅಪಾಯವಿತ್ತು. ನಾವು ಸುರಕ್ಷಿತವಾಗಿ ಇರಲಿಲ್ಲ. ಇದೇ ಕಾರಣಕ್ಕೆ ಮಗನನ್ನು ಕೊಲೆ ಮಾಡಿದೆವು. ನಮ್ಮ ಗೌರವವನ್ನು ನಾವು ಇಟ್ಟುಕೊಳ್ಳಲು ಕೊಲೆ ಮಾಡಿದ್ದು, ಯಾವುದೇ ಪಶ್ಚಾತ್ತಾಪ ಇಲ್ಲ’ ಎಂದು ಪಾಲಕರು ಹೇಳಿದ್ದಾರೆ.
2010ರಲ್ಲಿ ಬಾಬಕ್ ಲಂಡನ್ಗೆ ಹೋಗಿದ್ದರು. ನಂತರ ಇರಾನ್ಗೆ ವಾಪಸ್ ಬಂದು ಸಿನಿಮಾ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಬಾಬಕ್ ಕೊಲೆಯನ್ನು ಮರ್ಯಾದಾ ಹತ್ಯೆ ಎಂದು ಪರಿಗಣಿಸಲಾಗುತ್ತಿದೆ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸುವ ಮೂಲಕ ಬಾಬಕ್ ಜನಪ್ರಿಯರಾಗಿದ್ದರು. ಆದರೆ ಅವರ ಜೀವನ ದುರಂತ ಅಂತ್ಯ ಕಂಡಿದೆ ಎಂದು ಇರಾನ್ ಪತ್ರಿಕೆಗಳು ವರದಿ ಮಾಡಿವೆ.